ಚಿಲಿಪಿಲಿ | ಚೀಂವ್…. ಚೀಂವ್….. ಗುಬ್ಬಚ್ಚಿ 

July 11, 2021
2:51 PM

ಮನೆ ,ಮನೆಯ ಸುತ್ತ ಹೂ ,ತರಕಾರಿಗಳ ಕೈ ತೋಟ. ಎದುರಿಗೆ  ಅಂಗಳ, ಮನೆಯ ಕಿಟಕಿ ಪಕ್ಕವೋ  ಅಟ್ಟದ ರೀಪಿನ ಸಂಧಿಯಲ್ಲೋ ಸಿಕ್ಕಿದ ಪುಟ್ಟ ಜಾಗದಲ್ಲಿ ಗುಬ್ಬಚ್ಚಿಯ ಎರಡೋ ಮೂರೋ  ಗೂಡು ಇದೆಯೆಂದರೆ ಮನೆ ಸಂಪೂರ್ಣವಾಯಿತೆಂದೇ ಅರ್ಥ. ಅಲ್ಲಿಂದ ಮುಂದೆ ಗದ್ದೆ  ಇದು  ನಮ್ಮ ಹಳ್ಳಿ ಮನೆಗಳ ಸಹಜ ಚಿತ್ರಣ.

Advertisement
Advertisement


ಹುಲ್ಲು ಕಡ್ಡಿ , ಹಕ್ಕಿಯ ಹಿಕ್ಕೆ ,ಸಣ್ಣ ಸಣ್ಣ ರೆಕ್ಕೆಗಳು ಅಲ್ಲಲ್ಲಿ ಬಿದ್ದುಕೊಂಡಿರುವುದು ಸಾಮಾನ್ಯ ದೃಶ್ಯ. ಗುಬ್ಬಚ್ಚಿ ಸಣ್ಣ ಹಕ್ಕಿ . ನಮ್ಮ ಮನಸಿಗೆ ಯಾಕೋ ಇದು ತುಂಬಾ ಹತ್ತಿರದ ಹಕ್ಕಿ ಎನಿಸುತ್ತದೆ.  ಆದರೀಗ ಯಾಕೋ ಅಪರೂಪ. ಬೇಕೆಂದ ಕೂಡಲೇ ನೋಡಲು ಸಿಗದು. ಗುಬ್ಬಚ್ಚಿಗಳ ಆಹಾರ ಮೂಲವಾದ ಗದ್ದೆಗಳು ಕಮ್ಮಿಯಾದದ್ದು,   ಹಕ್ಕಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾದುದರ ಕಾರಣವಿರಬಹುದು.

Advertisement

ಗುಬ್ಬಚ್ಚಿಯು ಜೋಡಿಯಾಗಿ ಇರುತ್ತವೆ. ಇದರ ವೈಜ್ಞಾನಿಕ ಹೆಸರು Passer domesticus. ಸರಾಸರಿ ಜೀವಿತಾವಧಿ 3 ವರ್ಷ. ಇದರ ವೇಗದ ಮಿತಿ ಗಂಟೆಗೆ 46 ಕಿಮೀ.  ಹಕ್ಕಿಯ ಉದ್ದ 14 ರಿಂದ 18 ಸೆ.ಮೀ. ಎತ್ತರ 16 ಸೆ.ಮೀ.  ಸಾಮಾನ್ಯವಾಗಿ ತೂಕ24  ರಿಂದ 40 ಗ್ರಾಂ.

Advertisement

ಅವುಗಳ ಬಣ್ಣ ಕಂದು.ಬೆನ್ನು ಮತ್ತು ಪಕ್ಕಗಳಲ್ಲಿ ಬಿಳಿ ಮತ್ತು ಕಪ್ಪು ಬಣ್ಣಗಳು ಮಿಶ್ರಿತವಾಗಿರುತ್ತದೆ.ಮುಂಭಾಗ ಬೆಳ್ಳಗಿರುತ್ತದೆ. ಗಂಡು ಗುಬ್ಬಿಗೆ ಗಂಟಲ ಮೇಲೆ ಕಪ್ಪು ಕಲೆ ಇರುತ್ತದೆ.  ಇವುಗಳ ಮೊಟ್ಟೆಗಳು ನಸು ಹಸಿರು ಮಿಶ್ರಿತ ಬಿಳಿ ಬಣ್ಣದ್ದಾಗಿರುತ್ತದೆ. ವಿಶ್ವದಲ್ಲಿ 26 ಜಾತಿಯ ಗುಬ್ಬಚ್ಚಿಗಳನ್ನು   ಗುರುತಿಸಲಾಗಿದೆ.  ನಮ್ಮ ದೇಶದಲ್ಲಿ 5ವಿಭಿನ್ನ   ಜಾತಿಯ ಗುಬ್ಬಿಗಳಿವೆ. ಇವುಗಳಲ್ಲಿ  ಮನೆಗುಬ್ಬಿ ಸರ್ವವ್ಯಾಪಿ.  ಧಾನ್ಯ, ಹುಳು ಹುಪ್ಪಟೆಗಳು ಇವುಗಳ ಮುಖ್ಯ ಆಹಾರ.
ಗುಬ್ಬಿಗಳಿಗೆ ಧೂಳು ಸ್ನಾನವೆಂದರೆ  ಬಹಳ ಪ್ರೀತಿ. ಗುಬ್ಬಿಗಳು ಅಗತ್ಯ ಬಿದ್ದರೆ  ನೀರಿನ ಮೇಲೆ ಈಜ ಬಲ್ಲುದು. ಈ ಹಕ್ಕಿ ತನ್ನ ವಾಸ್ತವ್ಯ ಪ್ರದೇಶದಿಂದ  ಹೆಚ್ಚೆಂದರೆ 2 ಕಿ.ಮೀ  ಸಂಚರಿಸುತ್ತವೆ. ಗುಬ್ಬಚ್ಚಿ ವಲಸೆ ಹಕ್ಕಿಯಲ್ಲ.

2012 ನೇ ಇಸವಿಯಲ್ಲಿ  ದೆಹಲಿಯ ರಾಜ್ಯ ಪಕ್ಷಿಯೆಂದು ಗುಬ್ಬಚ್ಚಿಯನ್ನು ಘೋಷಿಸಲಾಗಿದೆ.  ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನವೆಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.

Advertisement

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

ಛಾಯಾಚಿತ್ರ : ಯು ರಾಧಾಕೃಷ್ಣ ರಾವ್ ಬಾಳಿಲ

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |
May 2, 2024
6:51 AM
by: ವಿವೇಕಾನಂದ ಎಚ್‌ ಕೆ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ
ನಮ್ಮ ಮಕ್ಕಳಿಗಾಗಿ ಒಂದು ನೀತಿ ಕಥೆ | ಸಾಧ್ಯವಾದರೆ ಇದನ್ನು ಮಕ್ಕಳಿಗೆ ಓದಿ ಹೇಳಿ ಅಥವಾ ಓದಲು ಹೇಳಿ |
May 1, 2024
4:34 PM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror