ಮಣ್ಣು ಅಥವಾ ರಾಸಾಯನಿಕ ಬಳಕೆ ಇಲ್ಲದೆ ತರಕಾರಿ ಕೃಷಿ | 10,000 ಗಿಡಗಳು | 70 ಲಕ್ಷ ಸಂಪಾದಿಸಿದ ಕೃಷಿಕ |

November 8, 2022
4:52 PM

ಕೇವಲ ತರಕಾರಿ ಬೆಳೆಯುವ ಮೂಲಕ 70 ಲಕ್ಷ ರೂಪಾಯಿ ಗಳಿಸಿದ್ದೂ ಅಲ್ಲದೆ, ಈ ಕೃಷಿಕ ಮಣ್ಣು ಹಾಗೂ ರಾಸಾಯನಿಕ ಬಳಸದೆ ಸುಮಾರು 10000 ಗಿಡಗಳನ್ನು ಬೆಳೆದ ಕೃಷಿಕ ಈಗ ಸುದ್ದಿಯಲ್ಲಿದ್ದಾನೆ. ಈ ಮಾದರಿ ಕೂಡಾ ಸಾಧ್ಯ ಇದೆ ಎನ್ನುವುದನ್ನು ಕೃಷಿಕ ಜಗತ್ತಿಗೆ ತೋರಿಸಿದ್ದಾನೆ.

Advertisement
Advertisement

ಕೇವಲ ತರಕಾರಿ ಬೆಳೆಯುವ ಮೂಲಕ 70 ಲಕ್ಷ ರೂಪಾಯಿ ಗಳಿಸುವ ಉತ್ತರ ಪ್ರದೇಶದ  ಕೃಷಿಕರೊಬ್ಬರ ಆಸಕ್ತಿದಾಯಕ ಸಂಗತಿಯನ್ನು  ಯುಎನ್‌ಇಪಿಯ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಎರಿಕ್ ಸೋಲ್ಹೈಮ್ ಅವರು ಟ್ವೀಟ್‌ ಮಾಡಿದ್ದರು. ಈ ವಿಡಿಯೋ ವೈರಲ್‌ ಆದ ಬೆನ್ನಿಗೇ ಕೃಷಿಕ ಸಾಹಸ ಗಮನ  ಸೆಳೆದಿದೆ. ಉತ್ತರ ಪ್ರದೇಶದ ಬರೇಲಿಯದ ರಾಮ್‌ವೀರ್ ಸಿಂಗ್ ತನ್ನ ಮೂರು ಅಂತಸ್ತಿನ ಮನೆಯಲ್ಲಿ ಮಣ್ಣು ಅಥವಾ ರಾಸಾಯನಿಕಗಳನ್ನು ಬಳಸದೆ ತರಕಾರಿಗಳನ್ನು ಬೆಳೆಯುತ್ತಿರುವುದರ ಬಗ್ಗೆ  ವೀಡಿಯೊ ಹೇಳಿತ್ತು.ಅವರು ಸ್ಟ್ರಾಬೆರಿ, ಹೂಕೋಸು, ಬೆಂಡೆಕಾಯಿ ಮತ್ತು ಇತರ ಅನೇಕ ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಯುತ್ತಾರೆ. ಅವರ ಮೂರು ಅಂತಸ್ತಿನ ಮನೆಯಲ್ಲಿ 10,000 ಗಿಡಗಳು ಇವೆ.

ಹೈಡ್ರೋಪೋನಿಕ್ಸ್ ಬಳಸಿ ಮಣ್ಣಿನ ಬಳಕೆ ಮಾಡದೆ ಮತ್ತು 90% ರಷ್ಟು ನೀರನ್ನು ಉಳಿಸಬಹುದು ಎನ್ನುತ್ತಾರೆ ರಾಮ್ ವೀರ್. ಅವರು ವಿಂಪಾ ಆರ್ಗ್ಯಾನಿಕ್ ಮತ್ತು ಹೈಡ್ರೋಪೋನಿಕ್ಸ್ ಎಂಬ ಕಂಪನಿಯನ್ನು ಹೊಂದಿದ್ದಾರೆ. ಇದರಿಂದ ಅವರು ವರ್ಷಕ್ಕೆ 70 ಲಕ್ಷ ಆದಾಯವನ್ನು ಗಳಿಸುತ್ತಿದ್ದಾರೆ.

ದಿ ಬೆಟರ್ ಇಂಡಿಯಾಗೆ ರಾಮ್‌ವೀರ್‌ ಅವರು ವಿಶೇಷ ಸಂದರ್ಶನ ನೀಡಿದ್ದರು, ಇದರಲ್ಲಿ ಅವರು ಹೇಳಿರುವ ಪ್ರಕಾರ, 2009 ರಲ್ಲಿ ರಾಮ್‌ವೀರ್ ಸಿಂಗ್ ಅವರ ಸ್ನೇಹಿತನ ಚಿಕ್ಕಪ್ಪ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಆ ಬಳಿಕ ವಿವಿಧ ಅಧ್ಯಯನದ ಬಳಿಕ ರಾಸಾಯನಿಕ ಬಳಕೆಯ ತರಕಾರಿ ಬಳಕೆಯಿಂದ ಕ್ಯಾನ್ಸರ್ ಉಂಟಾಗುತ್ತದೆ ಎಂದು ಸಾವಯವದ ಕಡೆಗೆ ಮನಸ್ಸು ಮಾಡಿದರು.  ಬರೇಲಿಯಿಂದ 40 ಕಿಲೋಮೀಟರ್ ದೂರದಲ್ಲಿರುವ ತಮ್ಮ ಕುಟುಂದ ಜಾಗದಲ್ಲಿ  ಸಾವಯವ ತರಕಾರಿಗಳನ್ನು ಬೆಳೆಯಲು  ನಿರ್ಧರಿಸಿದರು.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ಪ್ರೋತ್ಸಾಹ | ಕೃಷಿ ಉದ್ಯಮಿಗಳಾಗುವಂತೆ ಉತ್ತೇಜನ
July 26, 2025
10:25 PM
by: The Rural Mirror ಸುದ್ದಿಜಾಲ
ದಾವಣಗೆರೆ ಜಿಲ್ಲೆಗೆ ಮುಂದಿನ 2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಗೆ ಸಿದ್ಧತೆ
July 26, 2025
10:13 PM
by: The Rural Mirror ಸುದ್ದಿಜಾಲ
ಬಳ್ಳಾರಿಯಲ್ಲಿ ತಾಳೆ ಬೆಳೆ ಕುರಿತ ತರಬೇತಿ ಕಾರ್ಯಕ್ರಮ
July 26, 2025
10:05 PM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಪೂರೈಸುವಂತೆ  ಬೇಡಿಕೆ
July 26, 2025
9:12 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group