Advertisement
ಸುದ್ದಿಗಳು

ಗುತ್ತಿಗಾರು ಚರ್ಚ್‌ನಲ್ಲಿ ಸೌಹಾರ್ದ ಕೂಟ | ಸ್ನೇಹಮಯ ವಾತಾವರಣದಿಂದಲೇ ಭಗವಂತ ನೆಲೆಯಾಗಲು ಸಾಧ್ಯ |

Share

ಸಮಾಜದಲ್ಲಿ ಸ್ನೇಹಮಯ ವಾತಾವರಣ ಇದ್ದಾಗ ಮಾತ್ರವೇ ಭಗವಂತ ಆಲಯಗಳಲ್ಲಿ ನೆಲೆಸಲು ಸಾಧ್ಯ. ಧರ್ಮಗಳ ಒಳಗೆ ಸಂಘರ್ಷ, ಸಮಾಜದಲ್ಲಿ ಸಂಘರ್ಷ ಇದ್ದಾಗ ಯಾವತ್ತೂ ಶಾಂತಿ ಇರಲು ಸಾಧ್ಯವಿಲ್ಲ. ಶಾಂತಿ ಇಲ್ಲದ ಕಡೆಗಳಲ್ಲಿ  ಭಗವಂತ ನೆಲೆಸಲು ಸಾಧ್ಯವಿಲ್ಲ ಎಂದು  ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್‌ ರೆ.ಫಾ.ಡಾ. ಲಾರೆನ್ಸ್‌ ಎಂ ಟಿ ಹೇಳಿದರು.

Advertisement
Advertisement

ಅವರು ಗುತ್ತಿಗಾರಿನ ಸಂತ ಮೆರೀಸ್‌ ಚರ್ಚ್‌ ನ ಸಭಾಭವನದಲ್ಲಿ ಭಾನುವಾರ ಸಂಜೆ ನಡೆದ ಸೌಹಾರ್ದ ಕೂಟದಲ್ಲಿ ಮಾತನಾಡಿದರು. ವಿವಿಧ ಗಣ್ಯರು ಈ ಸೌಹಾರ್ದ ಸಭೆಯಲ್ಲಿ ಭಾಗವಹಿಸಿದ್ದರು. ಸಮಾಜದಲ್ಲಿ ಸಾಮರಸ್ಯ  ಮತ್ತು ಐಕ್ಯತೆ ಮೂಡಿಸುವ ಹಾಗೂ ಬೆಳೆಸುವ ನಿಟ್ಟಿನಲ್ಲಿ  ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಭೆಯಲ್ಲಿ ಗಣ್ಯರು ಮಾತನಾಡಿ, ಕ್ರೈಸ್ತ ಸಮುದಾಯದ ಕೊಡುಗೆ ಹಾಗೂ ಸಮಾಜದಲ್ಲಿ ಕ್ರೈಸ್ತರು ಬೆಸೆದುಕೊಂಡಿರುವ ರೀತಿಯ ಬಗ್ಗೆ ಹೇಳಿದರು.

Advertisement

ಬಳಿಕ ಮಾತನಾಡಿದ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್‌ ರೆ.ಫಾ.ಡಾ. ಲಾರೆನ್ಸ್‌ ಎಂ ಟಿ, ಶಾಂತಿ, ಸೌಹಾದರ್ತೆ ನೆಲೆಯಾದರೆ ಮಾತ್ರವೇ ಸಮಾಜದಲ್ಲಿ ಉತ್ತಮ ಬಾಂಧವ್ಯ ಬೆಳೆಯಲು ಸಾಧ್ಯವಿದೆ. ಯಾವುದೇ ಕಾರಣಕ್ಕೂ ಅಶಾಂತಿಗಳು ಸೃಷ್ಟಿಯಾಗಬಾರದು. ಭಗವಂತನೂ ಕೂಡಾ ಇದೇ ವಾತಾವರಣವನ್ನು ಬಯಸುತ್ತಾರೆ. ಎಲ್ಲಾ ಧರ್ಮಗಳಲ್ಲೂ ಕೆಲವೊಮ್ಮೆ ಅಚಾತುರ್ಯಗಳು,  ತಪ್ಪುಗಳಾಗಬಹುದು. ಅದನ್ನು ತಕ್ಷಣವೇ ಸರಿಪಡಿಸಿಕೊಳ್ಳುವ ನೇತೃತ್ವವನ್ನು ಧರ್ಮಗುರುಗಳು ವಹಿಸಿಕೊಳ್ಳಬೇಕು ಎಂದರು.

ಸಭೆಯಲ್ಲಿ ಗುತ್ತಿಗಾರು ಸಂತ ಮೆರೀಸ್‌ ಚರ್ಚ್‌‌ ಧರ್ಮಗುರು ಫಾ.ಆದರ್ಶ್‌ ಜೋಸೆಫ್‌, ಗುತ್ತಿಗಾರು ಮಸೀದಿಯ ಉಸ್ತಾದ್‌ ಅಬ್ದುಲ್‌ ನಝರ್‌, ಮುಖಂಡರಾದ ಭರತ್‌ ಮುಂಡೋಡಿ, ಪಿ ಸಿ ಜಯರಾಮ, ವೆಂಕಟ್‌ ದಂಬೆಕೋಡಿ, ಡಾ.ಯು ಪಿ ಶಿವಾನಂದ,  ವೆಂಕಟ್‌ ವಳಲಂಬೆ, ಲಕ್ಷ್ಮೀಶ ಗಬ್ಲಡ್ಕ, ಅಬ್ಬಾಸ್‌ ವಳಲಂಬೆ, ಪ್ರವೀಣ್‌ ಮುಂಡೋಡಿ, ಮಹೇಶ್‌ ಪುಚ್ಚಪ್ಪಾಡಿ ಹಾಗೂ ಚರ್ಚ್‌  ಆಡಳಿತ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.

Advertisement

ಬಿಟ್ಟಿ ನೆಡುನೀಲಂ ಸ್ವಾಗತಿಸಿ ನಿರೂಪಿಸಿದರು.

 

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸಮಾಜಕ್ಕೆ ಸೇವೆ ಮಾಡುವುದು ಎಂದರೆ ಹಲವು ಆಯಾಮಗಳಿವೆ | ಹವಾಮಾನ ಹೇಳುವುದೂ ಒಂದು ಸೇವೆ |

ಸಮಾಜಕ್ಕೆ ಸೇವೆ ಮಾಡೋದು ಅಂದರೆ ಅದಕ್ಕೆ ಹಲವು ಆಯಾಮಗಳಿವೆ. ನಿಮ್ಮಲ್ಲಿರುವ ಜ್ನಾನವನ್ನು ಜನರಿಗೆ…

1 hour ago

ಮುಳಿಯ ಚಿನ್ನೋತ್ಸವ | ಸ್ಪೆಷಲ್ ರುದ್ರಾಕ್ಷಿ ಕಲೆಕ್ಷನ್ ಅನಾವರಣ

ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಸಣ್ಣ ಸಣ್ಣ ರುದ್ರಾಕ್ಷಿಯಿಂದ ಕೈ ಬಳೆ, ಉಂಗುರ, ಮಾಲೆಯಾಗಿ ಸಿದ್ದಗೊಂಡ…

2 hours ago

ಸುಸ್ಥಿರ ಕೃಷಿ ತರಬೇತಿ ಕಾರ್ಯಗಾರ | ಯುವ ಕೃಷಿಕರಿಗೆ ಕೃಷಿ ಬಗ್ಗೆ ಮಾಹಿತಿ

ಮೂರು ದಿನಗಳ 'ಸುಸ್ಥಿರ ಕೃಷಿ ತರಬೇತಿ'(Sustainable Agriculture Training) ಕಾರ್ಯಾಗಾರ ಮೇ.28 ರಿಂದ…

18 hours ago

ಕೆರೆಯಲ್ಲಿ ಸಾಕಿದ್ದ ಮೀನುಗಳ ಮಾರಣಹೋಮ | ಬೃಹತ್‌ ಗಾತ್ರ ಮೀನು ಸಾವು | ಅಪಾರ ನಷ್ಟ |

ದಾವಣಗೆರೆ(Davanagere) ತಾಲೂಕಿನ ಬೇತೂರು ಗ್ರಾಮದಲ್ಲಿರುವ  ಕೆರೆಯಲ್ಲಿ(Lake) ಮೀನುಗಳ(Fish) ಮಾರಣಹೋಮವಾಗಿದೆ(Dead). ಈ ಕೆರೆಯಲ್ಲಿ 3…

19 hours ago

ಮೇ 31ಕ್ಕೆ ದೇಶದಲ್ಲಿ ಮುಂಗಾರು ಪ್ರವೇಶ ಸಾಧ್ಯತೆ | ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಮಳೆ |

ಮೇ 31ರಿಂದ ದೇಶದಲ್ಲಿ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ…

19 hours ago