ಕೃಷಿ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆ | ಬರಲಿದೆ ನ್ಯಾನೋ ಲಿಕ್ವಿಡ್ ಗೊಬ್ಬರ…!

March 5, 2023
1:27 PM

ಇನ್ನು ಮುಂದೆ ರೈತರಿಗೆ ಗಾಡಿ ಮಾಡಿಕೊಂಡು ಪೇಟೆಗೆ ಹೋಗಿ ಚೀಲಗಟ್ಟಲೆ ಯೂರಿಯಾ, ಡಿಎಪಿ ತರುವ ತಾಪತ್ರೆಯ ಇಲ್ಲ.. ಹಾಗೆ ಕೈ ಬೀಸಿಕೊಂಡು ಹೋಗಿ ಒಂದು ಬಾಟಲ್ ಹಿಡಿದುಕೊಂಡು ಬಂದರೆ ಸಾಕು. ದುಡ್ಡು ಉಳಿತಾಯ, ಸಾಗಾಟ, ಸ್ಥಳ, ಸಮಯ ಎಲ್ಲವೂ ಉಳಿತಾಯ.

ಹೌದು….. ಕೇಂದ್ರ ಸರ್ಕಾರ ಕೈಗೊಂಡಿರುವ ಈ ನಿರ್ಧಾರದಿಂದ ರೈತರಿಗೆ ಅನುಕೂಲವಾಗಲಿದೆ. ಒಂದು ಬ್ಯಾಗ್ ಡಿಎಪಿ ರೂ.1350 ಆಗಿದ್ದರೆ ಅದಕ್ಕೆ ಸಮಾನವಾದ 500 ಎಂಎಲ್ ಲಿಕ್ವಿಡ್ ಡಿಎಪಿ ರೂ.600ಕ್ಕೆ ಲಭ್ಯವಾಗಲಿದೆ. ದೇಶದ ರೈತರಿಗೆ ಪ್ರಧಾನಿ ಮೋದಿ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಇತ್ತೀಚಿನ ದಿನಗಳಲ್ಲಿ ರಸಗೊಬ್ಬರಗಳ ಬಳಕೆ ಹೆಚ್ಚಾಗಿರುವುದರಿಂದ ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗೊಬ್ಬರ ಚೀಲಗಳಿಗಾಗಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮಹತ್ವದ ನಿರ್ಧಾರ ಕೈಗೊಂಡಿದೆ.

ಆ ಹಿನ್ನೆಲೆಯಲ್ಲಿ ನ್ಯಾನೋ ಯೂರಿಯಾವನ್ನು 2021 ರಲ್ಲಿ ತರಲು ಕೇಂದ್ರವು ಹಲವಾರು ಪ್ರಯತ್ನಗಳನ್ನು ಮಾಡಿತ್ತು. ಇಫ್ಕೋ ತಯಾರಿಸಿದ ಲಿಕ್ವಿಡ್ ನ್ಯಾನೊ-ಯೂರಿಯಾವನ್ನು ಮಾರುಕಟ್ಟೆಯಲ್ಲಿ ಪರಿಚಯಿಸಲು ಅನುಮೋದನೆ ನೀಡಲಾಗಿತ್ತು.

ಅದರ ನಂತರ, ಈ ನ್ಯಾನೊ ಯೂರಿಯಾವನ್ನು ಮಾರುಕಟ್ಟೆಗೆ ತರಲಾಯಿತು. ಅಲ್ಲದೆ ಮುಂಬರುವ ಮಳೆಗಾಲವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ರಸಗೊಬ್ಬರ ಬಳಕೆಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಮುಂದಿನ ದಿನಗಳಲ್ಲಿಯೂ ನ್ಯಾನೊ ಲಿಕ್ವಿಡ್ ಡಿಎಪಿ ತರಲು ಕೇಂದ್ರ ಒಪ್ಪಿಗೆ ನೀಡಿದೆ.

ಈ ವಿಷಯವನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಮನ್ ಸಖ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ. ನ್ಯಾನೋ ಯೂರಿಯಾ ನಂತರ ನ್ಯಾನೋ ಡಿಎಪಿಗೂ ಅನುಮೋದನೆ ನೀಡಲಾಗಿದೆ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಮಾಂಡವೀಯ ಹೇಳಿದರು.

ಒಂದು ಡಿಎಪಿ ಚೀಲದ ಬೆಲೆ 1350 ರೂ. ಆದರೆ ದ್ರವರೂಪದಲ್ಲಿ ಬರುತ್ತಿರುವ 500 ಎಂಎಲ್ ಡಿಎಪಿಯನ್ನು 600 ರೂ.ಗೆ ನಿಗದಿಪಡಿಸಲಾಗಿದೆ. 500 ಮಿಲಿ ದ್ರವ ಡಿಎಪಿ ಒಂದು ಚೀಲ ಡಿಎಪಿಗೆ ಸಮ. ನ್ಯಾನೋ ಯೂರಿಯಾ ತಯಾರಕರಾದ IFFCO ಈ ನ್ಯಾನೋ ಲಿಕ್ವಿಡ್ DAP ಅನ್ನು ತಯಾರಿಸುತ್ತದೆ. ದೇಶದಲ್ಲಿ ಯೂರಿಯಾ ನಂತರ ಹೆಚ್ಚು ಬಳಕೆಯಾಗುವ ಗೊಬ್ಬರ ಡಿಎಪಿ.

ಸರ್ಕಾರ ನ್ಯಾನೋ ಯೂರಿಯಾಕ್ಕೆ ಸಬ್ಸಿಡಿ ನೀಡುತ್ತಿಲ್ಲ. ನ್ಯಾನೊ ಲಿಕ್ವಿಡ್ ಯೂರಿಯಾ ಪ್ರತಿ ಬಾಟಲಿಗೆ 240 ರೂ. ಅದೇ ಯೂರಿಯಾ ಚೀಲ 280 ರೂ. ಅಲ್ಲದೆ, ಒಂದು ಬ್ಯಾಗ್ ಡಿಎಪಿ ರೂ.1350 ಆಗಿದ್ದರೆ ಅದಕ್ಕೆ ಸಮಾನವಾದ 500 ಎಂಎಲ್ ಲಿಕ್ವಿಡ್ ಡಿಎಪಿ ರೂ.600ಕ್ಕೆ ಲಭ್ಯವಾಗಲಿದೆ. ಕೇಂದ್ರ ಸರ್ಕಾರ ಕೈಗೊಂಡಿರುವ ಈ ನಿರ್ಧಾರದಿಂದ ರೈತರಿಗೆ ಅನುಕೂಲವಾಗಲಿದೆ.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆ ಏರಿಕೆ ಮಾಡಲು ಸರ್ಕಾರ ಚಿಂತನೆ
March 14, 2025
10:57 PM
by: The Rural Mirror ಸುದ್ದಿಜಾಲ
ಒಂದು ವರ್ಷದಲ್ಲಿ 10 ಲಕ್ಷ ಮನೆಗಳಿಗೆ ಸೌರ ಫಲಕ
March 14, 2025
6:57 AM
by: The Rural Mirror ಸುದ್ದಿಜಾಲ
ನಂದಿನಿ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ
March 14, 2025
6:54 AM
by: The Rural Mirror ಸುದ್ದಿಜಾಲ
ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳು | ಒಂದು ವರ್ಷದಲ್ಲಿ 22 ಸಾವಿರ ಸೈಬರ್ ಪ್ರಕರಣ ದಾಖಲು |
March 14, 2025
6:51 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror