ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಮದ್ಯ ಸೇವಿಸಿ ದೇವಸ್ಥಾನಕ್ಕೆ ಬಂದಿದ್ದ ಪಾನಮತ್ತ ಸ್ವಾಮಿಗೆ ಗೋಕುಲ ಗ್ರಾಮದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಕಪಾಳಮೋಕ್ಷ ಮಾಡಿ, ಮಾಲೆ ತೆಗೆಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಗೋಕುಲದ ಮೋಹನ ಗುರುಸ್ವಾಮಿ ಅವರು ಮದ್ಯ ಸೇವಿಸಿ ದೇವಸ್ಥಾನಕ್ಕೆ ಬಂದಿದ್ದ ಮಾಲಾಧಾರಿ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ್ದಾರೆ. ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದವರು ಕಠಿಣ ವ್ರತ ಮಾಡಬೇಕು. ಆದರೆ ಈ ವ್ಯಕ್ತಿ ಮಾಲೆ ಧರಿಸಿ ಮದ್ಯ ಸೇವಿಸಿ ಬಂದು ವ್ರತ ಭಂಗ ಮಾಡಿದ್ದ. ಆತನ ಸನಿಹಕ್ಕೆ ಹೋದರೆ ಮದ್ಯದ ವಾಸನೆ ಮೂಗು ಬರುತ್ತಿತ್ತು. ಹೀಗಾಗಿ ಮದ್ಯ ಸೇವಿಸಿ ದೇವರ ಸನ್ನಿಧನಕ್ಕೆ ತೆರಳಿದ್ದ ವ್ಯಕ್ತಿ ಗುರು ಸ್ವಾಮಿ ಬಳಿ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಗುರುಸ್ವಾಮಿ ವ್ಯಕ್ತಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಸ್ಥಳದಲ್ಲೇ ಅಯ್ಯಪ್ಪ ಮಾಲೆ ತೆಗೆಸಿದ್ದಾರೆ. ಕಪ್ಪುಬಟ್ಟೆಯನ್ನೂ ತೆಗೆದು ಸೂಚಿಸಿದ್ದಾರೆ. ಗುರುಸ್ವಾಮಿಯಾಗಿ ಇದು ನನ್ನ ಜವಾಬ್ದಾರಿ, ಸನ್ನಿದಾನದ ಪಾವಿತ್ರ್ಯತೆ ಉಳಿಸಬೇಕು ಎಂದು ಗುರುಸ್ವಾಮಿ ಹೇಳಿದ್ದಾರೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…