ಹಸಿರು ಕ್ರಾಂತಿಯ ಪರಿಣಾಮಗಳಿಗೆ ಸ್ವಾಮಿನಾಥನ್ ಅವರು ಹೊಣೆಯಲ್ಲ. ಅವರು ಅಂದಿನ ದೇಶದ ಸಮಸ್ಯೆಯಾದ ಹಸಿವನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನವನ್ನೇ ಮಾಡಿದರು. ಆದರೆ ಈಗ ಹಿಂತಿರುಗಿ ನೋಡಿದರೆ ನರಕದಂತೆ ಕಂಡು ಬರುವ ಗ್ರಾಮೀಣ ಭಾರತದ ಬದುಕಿಗೆ ಹಸಿರು ಕ್ರಾಂತಿಯ ಅಂತರ್ಗತ ಲಾಭೋದ್ದೇಶದ ಆಸಕ್ತಿ ಕಾರಣ ಎಂದು ಪಶ್ಚತ್ತಾಪ ಪಟ್ಟಿರಬಹುದೇ ಎಂಬ ಬಗ್ಗೆ ಮಾತ್ರ ಯಾವುದೇ ಸಾರ್ವಜನಿಕ ಮಾಹಿತಿಯಿಲ್ಲ.
ಹಾಗೆಯೇ ಹಸಿರು ಕ್ರಾಂತಿಯ ಯಶಸ್ಸಿಗಾಗಿ ಅಂತರ ರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ರೂಪಿಸಿದ ಹೊಸ ಸರ್ಕಾರಿ ಮತ್ತು ಖಾಸಗಿ-ಸರ್ಕಾರಿ ಸಹಯೋಗಿ ಸಂಸ್ಥೆಗಳು ಹೇಗೆ ಇತರ ಪರ್ಯಾಯ ಸಾಧ್ಯತೆಗಳೆನ್ನೆಲ್ಲಾ ತಿರಸ್ಕರಿಸಿ ಅಮೇರಿಕ ಕಾರ್ಪೊರೇಟು ನಿರ್ದೇಶಿತ ಪ್ರಯೋಗ ಮತ್ತು ಕಾರ್ಯಕ್ರಮಗಳನ್ನು ಮಾತ್ರ ಜಾರಿ ಮಾಡಿದವು ಮತ್ತು ತಮ್ಮ ಯೋಜನೆಯನ್ನು ಅನುಮಾನಿಸುವ ಪರಿಣಿತರನ್ನು ಕಿತ್ತುಹಾಕಿ , ತಮ್ಮ ವಿಶ್ವಾಸಿಗಳನ್ನು ಮಾತ್ರ ಕೀಲಕ ಸ್ಥಾನದಲ್ಲಿ ನೇಮಿಸಿದರು ಎಂಬುದನ್ನು ಕೂಡ ಈ ಸಂದರ್ಭದಲ್ಲಿ ಕೂಲಂಕಷವಾಗಿ ವಿಮರ್ಶಿಸುವ ಅಗತ್ಯವಿದೆ. ಏಕೆಂದರೆ ಆ ಹುದ್ದೆಗಳು ವ್ಯಕ್ತಿಗಳ ಪರಿಣಿತಿಯ ಮಾನದಂಸ್ದದ ಜೊತೆಗೆ ರಾಜಕೀಯ ಆಯ್ಕೆಯೂ ಆಗಿದ್ದವು..
ಈ ಅಂತರ ರಾಷ್ಟ್ರೀಯ “ಸಂಶೋಧನಾ” ಸಂಸ್ಥೆಗಳು ಪಾಶ್ಚಿಮತ್ಯ ದೈತ್ಯ ಕಾರ್ಪೊರೇಟು ಕಂಪನಿ#corporate companyಗಳು ಭಾರತದ ಸಹಸ್ರಾರು ಸ್ಥಳೀಯ ಧಾನ್ಯ ತಳಿಗಳನ್ನು ಹಗಲು ದರೋಡೆ ಮಾಡಲು ಪೂರಕವಾದವು… ಪ್ರಾರಂಭದಲ್ಲಿ ಅಂತಹ ಕೆಲವು ಸಂಸ್ಥೆಗಳು ಜಗತ್ತಿಗೆ ಉಪಕಾರ ಮಾಡುತ್ತಿವೆ ಎಂಬ ಸಾರ್ವತ್ರಿಕಾ ತಿಳವಳಿಕೆಯೇ ಸ್ವಾಮಿನಾಥಾನ್ ಅವರಿಗೂ ಇತ್ತು… ಅಂತಹ ಹಲವು ಸಂಸ್ಥೆಗಳ ಮುಖ್ಯಸ್ಥರಾಗಿಯೂ ಅವರು ಕೆಲಸ ಮಾಡಿದ್ದರು. ಸ್ವಾಮಿನಾಥನ್ ಅವರು ಕೇವಲ ಹಸಿರು ಕ್ರಾಂತಿಯ ಬಗೆಗೆ ಮಾತ್ರವಲ್ಲದೆ ನಂತರದ ದಿನಗಳಲ್ಲಿ ನಿರಂತರ ಹಸಿರು ಕ್ರಾಂತಿಯ ಬಗೆಗೆ ಮತ್ತು ಈ ಶತಮಾನದಲ್ಲಿ ಉತ್ಪಾದನೆಯನ್ನು ಹೆಚ್ಚಿಸುವ ಜೆನೆಟಿಕಲ್ ಮಾಡಿಫೈಡ್ – ಕುಲಾಂತರಿ ತಂತ್ರಜ್ನಾದ ಪ್ರತಿಪಾದಕರಾಗಿದ್ದರು. ಈ ತಂತ್ರಜ್ಞಾನವು ಪರಿಸರದ ಮೇಲೆ, ಮಣ್ಣಿನ ಮೇಲೆ ಮತ್ತು ಭೂಹೀನ ಮಣ್ಣಿನ ಮಕ್ಕಳ ಮೇಲೆ ಮಾಡಬಹುದಾದ ದುಷ್ಪರಿಣಾಮದ ಆಯಾಮಗಳನ್ನು ಸ್ವಾಮಿನಾಥನ್ ಅವರು ಉತ್ಪಾದನೆಯ ಹೆಚ್ಚಳದಷ್ಟು ಗಂಭೀರವಾಗಿ ಪರಿಗಣಿಸದಂತೆ ಕಾಣುವುದಿಲ್ಲ.
ವಾಸ್ತವದಲ್ಲಿ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯವಿದ್ದರೆ ಸಾಕು ಉತ್ಪಾದನಾ ಮಾದರಿ ಮತ್ತು ತಂತ್ರಜ್ಞಾನ ಮಾದರಿ ಬಂಡವಾಳ ಶಾಹಿ ಆಗಿದ್ದರೂ ಪರವಾಗಿಲ್ಲ ಎಂಬ ಇಂಥಾ ತಿಳವಳಿಕೆ ಇಂದಿನ ಬಹುಪಾಲು ಎಡಪಂತಿಯರಲ್ಲು ವ್ಯಾಪಾಕವಾಗಿದೆ… ಅದು ಹೇಗೆ ಹಗಲುಗುರುಡಿನ ಗ್ರಹಿಕೆ ಎಂಬುದಕ್ಕೆ ಹಸಿರು ಕ್ರಾಂತಿಯ ವಿನಾಶಕಾರಿ ಪರಿಣಾಮಗಳೇ ಸಾಕ್ಷಿ. ಈ ಉತ್ಪಾದನೆ ಹೆಚ್ಚಳ -ಅರ್ಥಾತ್ ಇದರ ಹಿಂದಿನ ಬೀಜ, ಒಳಸುರಿ ಮತ್ತು ಕೃಷಿ ಮಾರುಕಟ್ಟೆ ದೈತ್ಯಕಾರ್ಪೊರೇಟ್ ಕಂಪನಿಗಳ ಲಾಭದ ವಿಜ್ಞಾನ -ರಾಜಕೀಯ ಮೇಲುಗೈ ಪಡೆದು ಇತರ ಪರ್ಯಾಯಗಳು ಮತ್ತು ಅದನ್ನು ಪ್ರತಿಪಾದಿಸುತ್ತಿದ್ದವರು ಸದ್ದಿಲ್ಲದೇ ಹಿನ್ನೆಲೆಗೆ ಸರಿದದ್ದನ್ನು ಇಂದು ಈ ಸಂದರ್ಭದಲ್ಲಿ ನೆನೆಪು ಮಾಡಿಕೊಳ್ಳಬೇಕಿದೆ. ಏಕೆಂದರೆ ಇವತ್ತು ಮತ್ತೆ BAYER-Monsanto ದಂಥ ಬೃಹತ್ ಕೃಷಿ ಬಹುರಾಷ್ಟ್ರೀಯ ಕಂಪನಿಗಳು ಎರಡನೇ ಮತ್ತು ನಿರಂತರ ಹಸಿರು ಕ್ರಾಂತಿಯ ಹೆಸರಲಿ ಭಾರತದ ಕೃಷಿಯ ಭವಿಷ್ಯವನ್ನು ಕಬ್ಜಾ ಮಾಡಿಕೊಳ್ಳಲು ಹವಣಿಸುತ್ತಿವೆ.
ಮತ್ತೊಂದೆಡೆ ಅಮೇರಿಕ ಮತ್ತು ಐರೋಪ್ಯ ಒಕ್ಕೊಟಗಳು ಭಾರತದಂಥ ಬಡರಾಷ್ಟ್ರಗಳ ಮೇಲೆ Global Methane Pledgeಗೆ ಸಹಿ ಹಾಕಲು ಒತ್ತಡ ಹೆಚ್ಚಿಸುತ್ತಿವೆ. ಅವುಗಳ ಪ್ರಕಾರ ಜಾಗತಿಕ ತಾಪಮಾನ ಹೆಚ್ಛಿಸುತ್ತಿರುವ ಹಸಿರು ಮನೆ ಅನಿಲಗಳಲ್ಲಿ ಒಂದಾದ ಮೀಥೇನ್ ನ ಶೇ. 40 ರಷ್ಟು ಉತ್ಪಾದನೆ ಕೃಷಿಯಿಂದ ಅದರಲ್ಲೂ ಭತ್ತ ಉತ್ಪಾದನೆಯಿಂದ ಆಗುತ್ತಿದೆಯಂತೆ. ಹೀಗಾಗಿ ಭತ್ತ ಉತ್ಪಾದನೆಯನ್ನು ಕಡಿಮೆ ಮಾಡಲು ಒತ್ತಡ ಹಾಕುತ್ತಿದೆ. ಅದಕ್ಕೆ ತಕ್ಕಂತೆ ಮೋದಿ ಸರ್ಕಾರ ಜಗತ್ತಿಗೆ ತಾನು ಸಿರಿ ಧಾನ್ಯ ಉತ್ಪಾದನೆ ಮಾಡುವುದಾಗಿ ಘೋಷಿಸಿದೆ. ಅದರ ಸಾಧ್ಯತೆ ಮತ್ತು ಪರಿಣಾಮಗಳ ಯೋಚನೆ ಮಾಡದೆ ಆಗಲೇ ಅದಕ್ಕೆ ಕಾರ್ಪೊರೇಟ್ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.
ಹೀಗೆ ಈ ಕಾಲಘಟ್ಟದಲ್ಲಿ ಮತ್ತೊಮ್ಮೆ ಭಾರತದ ಕೃಷಿ ಎರಡನೇ ಹಸಿರು ಕ್ರಾಂತಿಯ ಹೆಸರಲ್ಲಿ, ಜೆನೆಟಿಕಲ್ ಮಾಡಿಫೈಡ್ – ಕುಲಾಂತರಿ ತಳಿ ಉತ್ಪಾದನೆ ಯಾ ಹೆಸರಲ್ಲಿ, ಕಾರ್ಪೊರೇಟ್ ಮಾರುಕಟ್ಟೆಗೆ ಸಿರಿಧಾನ್ಯ ಉತ್ಪಾದನೆ ಮಾಡುವ ತಂತ್ರೋಪಾಯಗಳಲ್ಲಿ ಶ್ರೀಮಂತ ರಾಷ್ಟ್ರಗಳ ಕಾರ್ಪೊರೇಟ್ ಬಂಡವಾಳಶಾಹಿ ಜಾಲಕ್ಕೆ ಸಿಲುಕಿಕೊಳ್ಳುತ್ತಿದೆ. ಮೊದಲ ಹಸಿರು ಕ್ರಾಂತಿ ಹೇಗೆ ಉತ್ಪಾದನೆ ಹೆಚ್ಚಳದ ತಾಂತ್ರಿಕ ಪರಿಹಾರವನ್ನು ಮುಂದುಮಾಡಿ ಭಾರತದ ಕೃಷಿ ವ್ಯವಸ್ಥೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ರೈತಾಪಿಗಳನ್ನು ಮತ್ತು ಭಾರತದ ಕೃಷಿ ಪರಿಸರವನ್ನು ವಿನಾಶದತ್ತ ಕೊಂಡೊಯ್ಯಿತು ಎಂಬ ಅನುಭವ ಈ ದೇಶಕ್ಕಿದೆ.
ಈಗ ಭಾರತ ಮತ್ತೊಮ್ಮೆ ಉತ್ಪಾದನೆಯ ಹೆಚ್ಚಳ ವೆಂಬ ಪಾಶ್ಚಿಮಾತ್ಯ ಕಾರ್ಪೊರೇಟ್ ತಂತ್ರ ಜಾಲದ ಅಪಾಯವನ್ನು ಎದುರಿಸುತ್ತಿದೆ. ಭಾರತಕ್ಕೆ , ಕೃಷಿಗೆ ಮತ್ತು ರೈತಾಪಿಗೆ ಬೇಕಿರುವುದು ಕಾರ್ಪೊರೇಟ್ ಬಂಡವಾಳಶಾಹಿ ನಿಯಂತ್ರಿತ ತಾಂತ್ರಿಕ ಪರಿಹಾರವಲ್ಲ. ಸಮಗ್ರ ಉತ್ಪಾದನೆ ಮಾದರಿ, ತಂತ್ರಜ್ಞಾನಗಳಲ್ಲೂ ಜನಮುಖಿ ಕೃಷಿ, ರೈತ ಮತ್ತು ದೇಶದ ಸಾರ್ವಭೌಮತೆ ಕಾಪಾಡುವ, ಅವರ ವಿವೇಕ ಮತ್ತು ಜ್ಞಾವನ್ನು ಗೌರವಿಸುವ, ಜನಹಿತದ ರಾಜಕೀಯ ಉಳ್ಳ . ಪರಿಸರ ಭಾಗೀ ಕೃಷಿ ವ್ಯವಸ್ಥೆ ..
ಹೀಗಾಗಿ ಇಂದು ಮೊದಲ ಹಸಿರು ಕ್ರಾಂತಿಯ ರಾಜಕೀಯ, ಕೃಷಿ ಆರ್ಥಿಕ, ಹಾಗೂ ಪರಸರವಾದಿ ಪಾಠಗಳನ್ನು ಸಮಗ್ರವಾಗಿ ಕಲಿತು ಬೇಡವಾದದ್ದನ್ನು ಬೇಡ ಎಂದು ನಿರಾಕರಿಸುವ ಸ್ವಾಯತ್ತತೆ ಯನ್ನು ಬೆಳೆಸಿಕೊಳ್ಳುವ ಮೂಲಕ ಮಾತ್ರ…. ಸ್ವಾಮಿನಾಥನ್ ಅವರಿಗೆ ನಿಜವಾದ ನಮನ ಸಲ್ಲಿಸಬಹುದು. ಈ ಹಿನ್ನೆಲೆಯಲ್ಲಿ ಮೊದಲ ಹಸಿರು ಕ್ರಾಂತಿಯ ಹರಿಕಾರ ಎಂದು ಕರೆಸಿಕೊಳ್ಳಲ್ಪಡುವ ನೋರ್ಮಾನ್ ಬೋರ್ಲಾಗ್ ನಿಧನರಾದಾಗ ಅವರ ಬಗ್ಗೆ ಮತ್ತು ಹಸಿರು ಕ್ರಾಂತಿಯ ಹಿಂದಿನ ನವ ವಸಾಹತುಶಾಹಿ ಹುನ್ನಾರಗಳ ಬಗ್ಗೆ 2009 ರ ಸೆಪ್ಟೆಂಬರ್ ನಲ್ಲಿ “ಗೌರಿ ಲಂಕೇಶ್ ” ಪತ್ರಿಕೆಗೆ ಬರೆದ ಲೇಖನವೊಂದನ್ನು ಹಂಚಿಕೊಳ್ಳಬೇಕೆನಿಸಿತು..
ಮುಂದುವರೆಯುವುದು…
ಬರಹಗಾರರು – ಶಿವಸುಂದರ್, 9448659774
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…