ಮಲೆನಾಡಿನಲ್ಲಿ ಹಸಿರು ಕಪ್ಪೆಗಳು ಪತ್ತೆ| ವಿಶೇಷ ರೀತಿಯಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆ!

March 30, 2022
2:03 PM

ಚಿಕ್ಕಮಗಳೂರು ಮಲೆನಾಡು ಭಾಗದಲ್ಲಿ ಅತ್ಯಂತ ವಿಶೇಷವಾದಂತಹ ಹಸಿರು ಕಪ್ಪೆಗಳು ಪತ್ತೆಯಾಗಿವೆ. ಮಲೆನಾಡಿನಲ್ಲಿ ಮೇ-ಜೂನ್ ತಿಂಗಳಿನ ಮಳೆಗಾಲದಲ್ಲಿ ಮಾತ್ರ ಈ ಹಸಿರು ಕಪ್ಪೆಗಳು ಕಾಣಸಿಗುತ್ತವೆ. ಇದು ತೇವಾಂಶ ಅಧಿಕವಾಗಿರುವ ಮಳೆಕಾಡಿನಲ್ಲಿ ಕಾಣಸಿಗುವ ಕಪ್ಪೆಯ ಒಂದು ಪ್ರಭೇದವಾಗಿದೆ.

ಮಲೆನಾಡಿನಲ್ಲಿ ಪ್ರಾರಂಭದ ಮಳೆ ಬಿದ್ದಾಗ ಹಸಿರು ಕಪ್ಪೆಗಳ ಚಟುವಟಿಕೆಗಳು ನೀರು ಇರುವ ಜಾಗದಲ್ಲಿ ಶುರುವಾಗುತ್ತದೆ. ಉಳಿದ ದಿನಗಳಲ್ಲಿ ಕಾಣ ಸಿಗುವುದಿಲ್ಲ. ತಂಪಾದ ಜಾಗದಲ್ಲಿ ಹೋಗಿ ಮರ – ಗಿಡಗಳ ಸಂಧಿಯಲ್ಲಿ  ವಾಸಿಸುತ್ತವೆ. ಮೊದಲ ಮಳೆ ಪ್ರಾರಂಭವಾಗುತ್ತಿದ್ದ ಹಾಗೆ ನೀರಿರುವ ಜಾಗದಲ್ಲಿ ಬಂದು ಸಂತಾನೋತ್ಪತ್ತಿಗಾಗಿ ಸೇರುವುದು ವಿಶೇಷವಾಗಿದೆ.

ಈ ಹಸಿರು ಕಪ್ಪೆಯ ಇನ್ನೊಂದು ವಿಶೇಷ ಏನೆಂದರೆ, ಮಿಲನ ಪ್ರಕ್ರಿಯೆ ಇಲ್ಲದೇ ಬಾಹ್ಯದಲ್ಲಿ ಸಂತಾನೋತ್ಪತ್ತಿ ಕ್ರಿಯೆ ಜರಗುವ ಅಪರೂಪದ ಸಂಗತಿ ಘಟಿಸುತ್ತದೆ. ನೀರು ಇರುವ ಜಾಗವನ್ನು ಆಯ್ಕೆ ಮಾಡಿ ತನ್ನ ಮೊಟ್ಟೆಯನ್ನ ನೊರೆ ರೂಪದಲ್ಲಿ ಗೂಡು ಇಡುತ್ತದೆ. ನಂತರದ ದಿನಗಳಲ್ಲಿ ಅದು ಕರಗಿ ನೀರಿಗೆ ಬಿದ್ದು ಅಲ್ಲಿ ಮರಿಗಳಾಗುವುದು ವಿಶೇಷ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

25 ಸಾವಿರ ವರ್ಷಗಳ ಹಿಂದೆಯೇ ಅಡಿಕೆ ಬಳಕೆ ? ಪುರಾತನ ಹಲ್ಲುಗಳಲ್ಲಿ ಸಿಕ್ಕಿದ ಸುಳಿವು
September 16, 2026
11:09 PM
by: ದ ರೂರಲ್ ಮಿರರ್.ಕಾಂ
“ಹನುಮಾನ್ ಅಂಶ್‌” ಬಾಕ್ಸ್ ಆಫೀಸ್ ದಾಖಲೆ – 40ನೇ ದಿನವೂ ₹8.25 ಕೋಟಿ – ಪಠಾಣ್‌, ಛಾವಾ, ಉರಿ ದಾಖಲೆ ಮೀರಿಸಿದ ಸಿನಿಮಾ
September 16, 2026
9:14 PM
by: ದ ರೂರಲ್ ಮಿರರ್.ಕಾಂ
ಮುಂಗಾರು ಹಿಂದೆ ಸರಿಯಲು ಸಜ್ಜು – ಸೆ.17ರಿಂದ ಪಶ್ಚಿಮ ರಾಜಸ್ಥಾನದಲ್ಲಿ ಆರಂಭವಾಗುವ ಸಾಧ್ಯತೆ
September 16, 2026
3:41 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 16-09-2026 | ಕರಾವಳಿಯಲ್ಲಿ ಸೆಖೆ, ಸಂಜೆ ಅಲ್ಲಲ್ಲಿ ಮಳೆ ನಿರೀಕ್ಷೆ
September 16, 2026
2:18 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror