ಸುದ್ದಿಗಳು

#Gruhajyothi | ಉಚಿತ ವಿದ್ಯತ್ ಬೇಕಾದಲ್ಲಿ ಆದಷ್ಟು ಬೇಗ ಅರ್ಜಿ ಸಲ್ಲಿಸಿ | ಇಲ್ಲದಿದ್ದರೆ ಎಂದಿನಂತೆ ಕರೆಂಟ್ ಬಿಲ್ ಕಟ್ಟಬೇಕು…!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ನೂತನ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಉಚಿತವಾಗಿ 200 ಯೂನಿಟ್ ವಿದ್ಯುತ್ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಜುಲೈ ತಿಂಗಳಿನಿಂದಲೇ ಪ್ರಯೋಜನ ಸಿಗಲಿದೆ. ಆದರೆ ನೀವು ಇದಕ್ಕಾಗಿ ಅರ್ಜಿ ಸಲ್ಲಿಸಿದ್ದರೆ ಮಾತ್ರ ನಿಮಗೆ 200 ಯುನಿಟ್ ಉಚಿತ ವಿದ್ಯುತ್ ಲಭ್ಯವಾಗಲಿದೆ. ಇಲ್ಲದಿದ್ದರೆ ನೀವು ಪ್ರತಿ ತಿಂಗಳು ಎಂದಿನಂತೆ ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ.

Advertisement

ಸದ್ಯ ನಮ್ಮ ಕರ್ನಾಟಕದಲ್ಲಿ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಅಂದರೆ ಉಚಿತ ಎರಡು ನೂರು ಯೂನಿಟ್ ವಿದ್ಯುತ್ ಪಡೆಯಲು ಸದ್ಯ 90 ಲಕ್ಷ ಜನರು ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಜನರಿಗೆ ಜುಲೈ ಒಂದರಿಂದ ಅಂದರೆ ನೀವು ಜೂನ್ ಒಳಗಡೆ ಅರ್ಜಿ ಸಲ್ಲಿಸಿದ್ದರೆ ಜುಲೈ ಒಂದರಿಂದಲೇ ಸಂಪೂರ್ಣ ಉಚಿತ ವಿದ್ಯುತ್ ನಿಮಗೆ ಸಿಗುತ್ತದೆ.  ಇನ್ನೂ ಯಾರು ಈವರೆಗೂ ಅರ್ಜಿ ಸಲ್ಲಿಸಿಲ್ಲವೋ ಅಂತವರಿಗೆ ಅಗಸ್ಟ್ ನಂತರ ಉಚಿತ ವಿದ್ಯುತ್ ಸಿಗುತ್ತದೆ. ಅದು  ಸರ್ಕಾರ ಹೇಳಿರುವಂತೆ ಜುಲೈ 25ರೊಳಗೆ ನೀವು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ತಿಳಿಸಿದ್ದಾರೆ.

ಗೃಹ ಜ್ಯೋತಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ? : ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ https://sevasindhugs.karnataka.gov.in/     ಈ  ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ನೀವು ಸೇವಾ ಸಿಂಧು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುತ್ತೀರಿ, ನಂತರ ನೀವು ಅಲ್ಲಿ ಗೃಹಜೋತಿ ಅಂತ ಕ್ಲಿಕ್ ಮಾಡಬೇಕು. ಇದಾದ ನಂತರ ನನ್ನ ಮಾಹಿತಿ ನೋಂದಾಣಿಗೆ ಒಪ್ಪಿದ್ದೇನೆ ಎಂದು ಸಣ್ಣ ಬಾಕ್ಸ್ ಒಳಗೆ ಕ್ಷಿಕ್ ಮಾಡಿದ ನಂತರ ಕೆಳಗೆ ನೀಡಿರುವ ಕ್ಯಾಪ್ಚವನ್ನು ಸಂಪೂರ್ಣ ಭರ್ತಿ ಮಾಡಬೇಕು ಮಾಡಿದ ನಂತರವೇ ಅಗ್ರಿ ಅಂತ ಕ್ಲಿಕ್ ಮಾಡಬೇಕು.

ನಂತರ ನಿಮ್ಮ  ಅರ್ಜಿದಾರರ ಆಧಾರ್ ನಂಬರ್ ಹಾಕಿ. ನಿಮ್ಮ ಆಧಾರ ನಂಬರಿಗೆ ಲಿಂಕ್ ಆದ ಮೊಬೈಲ್ ನಂಬರಿಗೆ ಒಟಿಪಿ ಬರುತ್ತದೆ ಅದನ್ನು ತುಂಬಿರಿ. ನಂತರ ನಿಮ್ಮ ಎಸ್ಕಾಂ ಹೆಸರು ಹಾಕಿ ಇದಾದ ನಂತರ ಲೈಫ್ ಬಿಲ್ ನಲ್ಲಿ ಇರುವಂತೆ ಅಕೌಂಟ್ ನಂಬರ್ ಹಾಕಿ ನಂತರ ತನ್ನಿಂದ ತಾನೇ ಖಾತೆದಾರರ ಹೆಸರು ಬರುತ್ತದೆ. ಹೇಗಿರುತ್ತಯೋ ಹಾಗೆ ಕರೆಂಟ್ ಬಿಲ್ ನಲ್ಲಿ ಇದಾದ ನಂತರ ಖಾತೆದಾರರ ವಿಳಾಸ ಕೂಡ ಬರುತ್ತದೆ ನಂತರ ನೀವು ಎಸ್ಕಾಂ ಹೆಸರು ಆಯ್ಕೆ ಮಾಡಿ ಇದಾದ ನಂತರ ನೀವು ಸಂತ ಮನೆಯಲ್ಲಿ ಇದ್ದೀರು ಅಥವಾ ಬಾಡಿಗೆ ಮನೆಯಲ್ಲಿ ಇದ್ದೀರೋ ಎಂಬುದನ್ನು ಆಯ್ಕೆ ಮಾಡಿ ಇದಾದ ನಂತರ ನಿಮ್ಮ ಆದರ ಸಂಖ್ಯೆ ನಮೂದಿಸಿ ಸಂವಹನಕ್ಕಾಗಿ ನಿಮ್ಮ ದೂರವಾಣಿ ಸಂಖ್ಯೆಯನ್ನು ಹಾಕಿ ನಿಮಗೆ ಓಟಿಪಿ ಬರುತ್ತದೆ.  ಇದಾದ ನಂತರ ಅಗ್ರಿ ಅಂತ ಕೊಟ್ಟು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.

ಇದಾದ ನಂತರ ನಿಮಗೆ ಸ್ವೀಕೃತಿ ಪತ್ರ ದೊರೆಯುತ್ತದೆ. ಅಲ್ಲಿಗೆ ನೀವು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಿ ಎಂದರ್ಥ. ಉಚಿತ ವಿದ್ಯುತ್ ಬೇಕಾದಲ್ಲಿ ಜುಲೈ 25ರ ಒಳಗೆ ಅರ್ಜಿ ಸಲ್ಲಿಸಿ.

 

 

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹಾಲು ಮೊಸರು, ವಿದ್ಯುತ್ ದರ ದುಬಾರಿ | ಬೆಂಗಳೂರಿನಲ್ಲಿ ಕಸಕ್ಕೂ ತೆರಿಗೆ | ರೈತರಿಗೆ ಪ್ರೋತ್ಸಾಹಧನಕ್ಕೆ ನಿರ್ಧಾರ |

ರಾಜ್ಯದಲ್ಲಿ ನಂದಿನಿ ಹಾಲು, ಮೊಸರು ಹಾಗೂ ವಿದ್ಯುತ್ ದರ ದುಬಾರಿಯಾಗಲಿದೆ.

4 hours ago

ವೃಶ್ಚಿಕ ರಾಶಿ ಯುಗಾದಿ ಸಂವತ್ಸರದ ಫಲಗಳು | ಹೇಗಿದೆ ಈ ವರ್ಷ..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490.

4 hours ago

ದೇವಸ್ಥಾನದ ಬ್ರಹ್ಮಕಲಶೋತ್ಸವಗಳಲ್ಲಿ “ರಾಜಕೀಯದ ಚಪ್ಪಲು” ಹೊರಗಿಡಬೇಕು |

ಒಂದು ದೇವಸ್ಥಾನದ ಎಂದರೆ ಶ್ರದ್ಧೆಯ ಕೇಂದ್ರ, ಒಂದು ಊರಿನ ದೇವಸ್ಥಾನ ಎಂದರೆ ಸೌಹಾದರ್ತೆಯ…

4 hours ago

ಮಲ್ಲಿಗೆ ಕೃಷಿ ತರಬೇತಿ ಕಾರ್ಯಾಗಾರ

ಅಜ್ಜಾವರ ಪಂಚಾಯತ್ ಸಭಾಂಗಣದಲ್ಲಿ ಮಲ್ಲಿಗೆ ಕೃಷಿ ತರಬೇತಿ ನಡೆಯಿತು.

12 hours ago

ಅಡಿಕೆ ಕಳ್ಳಸಾಗಾಣಿಕೆಯ ಮತ್ತೊಂದು ಪ್ರಕರಣ ಪತ್ತೆ | ಹೆಚ್ಚುತ್ತಿರುವ ಬರ್ಮಾ ಅಡಿಕೆ ಸಾಗಾಟ |

ಮಿಜೋರಾಂನ ಚಂಫೈ ಜಿಲ್ಲೆಯ ಕಾಡಿನಲ್ಲಿ ದಾಸ್ತಾನು ಇರಿಸಿದ್ದ 321 ಚೀಲ ಅಡಿಕೆಯನ್ನು ಅಸ್ಸಾಂ…

14 hours ago