ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಬುಧವಾರ (ಮಾರ್ಚ್ 30) ಗ್ರೀನ್ ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಸತ್ ಗೆ ಆಗಮಿಸಿದ್ದಾರೆ.
ಟೊಯೊಟೊ ಮಿರ್ರೈ ವಾಹನವು ಹೈಡ್ರೋಜನ್ ಇಂಧನ ಸೆಲ್ ಬ್ಯಾಟರಿ ಪ್ಯಾಕ್ ನಿಂದ ಚಾಲಿತವಾಗಿದ್ದು, ಇದು ಒಂದು ಗಂಟೆಯ ಚಾರ್ಜ್ ನಲ್ಲಿ 600 ಕಿಲೋ ಮೀಟರ್ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಪ್ರತಿ ಕಿಲೋ ಮೀಟರ್ ಸಂಚಾರಕ್ಕೆ ಕೇವಲ 2 ರೂಪಾಯಿ ವೆಚ್ಚವಾಗಲಿದೆ.
ಭಾರತದ ಮೊದಲ ಪರಿಸರ ಸ್ನೇಹಿ ಹೈಡ್ರೋಜನ್ ಚಾಲಿತ ಕಾರು ಇದಾಗಿದ್ದು, ಈ ಕಾರಿನ ವೈಶಿಷ್ಟ್ಯತೆಯನ್ನು ತಿಳಿಸುವ ನಿಟ್ಟಿನಲ್ಲಿ ಸಂಸತ್ ಗೆ ಆಗಮಿಸಿರುವುದಾಗಿ ಸಚಿವ ಗಡ್ಕರಿ ಮಾಹಿತಿ ನೀಡಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel