ಭೂಮಿ ಇಂದು ಭಾರಿ ಪರಿಸರ ಸಂಕಷ್ಟವನ್ನು ಎದುರಿಸುತ್ತಿರುವಾಗ, ಅದನ್ನು ಕೇವಲ ಹವಾಮಾನ ಬದಲಾವಣೆ ಅಥವಾ ಹವಾಮಾನ ಸಂಕಷ್ಟ ಎಂದು ನೋಡುವುದಕ್ಕಿಂತ, ಇದು “ ಪರಿಸರ ಅಪರಾಧ” ಎಂದು ಪರಿಗಣಿಸಬೇಕಾದ ಅಗತ್ಯವಿದೆ ಎಂಬ ಸಂದೇಶವನ್ನು ಹೊಂದಿರುವ ಹೊಸ ಪುಸ್ತಕ “Green Crime: Inside the Minds of the People Destroying the Planet” ನೀಡುತ್ತದೆ. ಈ ಪುಸ್ತಕವನ್ನು ಮನೋವಿಜ್ಞಾನಿ ಡಾ. ಜೂಲಿಯಾ ಶಾ ರಚಿಸಿದ್ದು, ಪರಿಸರವನ್ನು ಉದ್ದೇಶಪೂರ್ವಕವಾಗಿ ಹಾನಿಗೊಳಿಸುವವರ ಮನೋಭಾವವನ್ನು ಈ ಪುಸ್ತಕ ವಿಶ್ಲೇಷಿಸುತ್ತದೆ. ಇದು ಕೇವಲ ಪರಿಸರ ಸಮಸ್ಯೆಗಳ ವಿವರಣೆ ಅಲ್ಲ; “ಯಾರು, ಏಕೆ, ಹೇಗೆ” ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವಾಗಿದೆ.
ಪರಿಸರ ಅಪರಾಧ ಎಂದರೇನು? : ಪರಿಸರಕ್ಕೆ ಹಾನಿ ಮಾಡುವ ಅನೇಕ ಕ್ರಿಯೆಗಳು ಕಾನೂನುಬಾಹಿರವಾಗಿದ್ದು, ಇವುಗಳನ್ನು “Green Crime” ಅಥವಾ “ಪರಿಸರ ಅಪರಾಧ” ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಅಕ್ರಮ ಅರಣ್ಯ ನಾಶ, ವನ್ಯಜೀವಿ ಕಳ್ಳಗಾರಿಕೆ, ಅಕ್ರಮ ಮೀನುಗಾರಿಕೆ, ವಿಷಕಾರಿ ತ್ಯಾಜ್ಯ ವಿಸರ್ಜನೆ,ತೈಲ ಸೋರಿಕೆ ಇವುಗಳು ಮಾನವ ಆರೋಗ್ಯಕ್ಕೂ, ಜೈವ ವೈವಿಧ್ಯತೆಯಿಗೂ ದೊಡ್ಡ ಅಪಾಯವನ್ನು ಉಂಟುಮಾಡುತ್ತವೆ.
ಅಪರಾಧಿಗಳ ಮನೋವಿಜ್ಞಾನ – 6 ಮುಖ್ಯ ಕಾರಣಗಳು : ಈ ಪುಸ್ತಕದಲ್ಲಿ ಮೂಲಕ ಪರಿಸರ ಅಪರಾಧಿಗಳ ಪ್ರಮುಖ 6 ಮನೋಭಾವವನ್ನು ವಿವರಿಸಲಾಗಿದೆ. ಅವುಗಳಲ್ಲಿ ಸುಲಭ ದಾರಿಗಳು, ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಧೈರ್ಯ , ಲೋಭ , ಸ್ವಯಂ ಸಮರ್ಥನೆ , ಇತರರ ಅನುಕರಣ, ತನ್ನದಲ್ಲ ಎನ್ನುವ ಭಾವನೆ.. ಈ ಅಂಶಗಳನ್ನು ಅರ್ಥಮಾಡಿಕೊಂಡರೆ ಪರಿಸರ ಅಪರಾಧಗಳನ್ನು ತಡೆಯಲು ಸಾಧ್ಯ ಎಂದು ಲೇಖಕಕರು ಹೇಳುತ್ತಾರೆ.
ಜಾಗತಿಕ ಮಟ್ಟದ ದೊಡ್ಡ ಪ್ರಕರಣಗಳು : ಈ ಪುಸ್ತಕದಲ್ಲಿ ಕೆಲವು ಪ್ರಮುಖ ಪರಿಸರ ಅಪರಾಧಗಳ ಉದಾಹರಣೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಅಕ್ರಮ ಪರಿಸರ ವ್ಯಾಪಾರ, ತೈಲ ಸೋರಿಕೆ, ಅಕ್ರಮ ಗಣಿಗಾರಿಕೆ ಮತ್ತು ಮೀನುಗಾರಿಕೆ… ಇವುಗಳು ಕೇವಲ ಪರಿಸರ ಸಮಸ್ಯೆಗಳಲ್ಲ, ದೊಡ್ಡ ಮಟ್ಟದ ಆರ್ಥಿಕ ಮತ್ತು ಸಂಘಟಿತ ಅಪರಾಧಗಳ ಭಾಗವಾಗಿವೆ.
ಪರಿಸರ ಅಪರಾಧದ ಆರ್ಥಿಕ ಪ್ರಮಾಣ : ಜಾಗತಿಕ ಮಟ್ಟದಲ್ಲಿ ಪರಿಸರ ಅಪರಾಧಗಳು ವರ್ಷಕ್ಕೆ ಸುಮಾರು $110 ರಿಂದ $281 ಬಿಲಿಯನ್ ವರೆಗೆ ಲಾಭ ತರುತ್ತವೆ ಎಂದು ಅಂದಾಜಿಸಲಾಗಿದೆ. ಇದು ವಿಶ್ವದ ದೊಡ್ಡ ಅಕ್ರಮ ವ್ಯವಹಾರಗಳಲ್ಲಿ ಒಂದಾಗಿದೆ.
ಪರಿಹಾರ ಏನು? : ಪುಸ್ತಕದ ಮುಖ್ಯ ಸಂದೇಶವೇನೆಂದರೆ, ಪರಿಸರ ನಾಶವು “ಸಾಮಾನ್ಯ ಸಮಸ್ಯೆ” ಅಲ್ಲ, ಅದು “ಅಪರಾಧ” ಎಂದು ಪರಿಗಣೆಯಾಗಬೇಕು. ಅಪರಾಧಿಗಳ ಮನೋಭಾವವನ್ನು ಅರ್ಥಮಾಡಿಕೊಳ್ಳಬೇಕು ಹಾಗೂ ಕಾನೂನು ಜಾರಿಯನ್ನು ಬಲಪಡಿಸಬೇಕು. ವಿಜ್ಞಾನಿಗಳು, ಪೊಲೀಸ್, ವಕೀಲರು ಒಟ್ಟಾಗಿ ಪರಿಸರಕ್ಕಾಗಿ ಕೆಲಸ ಮಾಡಬೇಕು. ಇದಲ್ಲದೆ, ಪರಿಸರವನ್ನು ರಕ್ಷಿಸುವ ಪರಿಸರ ಪ್ರಿಯರು, ತನಿಖಾಧಿಕಾರಿಗಳು, ವಿಜ್ಞಾನಿಗಳು – ಇವರ ಪಾತ್ರವೂ ಬಹಳ ಮುಖ್ಯವಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
The book “Green Crime” by Dr. Julia Shaw explores the psychology behind environmental criminals and explains why people knowingly destroy the planet. It highlights six key factors driving such crimes and examines major global cases like illegal deforestation, oil spills, and wildlife trafficking. The book emphasizes that understanding criminal behavior is key to preventing environmental destruction.

