ಗಲ್ಫ್ ಯುದ್ಧದ ಪರಿಣಾಮ | ₹11.8 ಬಿಲಿಯನ್ ಭಾರತೀಯ ಕೃಷಿ ರಫ್ತು ಮಾರುಕಟ್ಟೆ ಅಪಾಯದಲ್ಲಿ

March 17, 2026
6:44 AM
ಗಲ್ಫ್ ಯುದ್ಧದಿಂದ ಭಾರತದ ₹11.8 ಬಿಲಿಯನ್ ಕೃಷಿ-ಆಹಾರ ರಫ್ತು ಅಪಾಯದಲ್ಲಿದೆ. ಸಾಗಾಟ ಅಡಚಣೆ ಮತ್ತು ವೆಚ್ಚ ಏರಿಕೆಯಿಂದ ರೈತರ ಆದಾಯದ ಮೇಲೆ ಪರಿಣಾಮ ಬೀರುವ ಭೀತಿ ಹೆಚ್ಚಾಗಿದೆ.

ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷವು ಭಾರತದ ಕೃಷಿ ರಫ್ತು ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುವ ಸೂಚನೆಗಳು ಕಂಡುಬಂದಿವೆ. ಕಳೆದ 2025ರಲ್ಲಿ ಭಾರತವು ಈ ಪ್ರದೇಶಕ್ಕೆ ಸುಮಾರು $11.8 ಬಿಲಿಯನ್ ಮೌಲ್ಯದ ಕೃಷಿ ಮತ್ತು ಆಹಾರ ಉತ್ಪನ್ನಗಳನ್ನು ರಫ್ತು ಮಾಡಿದ್ದು, ಇದು ದೇಶದ ಒಟ್ಟು ಕೃಷಿ ರಫ್ತಿನಲ್ಲಿ ಒಂದು ಐದನೇ ಭಾಗಕ್ಕಿಂತ ಹೆಚ್ಚು ಪಾಲು ಹೊಂದಿದೆ ಎಂದು ವರದಿಗಳು ಸೂಚಿಸುತ್ತವೆ.

ಸಾಗಾಟ ಮಾರ್ಗಗಳಲ್ಲಿ ಅಡಚಣೆ, ಹಡಗು ವಿಮಾ ವೆಚ್ಚದ ಏರಿಕೆ ಮತ್ತು ಸಾಗಾಟ ಸಮಸ್ಯೆಯು  ರಫ್ತು ವ್ಯವಹಾರಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ವಿವಿಧ ರಾಜ್ಯಗಳ ರೈತರು ಮತ್ತು ಆಹಾರ ಸಂಸ್ಕರಣಾ ಉದ್ಯಮಗಳು ನೇರವಾಗಿ ಹೊಡೆತ ಅನುಭವಿಸಬಹುದು.

ಹೆಚ್ಚು ಅಪಾಯದಲ್ಲಿರುವ ಪ್ರಮುಖ ಉತ್ಪನ್ನಗಳು : ಗಲ್ಫ್ ದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುವ ಕೆಲವು ಉತ್ಪನ್ನಗಳಿಗೆ ‘ಅತ್ಯಧಿಕ ಅಪಾಯ’ ಇರುವುದಾಗಿ ವಿಶ್ಲೇಷಣೆ ತಿಳಿಸಿದೆ. ಅವುಗಳಲ್ಲಿ ಪ್ರಮುಖವಾಗಿ ಮಾಂಸ, ಕೊಬ್ಬರಿ, ಬಾಳೆಹಣ್ಣು, ಜಾಯಿಕಾಯಿ, ಜಾಯಿಪತ್ರೆ, ಏಲಕ್ಕಿ,ಜೀರಿಗೆ, ಕೊತ್ತಂಬರಿ, ಶುಂಠಿ ಹಾಗೂ ಅರಿಶಿನ ಸೇರಿದಂತೆ ಹಲವು ಮಸಾಲೆಗಳು ಗಲ್ಫ್‌ಗೆ ಸಾಗಣೆಯಲ್ಲಿ ಗಮನಾರ್ಹ ಪಾಲು ಹೊಂದಿವೆ. ಈ ಉತ್ಪನ್ನಗಳ ರಫ್ತು ಮಾರುಕಟ್ಟೆ ಗಲ್ಫ್ ಪ್ರದೇಶದ ಮೇಲೆ ಹೆಚ್ಚಿನ ಮಟ್ಟದಲ್ಲಿ ಅವಲಂಬಿತವಾಗಿರುವುದರಿಂದ ಯುದ್ಧದ ಪರಿಣಾಮ ತೀವ್ರವಾಗುವ ಸಾಧ್ಯತೆ ಇದೆ. ಇದಲ್ಲದೆ ಹಾಲಿನ ಕೊಬ್ಬು ಉತ್ಪನ್ನಗಳು, ತೆಂಗಿನ ಎಣ್ಣೆ, ತಾಜಾ ತರಕಾರಿಗಳು, ಹಣ್ಣುಗಳು, ಚಹಾ, ಪಾನೀಯಗಳು ಹಾಗೂ ತಂಬಾಕು ಉತ್ಪನ್ನಗಳು ಕೂಡ ಗಲ್ಫ್ ಮಾರುಕಟ್ಟೆಯ ಮೇಲೆ ದೊಡ್ಡ ಮಟ್ಟದಲ್ಲಿ ಅವಲಂಬಿತವಾಗಿದ್ದು ರಫ್ತು ಕುಸಿತದ ಭೀತಿ ಎದುರಿಸುತ್ತಿವೆ.

ಭಾರತವು ಕಳೆದ ವರ್ಷ ಪಶ್ಚಿಮ ಏಷ್ಯಾಕ್ಕೆ $4.43 ಬಿಲಿಯನ್ ಮೌಲ್ಯದ ಅಕ್ಕಿ ರಫ್ತು ಮಾಡಿದ್ದು, ಇದು ಜಾಗತಿಕ ಅಕ್ಕಿ ರಫ್ತಿನ ಸುಮಾರು 36.7% ಪಾಲು. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ರಫ್ತು ಉದ್ದೇಶದಿಂದ ಬೆಳೆದ ಅಕ್ಕಿ ಉತ್ಪಾದಕರಿಗೆ ಗಲ್ಫ್ ಮಾರುಕಟ್ಟೆಗಳು ಅತ್ಯಂತ ಮುಖ್ಯವಾಗಿವೆ.  ಇದೇ ರೀತಿ ಬಾಳೆಹಣ್ಣು ($396 ಮಿಲಿಯನ್), ಈರುಳ್ಳಿ-ಬೆಳ್ಳುಳ್ಳಿ ($111 ಮಿಲಿಯನ್+), ದ್ವಿದಳ ಧಾನ್ಯಗಳು ಹಾಗೂ ತರಕಾರಿಗಳಿಗೂ ಈ ಪ್ರದೇಶ ಪ್ರಮುಖ ಖರೀದಿದಾರವಾಗಿದೆ.

ಭಾರತವು ಕಳೆದ ವರ್ಷ ಪಶ್ಚಿಮ ಏಷ್ಯಾಕ್ಕೆ $281 ಮಿಲಿಯನ್ ಮೌಲ್ಯದ ಡೈರಿ ಉತ್ಪನ್ನಗಳನ್ನು ರಫ್ತು ಮಾಡಿದ್ದು, ಇದು ಒಟ್ಟು ಡೈರಿ ರಫ್ತಿನ ಸುಮಾರು 29%. ಆಲ್ಕೊಹಾಲ್ಯುಕ್ತ ಮತ್ತು ಆಲ್ಕೊಹಾಲ್ಯುಕ್ತವಲ್ಲದ ಪಾನೀಯಗಳಲ್ಲೂ 40% ಕ್ಕಿಂತ ಹೆಚ್ಚು ರಫ್ತು ಪಾಲು ಈ ಪ್ರದೇಶದ ಮೇಲೆ ಅವಲಂಬಿತವಾಗಿದೆ.

ರೈತರ ಮೇಲೆ ನೇರ ಪರಿಣಾಮ: ಗಲ್ಫ್ ದೇಶಗಳು ಭಾರತದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಆಗಿದ್ದವು. ಆದರೆ ಯುದ್ಧ ಮುಂದುವರಿದರೆ ರೈತರ ಆದಾಯ ಕುಸಿತ, ಬೆಲೆ ಇಳಿಕೆ ಹಾಗೂ ರಫ್ತು ಸರಪಳಿ ವ್ಯತ್ಯಯದಂತಹ ಸಮಸ್ಯೆಗಳು ಉಂಟಾಗಬಹುದು. ಪರ್ಯಾಯ ಸಾಗಾಟ ಮಾರ್ಗಗಳ ಹುಡುಕಾಟ ನಡೆಯುತ್ತಿದ್ದರೂ ಪರಿಸ್ಥಿತಿ ಮುಂದುವರಿದರೆ ನಷ್ಟ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

The ongoing Gulf conflict is threatening nearly $11.8 billion worth of India’s agricultural and food exports due to disrupted shipping routes and rising logistics costs. High dependence on Gulf markets for products like meat, rice, fruits, spices and dairy could directly impact farmers’ income and export businesses if the crisis continues.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅತಿಹೆಚ್ಚು ಮಳೆ ಬೀಳುವ ಬೆಟ್ಟಗಳು ಒಣಗುತ್ತಿವೆಯೇ? – ಮೇಘಾಲಯದ ನೀರಿನ ಸಂಕಷ್ಟದ ಎಚ್ಚರಿಕೆ
March 17, 2026
7:14 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 16-03-2026 | ಹವಾಮಾನದಲ್ಲಿ ಏಕಾಏಕಿ ಬದಲಾವಣೆ – ರಾಜ್ಯದ ಹಲವೆಡೆ ಸಂಜೆ ಮಳೆ ಸಾಧ್ಯತೆ
March 16, 2026
3:26 PM
by: ಸಾಯಿಶೇಖರ್ ಕರಿಕಳ
ಎಲ್ಲೆಡೆ ಹೆಚ್ಚಾಗುತ್ತಿರುವ ಬಿಸಿಲ ಬೇಗೆ ; ಪ್ರಾಣಿ-ಪಕ್ಷಿಗಳಿಗೆ ನೀರಿನ ಅಭಾವ
March 16, 2026
7:13 AM
by: ಮಿರರ್‌ ಡೆಸ್ಕ್
ಮಹಿಳಾ ಕೃಷಿಕರ ಸಬಲೀಕರಣಕ್ಕೆ ಜಾಗತಿಕ ಘೋಷಣೆ : 900ಕ್ಕೂ ಹೆಚ್ಚು ಕೃಷಿ ಸಂಸ್ಥೆಗಳನ್ನು ಜೋಡಿಸುವ ರಾಷ್ಟ್ರೀಯ ಜೆಂಡರ್ ಪ್ಲಾಟ್‌ಫಾರ್ಮ್‌ ಘೋಷಣೆ
March 16, 2026
7:06 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror