ಅಯ್ಯಪ್ಪ ಮಾಲೆ ಧರಿಸಿ ಮದ್ಯ ಸೇವನೆ | ಮಾಲೆ ತೆಗೆಸಿದ ಗುರುಸ್ವಾಮಿ |

December 31, 2022
10:25 PM

ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಮದ್ಯ ಸೇವಿಸಿ ದೇವಸ್ಥಾನಕ್ಕೆ ಬಂದಿದ್ದ ಪಾನಮತ್ತ ಸ್ವಾಮಿಗೆ ಗೋಕುಲ ಗ್ರಾಮದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಕಪಾಳಮೋಕ್ಷ ಮಾಡಿ, ಮಾಲೆ ತೆಗೆಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಗೋಕುಲದ ಮೋಹನ ಗುರುಸ್ವಾಮಿ ಅವರು ಮದ್ಯ ಸೇವಿಸಿ ದೇವಸ್ಥಾನಕ್ಕೆ ಬಂದಿದ್ದ ಮಾಲಾಧಾರಿ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ್ದಾರೆ. ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದವರು ಕಠಿಣ ವ್ರತ ಮಾಡಬೇಕು. ಆದರೆ ಈ ವ್ಯಕ್ತಿ ಮಾಲೆ ಧರಿಸಿ ಮದ್ಯ ಸೇವಿಸಿ ಬಂದು ವ್ರತ ಭಂಗ ಮಾಡಿದ್ದ. ಆತನ ಸನಿಹಕ್ಕೆ ಹೋದರೆ ಮದ್ಯದ ವಾಸನೆ ಮೂಗು ಬರುತ್ತಿತ್ತು. ಹೀಗಾಗಿ ಮದ್ಯ ಸೇವಿಸಿ ದೇವರ ಸನ್ನಿಧನಕ್ಕೆ ತೆರಳಿದ್ದ ವ್ಯಕ್ತಿ ಗುರು ಸ್ವಾಮಿ ಬಳಿ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಗುರುಸ್ವಾಮಿ ವ್ಯಕ್ತಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಸ್ಥಳದಲ್ಲೇ ಅಯ್ಯಪ್ಪ ಮಾಲೆ ತೆಗೆಸಿದ್ದಾರೆ. ಕಪ್ಪುಬಟ್ಟೆಯನ್ನೂ ತೆಗೆದು  ಸೂಚಿಸಿದ್ದಾರೆ. ಗುರುಸ್ವಾಮಿಯಾಗಿ ಇದು ನನ್ನ ಜವಾಬ್ದಾರಿ, ಸನ್ನಿದಾನದ ಪಾವಿತ್ರ್ಯತೆ ಉಳಿಸಬೇಕು ಎಂದು ಗುರುಸ್ವಾಮಿ ಹೇಳಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ದೇಶೀಯ ಗ್ರಾಹಕರಿಗೆ ಇಂಧನ ಕೊರತೆ ಇಲ್ಲ: CNG – PNG ಪೂರೈಕೆ ನಿರಂತರ – ಸಚಿವ ಹರ್ದೀಪ್ ಸಿಂಗ್ ಪುರಿ
March 12, 2026
7:20 AM
by: ಮಿರರ್‌ ಡೆಸ್ಕ್
ಪೆಟ್ರೋಲಿಯಂಗೆ ಪರ್ಯಾಯದತ್ತ : ಕೃಷಿ ಸಂಪನ್ಮೂಲಗಳಿಂದ ಬಯೋ ಉತ್ಪನ್ನಗಳತ್ತ ಆದ್ಯತೆ
March 12, 2026
7:16 AM
by: ಮಿರರ್‌ ಡೆಸ್ಕ್
ಗೋವಾದಲ್ಲಿ ಹಲಸು ಉತ್ಪಾದನೆ ಕುಸಿತ ಇಲ್ಲ | ಉತ್ತಮ ದರಕ್ಕಾಗಿ ಓಪನ್‌ ಮಾರ್ಕೆಟ್‌ಗೆ ರೈತರ ಒಲವು
March 12, 2026
7:11 AM
by: ಮಿರರ್‌ ಡೆಸ್ಕ್
ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ ಇಲ್ಲ | ಪ್ರತಿ 25 ದಿನಕ್ಕೊಂದು ಸಿಲಿಂಡರ್‌ ಪೂರೈಕೆ – ಸಚಿವ ಮುನಿಯಪ್ಪ ಭರವಸೆ
March 12, 2026
7:08 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror