2022 ರಲ್ಲಿ ಕರ್ನಾಟಕದಲ್ಲಿ ಅಂತರ್ಜಲ ಬಳಕೆ ಹೆಚ್ಚಾಗಿದೆ. ಕೊಳವೆ ಬಾವಿ ಮರುಪೂರಣವನ್ನು 17.74 ಬಿಸಿಎಂ ಮತ್ತು ವಾರ್ಷಿಕ ಹೊರತೆಗೆಯಬಹುದಾದ ಅಂತರ್ಜಲ ಸಂಪನ್ಮೂಲ 16.04 ಬಿಸಿಎಂ ಆಗಿದೆ ಎಂದು ಡೈನಾಮಿಕ್ ಗ್ರೌಂಡ್ ವಾಟರ್ ರಿಸೋರ್ಸಸ್ ಆಫ್ ಇಂಡಿಯಾ-2022 ವರದಿ ಹೇಳಿದೆ. ದೇಶದಲ್ಲಿ ಕರ್ನಾಟಕ ಕೂಡಾ ಅತೀ ಹೆಚ್ಚು ಕೊಳವೆಬಾವಿಯಿಂದ ಜಲ ಬಳಸುವ ರಾಜ್ಯಗಳಲ್ಲಿ ಒಂದಾಗಿದೆ. ಈಚೆಗೆ ಕೆಲವು ವರ್ಷಗಳಿಂದ ಈ ಬಳಕೆ ಹೆಚ್ಚುತ್ತಲೇ ಇರುವುದು ಅಪಾಯದ ಸೂಚನೆಯನ್ನು ತಿಳಿಸುತ್ತದೆ. ದೇಶದಲ್ಲಿ ಕೃಷಿ ಕ್ಷೇತ್ರ ಅಧಿಕ ಪ್ರಮಾಣದಲ್ಲಿ ಕೊಳವೆಬಾವಿ ನೀರು ಬಳಕೆ ಮಾಡುತ್ತಿದೆ. ಹೀಗಾಗಿ ಈಗ ನೀರಾಶ್ರಯ ಹೆಚ್ಚಾಗಿ ಬಯಸುವ ಅಡಿಕೆ ವಿಸ್ತರಣೆ ಬಗ್ಗೆ ಗಂಭೀರವಾದ ಚಿಂತನೆ ಅಗತ್ಯ ಇದೆ.
ಕರ್ನಾಟಕದಲ್ಲಿ 2020 ರಲ್ಲಿ 10.63 ಬಿಸಿಎಂ (ಬಿಲಿಯನ್ ಕ್ಯೂಬಿಕ್ ಮೀಟರ್) ಬಳಕೆ ಇದ್ದರೆ 2022 ರಲ್ಲಿ 11.22 ಬಿಸಿಎಂ ಗೆ ಹೆಚ್ಚಳವಾಗಿದೆ. ಆದ್ದರಿಂದ, ಅಂತರ್ಜಲ ಹೊರತೆಗೆಯುವಿಕೆಯ ಹಂತವು 2020 ರಲ್ಲಿ 64.85 ಪ್ರತಿಶತದಿಂದ 2022 ರಲ್ಲಿ 69.93 ಪ್ರತಿಶತಕ್ಕೆ ಏರಿದೆ. ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ಚಾಮರಾಜನಗರ ಜಿಲ್ಲೆಗಳನ್ನು ಮಿತಿಮೀರಿದ ಬಳಕೆಯ ಜಿಲ್ಲೆ ಎಂದು ವರ್ಗೀಕರಿಸಲಾಗಿದೆ, ಉತ್ತರ ಕನ್ನಡ, ಉಡುಪಿ, ಬಳ್ಳಾರಿ ಮತ್ತು ಕಲಬುರಗಿ ಜಿಲ್ಲೆಗಳು ಕಡಿಮೆ ಬಳಕೆಯ ಜಿಲ್ಲೆಗಳಾಗಿವೆ.
ದೇಶದಲ್ಲಿ ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನಗಳು ಅತಿಯಾದ ಕೊಳವೆಬಾವಿ ಬಳಕೆಯ ರಾಜ್ಯಗಳ ವ್ಯಾಪ್ತಿಯಲ್ಲಿ ಬರುತ್ತವೆ. ದೆಹಲಿಯು ನಿರ್ಣಾಯಕ ಮಟ್ಟದಲ್ಲಿದೆ. ಅತ್ಯಧಿಕ ಪ್ರಮಾಣದಲ್ಲಿ ಕೊಳವೆ ಬಾವಿಯಿಂದ ನೀರು ತೆಗೆಯಲಾಗುತ್ತಿದೆ.
ಡೈನಾಮಿಕ್ ಗ್ರೌಂಡ್‌ವಾಟರ್ ರಿಸೋರ್ಸಸ್ ಆಫ್ ಇಂಡಿಯಾ, ಇದರ ವರದಿಯ ಪ್ರಕಾರ ಅಂತರ್ಜಲ ಹೊರತೆಗೆಯುವಿಕೆಯ ಮಟ್ಟವು ತುಂಬಾ ಹೆಚ್ಚಾಗಿದೆ. ಪಂಜಾಬ್‌ನಲ್ಲಿ ಅಂತರ್ಜಲ ಹೊರತೆಗೆಯುವಿಕೆಯ ಹಂತವು 165.99 ಪ್ರತಿಶತದಷ್ಟಿದ್ದರೆ, ರಾಜಸ್ಥಾನದಲ್ಲಿ , ಹರಿಯಾಣದಲ್ಲಿ ಕೂಡಾ ಅದೇ ಹಾದಿಯಲ್ಲಿದೆ. ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯುನಲ್ಲಿ ಇದು 157.927 ಮತ್ತು ಶೇಕಡಾ 133.2 ರಷ್ಟಿದೆ. ಇವೆಲ್ಲವೂ ಅತೀ ಹೆಚ್ಚು ಕೊಳವೆ ಬಾವಿ ಬಳಕೆಯ ವಿಭಾಗದಲ್ಲಿ ಬರುತ್ತದೆ.
ಒಟ್ಟಾರೆಯಾಗಿ, ಭಾರತದಲ್ಲಿ ಅಂತರ್ಜಲದ ಹೊರತೆಗೆಯುವಿಕೆ 2020 ರಲ್ಲಿ 244.92 ಬಿಸಿಎಂ (ಶತಕೋಟಿ ಘನ ಮೀಟರ್) ನಿಂದ 2022 ರಲ್ಲಿ 239.16 ಬಿಸಿಎಂ ಕಡಿಮೆಯಾಗಿದೆ ಎಂದು ವರದಿಯು ಕಂಡುಹಿಡಿದಿದೆ. ಅಂತರ್ಜಲ ಹೊರತೆಗೆಯುವಿಕೆಯ ಒಟ್ಟಾರೆ ಹಂತವು ಸಹ 61.6% ರಿಂದ 60.08 ಕ್ಕೆ ಸ್ವಲ್ಪ ಕಡಿಮೆಯಾಗಿದೆ.
2022 ರಲ್ಲಿ ದೇಶದಲ್ಲಿನ ಒಟ್ಟು ವಾರ್ಷಿಕ ಅಂತರ್ಜಲ ಮರುಪೂರಣವನ್ನು 437.60 ಬಿಸಿಎಂ ಎಂದು ನಿರ್ಣಯಿಸಲಾಗಿದೆ. ವರದಿಯ ಪ್ರಕಾರ, ಭಾರತದಲ್ಲಿ ಅಂತರ್ಜಲ ಸಂಪನ್ಮೂಲಗಳ ಅತಿದೊಡ್ಡ ಬಳಕೆದಾರ ಕೃಷಿ ಕ್ಷೇತ್ರವಾಗಿದೆ. ವರದಿಯ ಪ್ರಕಾರ, 2022 ರಲ್ಲಿ ದೇಶದಲ್ಲಿ ಒಟ್ಟು 239.16 ಬಿಸಿಎಂ ಅಂತರ್ಜಲ ಹೊರತೆಗೆಯುವಿಕೆಯಲ್ಲಿ ಸುಮಾರು 87 ಪ್ರತಿಶತ ನೀರಾವರಿ ಉದ್ದೇಶಗಳಿಗಾಗಿ. ಇದು ಸುಮಾರು 208.49 ಬಿಸಿಎಂ ಅಂತರ್ಜಲವಾಗಿದೆ. ಒಟ್ಟು ಅಂತರ್ಜಲ ಹೊರತೆಗೆಯುವಿಕೆಯ ಶೇಕಡಾ 13, ದೇಶೀಯ ಮತ್ತು ಕೈಗಾರಿಕಾ ಬಳಕೆಗಾಗಿ ಮಾತ್ರಾ ಎಂದು ವರದಿ ಹೇಳಿದೆ.