ಭೂ ಅಂತರ್ಗತ ನೀರಿನ ಒರತೆಗಳು | ಮೇಲ್ಮೈ ಒರತೆ ಮತ್ತು ಶಿಲಾಸ್ತರದ ನಡುವಣ ನೀರು | ಸಮುದ್ರ ಸೇರುವ ನೀರು ವ್ಯರ್ಥವೇ ?

April 20, 2024
4:46 PM

ಭೂ ಅಂತರ್ಗತ ನೀರಿನ ಒರತೆಗಳು(Water spring). ಮುಖ್ಯವಾಗಿ ಎರಡು ವಿಧಗಳು. ಮೊದಲನೆಯದು ಮೇಲ್ಮೈ ಒರತೆಗಳಾದರೆ, ಎರಡನೆಯದು ಶಿಲಾಸ್ತರದ ನಡುವಣ… ಭೂಮಿಯ ಮೇಲ್ಮೈ ರಚನೆ, ಮೇಲ್ಭಾಗದಲ್ಲಿ ಸುಮಾರು ಒಂದಡಿಯಿಂದ ನೂರಾರು ಅಡಿಗಳ ತನಕ, ಕಲ್ಲು(Rock), ಮಣ್ಣು(Soil), ಶೇಡಿ, ಹೊಯ್ಗೆ(Sand) ಕಳಿತ/ ಕಳೆಯುತ್ತಿರುವ ಸಾವಯವ ವಸ್ತುಗಳು(Fossils) ಮತ್ತು ಇವುಗಳ ಮಿಶ್ರಣ.

ಅದರ ಕೆಳಭಾಗದಲ್ಲಿ ಎಲ್ಲಾ ಭೂ ಪ್ರದೇಶಗಳಲ್ಲಿ ಬಿರುಕುಗಳುಳ್ಳ ಶಿಲಾ ಸ್ತರಗಳು. ಆಡುಭಾಷೆಯಲ್ಲಿ ಹಾಸು ಪಾದೆ…ಈ ಹಾಸುಪಾದೆಗಳ ನಡುವೆ ಸುಮಾರು ಒಂದು ತೆಂಗಿನ ಕಾಯಿಯ ಗಾತ್ರದಿಂದ ಹಿಡಿದು ಒಂದೆರಡು ಗ್ರಾಮಗಳಷ್ಟು ದೊಡ್ಡ ಪೊಟರೆಗಳು…ಈ ಹಾಸುಪಾದೆಗಳ ನಡುವೆ ಮತ್ತು ಪೊಟರೆಗಳ ನಡುವೆ ವಿವಿಧ ಗಾತ್ರದ ಬಿರುಕುಗಳು…

ಮಳೆಗಾಲದಲ್ಲಿ ಸುರಿವ ಮಳೆ ನೀರು, ಮೇಲ್ಭಾಗದ ಪದರವನ್ನು ಪೂರ್ಣವಾಗಿ ತೋಯಿಸಿದ ನಂತರ, ಶಿಲಾ ಸ್ತರವನ್ನು ತಲುಪಿ ಅದರ ಕೆಳಗಿನ/ಒಳಗಿನ ಪೊಟರೆಗಳಲ್ಲಿ ಸಂಚಯವಾಗುತ್ತದೆ. ಒಂದು ಹಂತದ ನಂತರ, ಹೆಚ್ಚಿನ ನೀರು ನದಿಗಳ ಮುಖಾಂತರ ಸಮುದ್ರ ಸೇರುತ್ತದೆ.. ಹಾಗಿದ್ದರೆ ಸಮುದ್ರ ಸೇರುವ ನೀರು ವ್ಯರ್ಥವೇ ? ಖಂಡಿತ ಅಲ್ಲ. ಅಗಾಧ ಪ್ರಮಾಣದಲ್ಲಿ ಸಾವಯವ ವಸ್ತುಗಳನ್ನು ಸಮುದ್ರ ಜೀವಿಗಳಿಗೆ ಆಹಾರವಾಗಿ ಒದಗಿಸುವ ನೈಸರ್ಗಿಕ ವ್ಯವಸ್ಥೆ…

ಈಗ, ಮೈಲ್ಮೈ ಕಲ್ಲು ಮಣ್ಣು ಸ್ತರದಲ್ಲಿ ಸಂಚಯವಾಗುವ ನೀರು ಒಂದು ಬಹು ಮುಖ್ಯ ಧಾರಕವನ್ನು ಅವಲಂಬಿಸಿದೆ. ಅದುವೇ ಸಾವಯವ ಇಂಗಾಲ. ಇದು ಮುಖ್ಯವಾಗಿ ಸಸ್ಯಗಳ ಕಾಂಡ ಬೇರು, ತರಗೆಲೆ ಅಥವಾ ಇನ್ನಾವುದೇ ಶರೀರ ಭಾಗ ಆಗಿರಬಹುದು ಅಥವಾ ಪ್ರಾಣಿಜನ್ಯವೂ ಆಗಬಹುದು. ಈ ಸಾವಯವ ಇಂಗಾಲದ ಸಾಂದ್ರತೆಯನ್ನು ಅವಲಂಬಿಸಿ ಆ ಭೂ ಪ್ರದೇಶ ಮಳೆ ನೀರನ್ನು ಹಿಡಿದಿಟ್ಟುಕೊಂಡು ಬೇಸಿಗೆಯಲ್ಲಿ ಒರತೆಗಳ ರೂಪದಲ್ಲಿ ಹರಿಯುತ್ತದೆ..

ಮೇಲ್ಭಾಗದಿಂದ ಕೆಳಗಿಳಿದ ನೀರು ಶಿಲಾಸ್ತರದ ಬಿರುಕುಗಳ ಮೂಲಕ ಕೆಳಗಿನ ಪೊಟರೆಗಳಲ್ಲಿ ಸಂಚಯವಾಗುತ್ತದೆ. ಪೊಟರೆಗಳ ನಡುವೆ ಸೆಲೆಗಳ ಸಂಪರ್ಕ ಇದ್ದರೆ, ನೂರಾರು ಮೈಲು ದೂರವೂ ಸಾಗೀತು…. ಆದ್ದರಿಂದ ನೀವು ಒಂದೊಮ್ಮೆ ಬೋರ್ವೆಲ್ ಮರುಪೂರಣ ಮಾಡಿದರೂ ಆ ನೀರು ಪಕ್ಕದ ಜಿಲ್ಲೆಗೂ ಹರಿದೀತು…ಅಥವಾ ಪೊಟರೆ ಚಿಕ್ಕದಿದ್ದರೆ, ಉಕ್ಕಿ ಹರಿದೀತು. ಓವರ್ ಫ್ಲೋ…..

Advertisement

ಎಲ್ಲರೂ ತಿಳಿದಿರುವಂತೆ ನೀರು, ಆಮ್ಲ ಜನಕ ಮತ್ತು ಜಲಜನಕದ ರಾಸಾಯನಿಕ ಬಂಧ. ಇದರಲ್ಲಿ ಜಲಜನಕ ಅತೃಪ್ತ. ಹಾಗಾಗಿ ಅದು “ಇನ್ನೂ ಹೆಚ್ಚಿನದನ್ನು” ಹುಡುಕುತ್ತಿರುತ್ತದೆ.ಆದ್ದರಿಂದ ನೀರು ನೀರನ್ನು ಹುಡುಕುತ್ತದೆ ಮತ್ತು ಹೆಚ್ಚಿನ ಸಾಧ್ಯತೆಗಳಲ್ಲಿ ಪರಸ್ಪರ ಸಂಪರ್ಕ ಸಾಧಿಸುತ್ತದೆ.

ಮೂಲ : ಡಿಜಿಟಲ್ ಮೀಡಿಯಾ

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತನೆ : ಸಚಿವ ಕೃಷ್ಣ ಬೈರೇಗೌಡ
January 10, 2026
10:35 PM
by: ರೂರಲ್‌ ಮಿರರ್ ಸುದ್ದಿಜಾಲ
ದೇಹವು ಆರೋಗ್ಯವಾಗಿದೆ ಎನ್ನಲು ಈ ಸಂಕೇತವೇ ಸಾಕು..
January 10, 2026
10:33 PM
by: ರೂರಲ್‌ ಮಿರರ್ ಸುದ್ದಿಜಾಲ
ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭ | 2026 ಮಾರ್ಚ್ ವರೆಗೆ ಅವಕಾಶ
January 10, 2026
10:30 PM
by: ರೂರಲ್‌ ಮಿರರ್ ಸುದ್ದಿಜಾಲ
ಸ್ವಾವಲಂಬಿ ಸಾರಥಿ ಯೋಜನೆ | ಆಟೋ ಗೂಡ್ಸ್ ವಾಹನ ಖರೀದಿಗೆ ರೂ.4 ಲಕ್ಷ ಸಹಾಯಧನ
January 10, 2026
10:28 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror