ಕರ್ನಾಟದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 200 ರೂಪಾಯಿ ಪಡೆಯುತ್ತಿರುವ ಮಹಿಳೆಯರಿಗೆ ಇದೀಗ ಮತ್ತೊಂದು ಸಿಹಿ ಸುದ್ದಿ ಬಂದಿದೆ. ರಾಜ್ಯ ಸರ್ಕಾರವು ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ಆರಂಭಿಸುತ್ತಿದ್ದು, ಇದರ ಮೂಲಕ ಮಹಿಳೆಯರು ಕೇವಲ 6 ತಿಂಗಳ ಸದಸ್ಯತ್ವದ ನಂತರವೇ 30 ಸಾವಿರದಿಂದ 3ಲಕ್ಷ ರೂ ವರೆಗೆ ವೈಯಕ್ತಿಕ ಸಾಲನ್ನು ಪಡೆಯಬಹುದು.
ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ನೀಡಲಾಗುತ್ತಿರುವ ಹಣವನ್ನು ಮಹಿಳೆಯರು ಕೇವಲ ದೈನಂದಿನ ಖರ್ಚಿಗೆ ಮಾತ್ರ ಬಳಸದೆ, ಉಳಿತಾಯ ಮತ್ತು ಸ್ವಂತ ಉದ್ಯೋಗಕ್ಕೂ ತೊಡಗಿಸಬೇಕು ಹಾಗೂ ಈ ಬ್ಯಾಂಕ್‍ನಲ್ಲಿ ಕಡಿಮೆ ಬಡ್ಡಿದರವಿದ್ದು ಇದರಿಂದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎನ್ನುವ ಉದ್ದೇಶದಿಂದ ಸಹಕಾರಿ ಬ್ಯಾಂಕ್ ಆರಂಭಿಸಲಾಗಿದೆ.
ಮಹಿಳಾ ಸಹಕಾರಿ ಬ್ಯಾಂಕ್ ಮೊದಲ ಬಾರಿಗೆ ಆರಂಭವಾಗುತ್ತಿದ್ದು, ನಬಾರ್ಡ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂತಾದ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಕಡಿಮೆ ಬಡ್ಡಿ ಸಾಲ ಒದಗಿಸಲಾಗುತ್ತಿದೆ. ಮಾತ್ರವಲ್ಲದೆ, ಸರ್ಕಾರ ಬದಲಾವಣೆಗೊಂಡರು ಬ್ಯಾಂಕ್ ಮುಚ್ಚುವ ಸಾಧ್ಯತೆಯಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.

