ಗುತ್ತಿಗಾರು | ಆಜಾದಿ ಕಾ ಅಮೃತಮಹೋತ್ಸವ ಆಚರಣೆ | ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ |

September 18, 2022
10:19 PM

ಕರ್ನಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ ಮತ್ತು ಗುತ್ತಿಗಾರು ಸೈಂಟ್ ಮೇರಿಸ್ ಚರ್ಚ್  ಸಂಯುಕ್ತ ಆಶ್ರಯದಲ್ಲಿ ಗುತ್ತಿಗಾರು ಗ್ರಾಮದ ಪ್ರೌಢ ಶಾಲಾ ಮಕ್ಕಳಿಗೆ 75 ನೇ ಸ್ವಾತಂತ್ರ್ಯೋತ್ಸವ  ಪ್ರಯುಕ್ತ “ಪ್ರಜಾಪ್ರಭುತ್ವ ದೇಶ, ನನ್ನ ಭಾರತ” ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸ್ಫರ್ಧೆತ ಬಹುಮಾನ ವಿತರಣಾ ಕಾರ್ಯಕ್ರಮ ಭಾನುವಾರ ಗುತ್ತಿಗಾರು ಸೈಂಟ್ ಮೇರಿಸ್ ಚರ್ಚ್ ಗುತ್ತಿಗಾರು ವಠಾರದಲ್ಲಿ ನಡೆಯಿತು.

Advertisement

ಗುತಿಗಾರು ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ  ನೆಲ್ಸನ್ ಕಾಸ್ಟಲೀನೋ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ನಮ್ಮ ದೇಶ ವೈವಿದ್ಯತೆಯಿಂದ ಕೂಡಿದ ದೇಶ ಇಲ್ಲಿ ಎಲ್ಲರೂ ಸಾಮರಸ್ಯ ಮತ್ತು ಶಾಂತಿ ಸೌಹಾರ್ದತೆಯನ್ನು ಪಾಲನೆ ಮಾಡುವಾಗ ನಮ್ಮ ದೇಶ ಬಲಿಷ್ಠವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ  ಅತಿಥಿಗಳಾಗಿದ್ದ ಪತ್ರಕರ್ತ ಮಹೇಶ್ ಪುಚ್ಚಪಾಡಿ ಪ್ರಜಾಪ್ರಭುತ್ವ ಮೌಲ್ಯಗಳು ಹಾಗೂ ಗ್ರಾಮೀಣ ಭಾರತದ ಬಗ್ಗೆ ಮಾತನಾಡಿ, ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಇನ್ನಷ್ಟು ಬೆಳೆಸುವುದರ ಜೊತೆಗೆ ಧಾರ್ಮಿಕ ಕೇಂದ್ರಗಳ, ಸಂಘಟನೆಗಳ ಮೂಲಕ ಪ್ರಜಾಪ್ರಭುತ್ವದ ಉಳಿವಿಗೆ  ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ಭಾರತ ಬೆಳೆದ ಹಾದಿ ಹಾಗೂ ಮುಂದೆ ಬೆಳೆಯಬೇಕಾದ ಹಾದಿಗಳ ಬಗ್ಗೆ ಯೋಚಿಸವೇಕಾಗಿದೆ. ಗ್ರಾಮೀಣ ಭಾರತ ಸಶಕ್ತವಾಗುವ ಮೂಲಕ ಭಾರತವನ್ನು ಬೆಳೆಸಬೇಕಿದೆ ಎಂದರು.

ಧರ್ಮಗುರು ಫಾ ಆದರ್ಶ್ ಜೋಸೆಫ್ ಮಾತನಾಡಿ ಎಲ್ಲರಲ್ಲೂ ಭಗವಂತನ ಚೇತನ ಇದೆ. ಒಬ್ಬರೊಬ್ಬರನ್ನು ಅರ್ಥ ಮಾಡಿಕೊಂಡು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಾಗ ಸಮಾಜದಲ್ಲಿ ಸಾಮರಸ್ಯ ಇರುತ್ತದೆ ಹಾಗೂ ಗ್ರಾಮೀಣ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲಿ ಭಾಗವಹಿಸಿ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಬೇಕೆಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸುಬ್ರಮಣ್ಯ ಠಾಣೆಯ ಎ ಎಸ್ ಐ ಥೋಮಸ್. ಇ . ಜಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.

ಕೆ. ಎಸ್. ಎಂ. ಸಿ. ಎ ಗುತ್ತಿಗಾರು ಘಟಕದ ಅಧ್ಯಕ್ಷ  ಜೋರ್ಜ್. ಕೆ.ಎಂ ಸಭಾಧ್ಯಕ್ಷತೆಯನ್ನು ವಹಿಸಿದರು. ಕರ್ನಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ ಕೇಂದ್ರ ಸಮಿತಿಯ ಬಿಟ್ಟಿ ಬಿ ನೆಡುನೀಲಂ ಪ್ರಸ್ತಾವಿಕ ಭಾಷಣ ಮಾಡಿದರು. . ಎಸ್. ಎಂ. ಸಿ. ಎ ಗುತ್ತಿಗಾರು ಘಟಕದ ಕಾರ್ಯದರ್ಶಿ ಸಿಜೊ ಅಬ್ರಹಾಂ ಸ್ವಾಗತಿಸಿ, ಕೋಶಾಧಿಕಾರಿ  ಶೈಜು ವಂದಿಸಿದರು.  ಜಿಸ್ಮಿ ಲಿಜೊ ಕಾರ್ಯಕ್ರಮ ನಿರೂಪಿಸಿದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರತದಿಂದ ‘ಆಪರೇಷನ್ ಸಿಂಧೂರ್’ | ಭಯೋತ್ಪಾದಕ ಮೂಲಸೌಕರ್ಯಗಳ ನೆಲೆಗಳ ನಾಶ | 9 ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ |
May 7, 2025
6:05 AM
by: ದ ರೂರಲ್ ಮಿರರ್.ಕಾಂ
ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?
May 6, 2025
7:44 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |
May 6, 2025
7:18 AM
by: ದ ರೂರಲ್ ಮಿರರ್.ಕಾಂ
ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ
May 6, 2025
7:02 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group