ಜಾಗತಿಕ ತಾಪಮಾನ ಹೆಚ್ಚಳ ಹಲವು ಅವಾಂತರಗಳಿಗೆ ಕಾರಣವಾಗಿದೆ. ಇದರ ಮಧ್ಯೆಯೇ ಅಮೆರಿಕಾದ ಪ್ರಿನ್ಸ್ಟನ್ ವಿವಿ ವಿಜ್ಞಾನಿಗಳು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಸರಣಿ ಚಂಡಮಾರುತಗಳು ಕರಾವಳಿ ಪ್ರದೇಶಗಳಿಗೆ ಅಪ್ಪಳಿಸಲಿದೆ ಎಂಬ ಎಚ್ಚರಿಕೆ ನೀಡಿದ್ದಾರೆ. ತಾಪಮಾನದಲ್ಲಿನ ಹೆಚ್ಚಳ ಹಾಗೂ ಸಮುದ್ರದ ನೀರಿನ ಮಟ್ಟ ಹೆಚ್ಚಳ ಸಂಯೋಜನೆಗೊಂಡು ಭೀಕರ ಚಂಡಮಾರುತಕ್ಕೆ ಹಾದಿ ಮಾಡಿಕೊಡಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
146 ವರ್ಷಗಳಲ್ಲೇ ದಾಖಲೆ ಉಷ್ಣಾಂಶ:
ದೇಶದಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಈ ಬಾರಿ ಸರಾಸರಿ 29.54 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, 146 ವರ್ಷಗಳಲ್ಲೇ ಇದು ಗರಿಷ್ಠವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. 1877ರ ಫೆಬ್ರವರಿಯಲ್ಲಿ ಗರಿಷ್ಠ ತಾಪಮಾನ ದಾಖಲಾಗಿತ್ತು. 1901ರಲ್ಲೂ ತಾಪಮಾನ ಹೆಚ್ಚಾಗಿತ್ತು. ಫೆಬ್ರವರಿಯಲ್ಲಿನ ತಾಪಮಾನ ಏರಿಕೆ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳ ಬಿಸಿ ಏರಿಕೆ ಬಗ್ಗೆ ಸೂಚನೆ ಕೊಡುತ್ತಿದೆ. ಎಂದು ಹವಾಮಾನ ಇಲಾಖೆ ಹೇಳಿದೆ.
ಭಾರೀ ಅಲರ್ಟ್…
ಎಲ್ಲರೂ ಜಾಗ್ರತೆಯಿಂದ ಇರಿ! ರಾಜ್ಯದಲ್ಲಿ ಬಿಸಿಲ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆ ಕೆಲ ಮಾರ್ಗಸೂಚಿ ರಿಲೀಸ್ ಮಾಡಿದೆ. ಮನೆಯಲ್ಲೇ ತಯಾರಿಸಿದ ನಿಂಬೆ ಪಾನಕ, ಮಜ್ಜಿಗೆ, ನೀರು ಕುಡಿಯುತ್ತಿರಬೇಕು. ಹೊರ ಹೋಗುವಾಗ ಸಡಿಲವಾದ ಹತ್ತಿ ಬಟ್ಟೆ ಧರಿಸಿ. ಛತ್ರಿ ಅಥವಾ ಕ್ಯಾಪ್ ಬಳಸಿ.
ಸಣ್ಣ ಮಕ್ಕಳು, ಗರ್ಭಿಣಿಯರು, ಹಿರಿಯ ನಾಗರಿಕರು ಬಿಸಿಲಿನಲ್ಲಿ ಓಡಾಡಬೇಡಿ. ಬಿಸಿಲಿನಲ್ಲಿ ವಾಹನ ನಿಲ್ಲಿಸಿದಾಗ ಮಕ್ಕಳನ್ನು ವಾಹನದೊಳಗೆ ಬಿಡಬೇಡಿ.ಅನಾರೋಗ್ಯ ಉಂಟಾದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.
ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…