ಚುನಾವಣಾ ಕಣ | ಕೃಷಿ ರಕ್ಷಣೆಯ ಕೋವಿ ಠೇವಣಿಗೆ ವಿನಾಯಿತಿ ನೀಡಲು ಕೃಷಿಕರ ಒತ್ತಾಯ

March 30, 2023
3:45 PM

ಚುನಾವಣೆ ಘೋಷಣೆಯಾದ ತಕ್ಷಣವೇ ಕೃಷಿ ರಕ್ಷಣೆಯ ಬಂದೂಕು ಡಿಪಾಸಿಟ್ ಇಡಲು ಪೊಲಿಸ್ ಇಲಾಖೆಯಿಂದ ಕೃಷಿಕರಿಗೆ ಸೂಚನೆ ಬರುತ್ತಿದೆ. ಕೃಷಿ ರಕ್ಷಣೆಯ ಬಂದೂಕುಗಳನ್ನು ಠೇವಣಿ ಇಡುವುದಕ್ಕೆ ವಿನಾಯಿತಿ ನೀಡಬೇಕು ಎಂದು ಕೃಷಿಕರು ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

Advertisement
Advertisement

ಪ್ರಜಾಪ್ರಭುತ್ವ ದೇಶದಲ್ಲಿ ವರ್ಷ ವರ್ಷವೂ ಒಂದಲ್ಲ ಒಂದು ಚುನಾವಣೆ ಇದೆ. ಪ್ರತಿ ಬಾರಿಯೂ ಚುನಾವಣೆ ನಡೆಯುವ ಹಂತದಲ್ಲಿ ಠೇವಣಿ ಇಟ್ಟಲ್ಲಿ ನಮ್ಮ ಬೆಳೆರಕ್ಷಣಾ ಉದ್ದೇಶಕ್ಕೆ ಕೊಟ್ಟ ಕೋವಿಯಿಂದ ಪ್ರಯೋಜನವೇನು? ಬೆಳೆ ರಕ್ಷಣೆ ಬಿಟ್ಟು ಇನ್ನು ಯಾವುದೇ ಉದ್ದೇಶಕ್ಕೆ ತನ್ನ ಬಂದೂಕನ್ನು ಬಳಸಬಾರದೆಂಬ ಸ್ಪಷ್ಟ ಕಲ್ಪನೆಯೂ, ಜವಾಬ್ದಾರಿಯೂ ಕೃಷಿಕರಲ್ಲಿದೆ. ಹಾಗೊಂದು ವೇಳೆ ಅಪರಾಧಿ ಹಿನ್ನೆಲೆ ಇದ್ದವರಿಗೆ, ಅಥವಾ ಅಪರಾಧಕ್ಕೆ ಬಳಸಿಕೊಂಡವರಿಗೆ ಈ ಮಾನದಂಡ ಅಳವಡಿಸಿದ್ದರೆ ಅದಕ್ಕೊಂದು ಅರ್ಥವಿದೆ, ಆದರೆ ಪರವಾನಗಿದಾರ ರೈತರೆಲ್ಲರೂ ಚುನಾವಣಾ ಅಪರಾಧಕ್ಕೆ ತನ್ನ ಬಂದೂಕನ್ನು ಬಳಸುತ್ತಾರೆ ಎಂಬಂತೆ ಘೋಷಣೆಯಾದ ದಿನವೇ ಬಂದೂಕನ್ನು ಠೇವಣಿ ಇರಿಸುವ ಸೂಚನೆಯನ್ನು ಹೊರಡಿಸುವುದು ಸರಿಯಲ್ಲ ಎಂಬುದು ಕೃಷಿಕರ ಬೇಡಿಕೆ.

ಯಾವ ಕಾರಣಕ್ಕೂ ಬೆಳೆ ರಕ್ಷಣೆಗೆ ನೀಡಿದ ಬಂದೂಕನ್ನು ಠೇವಣಿ ಇಡಲು ಹೇಳಬೇಡಿ. ರೈತರದ ನಾವು ಬೆಳೆ ರಕ್ಷಣೆಗಲ್ಲದೆ ಯಾವುದೇ ಅಪರಾಧ ಪ್ರಕ್ರಿಯೆಗೆ ಬಳಸುವುದಿಲ್ಲ ಮತ್ತು ಬಳಸಬಾರದೆಂಬ ಎಂಬ ಸಂಪೂರ್ಣ ಎಚ್ಚರಿಕೆ ನಮಗಿದೆ. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ. ಬಂದೂಕು ಠೇವಣಿ ಇಡುವ ಮತ್ತೆ ತರುವ ಈ ಎಲ್ಲಾ ಸಮಸ್ಯೆಗಳಿಂದ ಪಾರು ಮಾಡಿ ಎಂದು ಮನವಿ ಮಾಡಿದ್ದಾರೆ.

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಕೃಷಿಕರ ಪರವಾಗಿ ಸಂಘ ಮಹಾಸಭೆಯಲ್ಲಿ ಕೃಷಿಕರ ಬೇಡಿಕೆಯನ್ನು ಮನ್ನಿಸಿ ಜಿಲ್ಲಾಡಳಿತಕ್ಕೆ ಈಗಾಗಲೇ ಒತ್ತಾಯ ಮಾಡಿದೆ. ತಕ್ಷಣವೇ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್ ಕಿನಿಲ ಒತ್ತಾಯಿಸಿದ್ದಾರೆ.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಜ್ಯದ ವಿವಿಧೆಡೆ ಮಳೆ –  ಬಹುತೇಕ ಜಲಾಶಯಗಳು ಭರ್ತಿ
July 29, 2025
8:46 PM
by: The Rural Mirror ಸುದ್ದಿಜಾಲ
ನಿರಂತರ 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ | ವಿಶ್ವ ದಾಖಲೆ ಸಾಧನೆ ಮಾಡಿದ ಮಂಗಳೂರಿನ ರೆಮೋನಾ ಪಿರೇರಾ
July 29, 2025
8:34 PM
by: The Rural Mirror ಸುದ್ದಿಜಾಲ
ಕಳೆದ 11 ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆ | ಲೋಕಸಭೆಯಲ್ಲಿ ಕೇಂದ್ರ ಕೃಷಿ  ಸಚಿವರ  ಹೇಳಿಕೆ
July 29, 2025
8:25 PM
by: The Rural Mirror ಸುದ್ದಿಜಾಲ
ಬಿಎಸ್ ಎನ್ ಎಲ್  ಪರಿಶೀಲನಾ ಸಭೆ | ʻಬಿಎಸ್ಎನ್ಎಲ್‌ʼ ಸೇವೆಗಳ ಸುಧಾರಣೆಗೆ ಕ್ರಮ
July 29, 2025
8:19 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group