ನೂತನ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಉಚಿತವಾಗಿ 200 ಯೂನಿಟ್ ವಿದ್ಯುತ್ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಜುಲೈ ತಿಂಗಳಿನಿಂದಲೇ ಪ್ರಯೋಜನ ಸಿಗಲಿದೆ. ಆದರೆ ನೀವು ಇದಕ್ಕಾಗಿ ಅರ್ಜಿ ಸಲ್ಲಿಸಿದ್ದರೆ ಮಾತ್ರ ನಿಮಗೆ 200 ಯುನಿಟ್ ಉಚಿತ ವಿದ್ಯುತ್ ಲಭ್ಯವಾಗಲಿದೆ. ಇಲ್ಲದಿದ್ದರೆ ನೀವು ಪ್ರತಿ ತಿಂಗಳು ಎಂದಿನಂತೆ ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ.
ಸದ್ಯ ನಮ್ಮ ಕರ್ನಾಟಕದಲ್ಲಿ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಅಂದರೆ ಉಚಿತ ಎರಡು ನೂರು ಯೂನಿಟ್ ವಿದ್ಯುತ್ ಪಡೆಯಲು ಸದ್ಯ 90 ಲಕ್ಷ ಜನರು ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಜನರಿಗೆ ಜುಲೈ ಒಂದರಿಂದ ಅಂದರೆ ನೀವು ಜೂನ್ ಒಳಗಡೆ ಅರ್ಜಿ ಸಲ್ಲಿಸಿದ್ದರೆ ಜುಲೈ ಒಂದರಿಂದಲೇ ಸಂಪೂರ್ಣ ಉಚಿತ ವಿದ್ಯುತ್ ನಿಮಗೆ ಸಿಗುತ್ತದೆ. ಇನ್ನೂ ಯಾರು ಈವರೆಗೂ ಅರ್ಜಿ ಸಲ್ಲಿಸಿಲ್ಲವೋ ಅಂತವರಿಗೆ ಅಗಸ್ಟ್ ನಂತರ ಉಚಿತ ವಿದ್ಯುತ್ ಸಿಗುತ್ತದೆ. ಅದು ಸರ್ಕಾರ ಹೇಳಿರುವಂತೆ ಜುಲೈ 25ರೊಳಗೆ ನೀವು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ತಿಳಿಸಿದ್ದಾರೆ.
ಗೃಹ ಜ್ಯೋತಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ? : ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ https://sevasindhugs.karnataka.gov.in/ ಈ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ನೀವು ಸೇವಾ ಸಿಂಧು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುತ್ತೀರಿ, ನಂತರ ನೀವು ಅಲ್ಲಿ ಗೃಹಜೋತಿ ಅಂತ ಕ್ಲಿಕ್ ಮಾಡಬೇಕು. ಇದಾದ ನಂತರ ನನ್ನ ಮಾಹಿತಿ ನೋಂದಾಣಿಗೆ ಒಪ್ಪಿದ್ದೇನೆ ಎಂದು ಸಣ್ಣ ಬಾಕ್ಸ್ ಒಳಗೆ ಕ್ಷಿಕ್ ಮಾಡಿದ ನಂತರ ಕೆಳಗೆ ನೀಡಿರುವ ಕ್ಯಾಪ್ಚವನ್ನು ಸಂಪೂರ್ಣ ಭರ್ತಿ ಮಾಡಬೇಕು ಮಾಡಿದ ನಂತರವೇ ಅಗ್ರಿ ಅಂತ ಕ್ಲಿಕ್ ಮಾಡಬೇಕು.
ನಂತರ ನಿಮ್ಮ ಅರ್ಜಿದಾರರ ಆಧಾರ್ ನಂಬರ್ ಹಾಕಿ. ನಿಮ್ಮ ಆಧಾರ ನಂಬರಿಗೆ ಲಿಂಕ್ ಆದ ಮೊಬೈಲ್ ನಂಬರಿಗೆ ಒಟಿಪಿ ಬರುತ್ತದೆ ಅದನ್ನು ತುಂಬಿರಿ. ನಂತರ ನಿಮ್ಮ ಎಸ್ಕಾಂ ಹೆಸರು ಹಾಕಿ ಇದಾದ ನಂತರ ಲೈಫ್ ಬಿಲ್ ನಲ್ಲಿ ಇರುವಂತೆ ಅಕೌಂಟ್ ನಂಬರ್ ಹಾಕಿ ನಂತರ ತನ್ನಿಂದ ತಾನೇ ಖಾತೆದಾರರ ಹೆಸರು ಬರುತ್ತದೆ. ಹೇಗಿರುತ್ತಯೋ ಹಾಗೆ ಕರೆಂಟ್ ಬಿಲ್ ನಲ್ಲಿ ಇದಾದ ನಂತರ ಖಾತೆದಾರರ ವಿಳಾಸ ಕೂಡ ಬರುತ್ತದೆ ನಂತರ ನೀವು ಎಸ್ಕಾಂ ಹೆಸರು ಆಯ್ಕೆ ಮಾಡಿ ಇದಾದ ನಂತರ ನೀವು ಸಂತ ಮನೆಯಲ್ಲಿ ಇದ್ದೀರು ಅಥವಾ ಬಾಡಿಗೆ ಮನೆಯಲ್ಲಿ ಇದ್ದೀರೋ ಎಂಬುದನ್ನು ಆಯ್ಕೆ ಮಾಡಿ ಇದಾದ ನಂತರ ನಿಮ್ಮ ಆದರ ಸಂಖ್ಯೆ ನಮೂದಿಸಿ ಸಂವಹನಕ್ಕಾಗಿ ನಿಮ್ಮ ದೂರವಾಣಿ ಸಂಖ್ಯೆಯನ್ನು ಹಾಕಿ ನಿಮಗೆ ಓಟಿಪಿ ಬರುತ್ತದೆ. ಇದಾದ ನಂತರ ಅಗ್ರಿ ಅಂತ ಕೊಟ್ಟು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
ಇದಾದ ನಂತರ ನಿಮಗೆ ಸ್ವೀಕೃತಿ ಪತ್ರ ದೊರೆಯುತ್ತದೆ. ಅಲ್ಲಿಗೆ ನೀವು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಿ ಎಂದರ್ಥ. ಉಚಿತ ವಿದ್ಯುತ್ ಬೇಕಾದಲ್ಲಿ ಜುಲೈ 25ರ ಒಳಗೆ ಅರ್ಜಿ ಸಲ್ಲಿಸಿ.