ಶೇಂಗಾ ಬೆಳೆಯಲ್ಲಿ ಕೀಟ ಮತ್ತು ರೋಗಗಳು ಕಂಡು ಬಂದಾಗ ಕೂಡಲೇ ಅವುಗಳ ಸಮಗ್ರ ನಿರ್ವಹಣೆ ಕೈಗೊಳ್ಳಬೇಕು. ಆಗ ಮಾತ್ರ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಿದೆ ಎಂದು ಯಾದಗಿರಿ ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಯಾದಗಿರಿ ತಾಲೂಕಿನ ಬಳಿ ಚಕ್ರ ಸೇರಿ ಜಿಲ್ಲೆಯ ಯಾದಗಿರಿ, ಶಹಾಪುರ, ವಡಗೇರಾ ತಾಲೂಕಿನ ವಿವಿಧ ಗ್ರಾಮಗಳ ಹಿಂಗಾರು ಹಂಗಾಮಿನ ಶೇಂಗಾ ಬೆಳೆಯುವ ಕ್ಷೇತ್ರಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಸುರುಳಿ ಪೂಚಿಯ ಹತೋಟಿಗಾಗಿ ಪೆಜ್ರೋಪೆನೋಪಾಸ್ 1 ಮಿಲಿ ಲೀಟರ್ ಅಥವಾ ಪಾಸ್ಪಾಮಿಡಾನ್ 0.5 ಮಿಲಿ ಲೀಟರ್ ಪ್ರತಿ ಲೀಟರ್ ನೀರಿಗೆ ಸೇರಿಸಿ ಸಿಂಪಡಣೆ ಮಾಡಬೇಕು ಎಂದು ಸೂಚಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel