ಕರ್ನಾಟಕದ ಸಾಂಪ್ರದಾಯಿಕ ಅಡುಗೆಗಳಲ್ಲಿ ಒಂದು ವಿಶೇಷ ಸ್ಥಾನ ಹೊಂದಿರುವ ಗುಜ್ಜೆ-ಕಡಲೆ ಗಸಿ ರುಚಿಕರ ಹಾಗೂ ಪೌಷ್ಟಿಕ ಆಹಾರ.
ಚಪಾತಿ, ಅನ್ನ ಅಥವಾ ರೋಟಿಯ ಜೊತೆ ಇದು ಸೂಪರ್ ಕಾಂಬಿನೇಶನ್.
ಬೇಕಾಗುವ ಸಾಮಗ್ರಿಗಳು :
- ಗುಜ್ಜೆ – 1 ಕಪ್ (ಚಿಕ್ಕದಾಗಿ ಕತ್ತರಿಸಿ ನೀರಿನಲ್ಲಿ ಇಟ್ಟುಕೊಳ್ಳಿ)
- ಕಡಲೆ – 1/4 ಕಪ್ (ನೆನೆಸಿ)
- ಕೆಂಪು ಮೆಣಸು – 2
- ಜೀರಿಗೆ – 1 ಚಮಚ
- ಕೊತ್ತಂಬರಿ ಬೀಜ – 1 ಚಮಚ
- ಉದ್ದಿನ ಬೇಳೆ – 1/4 ಚಮಚ
- ಕಾಯಿತುರಿ – 1/4 ಕಪ್
ಒಗ್ಗರಣೆಗೆ:
- ಸಾಸಿವೆ
- ಎಣ್ಣೆ
- ಕೆಂಪು ಮೆಣಸು
- ಕರಿಬೇವಿನ ಸೊಪ್ಪು
- ಬೆಳ್ಳುಳ್ಳಿ
ಮಾಡುವ ವಿಧಾನ : ಮೊದಲು ಕಡಲೆ ಮತ್ತು ಗುಜ್ಜೆಯನ್ನು ಉಪ್ಪು, ನೀರು ಸೇರಿಸಿ ಚೆನ್ನಾಗಿ ಬೇಯಿಸಿ. ಕೆಂಪು ಮೆಣಸು, ಜೀರಿಗೆ, ಕೊತ್ತಂಬರಿ ಬೀಜ, ಉದ್ದಿನ ಬೇಳೆ, ಕಾಯಿತುರಿ ಹಾಕಿ ಫ್ರೈ ಮಾಡಿ, ಫ್ರೈ ಮಾಡಿದ ಮಿಶ್ರಣವನ್ನು ಜಾರ್‌ನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ, ಬೇಯಿಸಿದ ಗುಜ್ಜೆ-ಕಡಲೆಗೆ ಈ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕುದಿಸಿ. ಸಾಸಿವೆ, ಎಣ್ಣೆ, ಕೆಂಪು ಮೆಣಸು, ಕರಿಬೇವಿನ ಸೊಪ್ಪು, ಬೆಳ್ಳುಳ್ಳಿ ಹಾಕಿ ಚಟಪಟಾಯಿಸಿ ಸೇರಿಸಿ. ಬಿಸಿ ಬಿಸಿಯಾಗಿ ಸರ್ವ್ ಮಾಡಿ…
ವಿಶೇಷ ಟಿಪ್ಸ್
- ಸ್ವಲ್ಪ ಕಾಯಿ ಹೆಚ್ಚು ಹಾಕಿದರೆ ರುಚಿ ಹೆಚ್ಚುತ್ತದೆ
- ಬೆಳ್ಳುಳ್ಳಿ ಒಗ್ಗರಣೆ ಗಸಿಗೆ ವಿಶೇಷ ಸುವಾಸನೆ ನೀಡುತ್ತದೆ
- ಅನ್ನ ಅಥವಾ ಚಪಾತಿ ಎರಡಕ್ಕೂ ಸೂಪರ್ ಕಾಂಬಿನೇಶನ್
Gujje Kadale Gasi is a traditional Karnataka curry made with breadfruit and soaked chana, blended with roasted coconut spices. It pairs perfectly with chapati or rice.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

