ಸುಳ್ಯ ಸ್ನೇಹ ಶಾಲೆಯಲ್ಲಿ ಪರಿಸರ ಸಂವಹನ ಸರಣಿ ಕಾರ್ಯಕ್ರಮ ಉದ್ಘಾಟನೆ | ಅರಣ್ಯನಾಶದ ತಡೆಗೆ ಹಸಿರು ಶಾಲೆಗಳು ಬೇಕು – ಪರಿಸರ ತಜ್ಞ ಅರುಣ್ ಕಶ್ಯಪ್

August 19, 2024
11:01 AM

ಒಂದೆಡೆ ರೈತರು ಹಳ್ಳಿಗಳನ್ನು ಬಿಟ್ಟು ಹೋಗುತ್ತಿದ್ದಾರೆ. ಇನ್ನೊಂದು ಕಡೆಯಿಂದ ಕೈಗಾರಿಕೊದ್ಯಮಿಗಳು ಅರಣ್ಯಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಇದು ಅಭಿವೃದ್ಧಿಯ ಲಕ್ಷಣ ಅಲ್ಲ ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಸಲಹೆಗಾರ, ಪರಿಸರತಜ್ಞ ದೆಹಲಿಯ ಅರುಣ್‌ ಕಶ್ಯಪ್‌ ಹೇಳಿದರು.

Advertisement
Advertisement

ಪರಿಸರ ಸಂವಹನ ಸರಣಿ ಕಾರ್ಯಕ್ರಮ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಪರಿಸರದ ಉಳಿವು ಇಂದಿನ ಅಗತ್ಯ. ಹಸಿರು ಶಾಲೆಯ ನಿರ್ಮಾಣದ ಮೂಲಕ ಮಕ್ಕಳಲ್ಲಿ ಪರಿಸರದ ಕಾಳಜಿಯನ್ನು ಬೆಳೆಸಿ ಕೃಷಿಯಲ್ಲಿ ಆಸಕ್ತಿ ಮೂಡಿಸುವ ಮೂಲಕ ಕೃಷಿಯನ್ನೂ ಉಳಿಸಬೇಕಿದೆ ಎಂದರು.

Advertisement

ಸುಳ್ಯದ ಸ್ನೇಹ ಶಾಲೆಯಲ್ಲಿ ಪರಿಸರ ಸಂವಹನ ಸರಣಿ ಕಾರ್ಯಕ್ರಮಗಳನ್ನು  ಉದ್ಘಾಟಿಸಿದ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್‌ ಪುಚ್ಚಪ್ಪಾಡಿ ಮಾತನಾಡಿ ಪರಿಸರ ಸಂರಕ್ಷಣೆಯನ್ನು ಅಲಕ್ಷಿಸಿದರೆ ಭವಿಷ್ಯದಲ್ಲಿ ಹೆಚ್ಚಿನ ದುರಂತಗಳನ್ನು ಕಾಣಬೇಕಾದೀತು ಎಂದರು.

ಕಾರ್ಯಕ್ರಮದಲ್ಲಿ ಪ್ರಸ್ತಾವನೆಗೈದು ಸ್ವಾಗತಿಸಿದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆಯವರು ಪರಿಸರ ಸಂವಹನದ ಮೂಲಕ ಮಕ್ಕಳಿಗೂ, ಪೋಷಕರಿಗೂ ಪರಿಸರದ ಕಾಳಜಿಯನ್ನು ಬೆಳೆಸುವುದು ಈ ಸರಣಿ ಕಾರ್ಯಕ್ರಮದ ಉದ್ದೇಶವಾಗಿದೆ. ವಿದ್ಯಾರ್ಥಿಗಳ ಮನೆಯಿಂದ ವಿಶೇಷ ಗಿಡಗಳನ್ನು ಶಾಲೆಯಲ್ಲಿ ನೆಡುವುದು, ಮಕ್ಕಳ ಮನೆಯಲ್ಲಿ ಇನ್ನೊಂದು ವಿಶೇಷ ಗಿಡಗಳನ್ನು ನೆಡುವ ಮೂಲಕ ಸಂವಹನ ಮುಂದುವರಿಯುತ್ತದೆ ಎಂದರು.

Advertisement

ಈ ಕಾರ್ಯಕ್ರಮದಲ್ಲಿ ಸುಳ್ಯ, ಪುತ್ತೂರು ಮತ್ತು ವಿಟ್ಲ ವಲಯಗಳಿಂದ ಪರಿಸರಸಕ್ತ ಕೃಷಿಕರು ಭಾಗವಹಿಸಿದ್ದರು. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಸಿ ಜಿ ವೆಂಕಟಗಿರಿ ವಂದಿಸಿದರು.ಸ್ನೇಹ ಶಿಕ್ಷಣ ಸಂಸ್ಥೆಯ ಶಿಕ್ಷಕ ದೇವಿಪ್ರಸಾದ್‌ ಕಾರ್ಯಕ್ರಮ ನಿರೂಪಿಸಿದರು.

There is a trend where farmers are abandoning villages while industrialists are encroaching on forests. Arun Kashyap, an environmentalist based in Delhi and consultant for Sneha Education Institute, believes this is not indicative of true development.

Advertisement

As the keynote speaker at the launch of the Environmental Communication Series program, he emphasized the importance of environmental preservation in today’s world. He highlighted the significance of instilling awareness about the environment among children through the establishment of green schools, and stressed the need to cultivate interest in agriculture to protect our agricultural resources.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

 ಕಸ್ತೂರಿ ರಂಗನ್ ವರದಿ ಬಗ್ಗೆ ಕೋರ್ಟ್‌ಗೆ ಮನವರಿಕೆ | ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ |
October 8, 2024
11:03 PM
by: ದ ರೂರಲ್ ಮಿರರ್.ಕಾಂ
 ದಸರಾ ಅಂಗವಾಗಿ  ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ | ಮೊದಲ ಬಹುಮಾನ 1 ಲಕ್ಷ |
October 8, 2024
10:20 PM
by: ದ ರೂರಲ್ ಮಿರರ್.ಕಾಂ
ತಂಬಾಕು ನಿಯಂತ್ರಿಸಲು ಕ್ರಮ | ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 6 ತಿಂಗಳಲ್ಲಿ 265 ಮಂದಿ ತಂಬಾಕಿನಿಂದ ದೂರ |
October 8, 2024
8:25 PM
by: ದ ರೂರಲ್ ಮಿರರ್.ಕಾಂ
 ರಾಸುಗಳಿಗೆ ತಪ್ಪದೇ ಜೀವ ವಿಮೆ ಮಾಡಿಸಿ
October 8, 2024
8:16 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror