ಗುತ್ತಿಗಾರು | ರಸ್ತೆ ಬದಿ ಕಸ ಎಸೆದವರಿಗೆ ದಂಡ ವಿಧಿಸಿದ ಪಂಚಾಯತ್‌ | ಎಚ್ಚರಿಕೆ ಇನ್ನು ಮುಂದೆ ಗುತ್ತಿಗಾರು ಆಸುಪಾಸಿನಲ್ಲಿ ರಸ್ತೆ ಬದಿ ಕಸ ಎಸೆದರೆ ದಂಡ ಬೀಳುತ್ತೆ…! |

May 29, 2024
8:53 PM
ರಸ್ತೆ ಬದಿ ಕಸ ಎಸೆದವರನ್ನು ಹುಡುಕಿ ಗುತ್ತಿಗಾರು ಗ್ರಾಪಂ ದಂಡ ವಿಧಿಸಿದೆ ಮಾತ್ರವಲ್ಲ ಕಸ ಎಸೆದವರಿಂದಲೇ ಕಸ ಹೆಕ್ಕಿಸಿದೆ.

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕಳೆದ ಕೆಲವು ಸಮಯಗಳಿಂದ ಪ್ರತೀ ವಾರ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಸ್ವಚ್ಛತೆಗಾಗಿ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತೀ ವಾರ ಅಭಿಯಾನ ನಡೆಯುತ್ತದೆ. ಹಾಗಿದ್ದರೂ ರಸ್ತೆ ಬದಿ ಕಸ ಎಸೆಯುವುದು ಕಡಿಮೆಯಾಗಿರಲಿಲ್ಲ. ಇದೀಗ ರಸ್ತೆ ಬದಿ ಕಸ ಎಸೆದ ಪ್ರಕರಣವೊಂದರಲ್ಲಿ ಪತ್ತೆ ಮಾಡಿ ಗುತ್ತಿಗಾರು ಗ್ರಾಪಂ ದಂಡ ವಿಧಿಸಿದೆ. …….ಮುಂದೆ ಓದಿ…..

Advertisement

ಗುತ್ತಿಗಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ರಸ್ತೆ ಬದಿ ಕಸ ಎಸೆಯದಂತೆ  ಕಳೆದ ಹಲವು ಸಮಯಗಳಿಂದ ಜಾಗೃತಿ ಮೂಡಿಸಲಾಗುತ್ತಿದೆ. ದಯವಿಟ್ಟು ರಸ್ತೆ ಬದಿ, ಕಾಡಿನ ಅಂಚಿನಲ್ಲಿ ಕಸ ಎಸೆಯಬೇಡಿ ಎಂದು ಪದೇಪದೇ ಮನವಿ ಮಾಡಲಾಗುತ್ತಿತ್ತು. ಹಾಗಿದ್ದರೂ ಕಸ ಎಸೆಯುವ ಪ್ರವೃತ್ತಿ ಕಡಿಮೆಯಾಗಿರಲಿಲ್ಲ.ಎರಡು ದಿನದ ಹಿಂದೆ ಗುತ್ತಿಗಾರು-ಬಳ್ಪ ರಸ್ತೆಯ ಚತ್ರಪ್ಪಾಡಿ ಬಳಿ ವಾಹನದಲ್ಲಿ ತಂದು ಕಸ ಸುರಿಯಲಾಗಿತ್ತು. ಹೀಗೆ ಕಸ ಸುರಿದರನ್ನು ಪತ್ತೆ ಮಾಡಿ ಗ್ರಾ ಪಂ ಆಡಳಿತವು 1000 ರೂಪಾಯಿ ದಂಡ ವಿಧಿಸಿದೆ ಹಾಗೂ ಕಸ ಎಸೆದವರಿಂದಲೇ ಕಸ ಹೆಕ್ಕಿಸಿದೆ.

ರಸ್ತೆ ಬದಿ ಎಸೆದಿರುವ ತ್ಯಾಜ್ಯ
ದಂಡ ವಿಧಿಸಿರುವುದು

ಗುತ್ತಿಗಾರಿನ ವಿವಿದೆಡೆ ಈಗಲೂ ಕಸ ಎಸೆಯಲಾಗುತ್ತಿದೆ.ಹೀಗೆ ಕಸ ಎಸೆದವರ ಬಗ್ಗೆ  ಗ್ರಾಮ ಪಂಚಾಯತ್‌ ಗೆ ಸಾರ್ವಜನಿಕರೂ ಮಾಹಿತಿ ಹಾಗೂ ಫೋಟೊ ಸಹಿತ ದಾಖಲೆ ನೀಡಿ ದಂಡ ವಿಧಿಸಲು ಒತ್ತಾಯ ಮಾಡುವುದು ಹಾಗೂ ಕಸವನ್ನು ಹಾಕಿದವರಿಂದಲೇ ತೆಗೆಯುವಂತೆ ಒತ್ತಾಯ ಮಾಡಬಹುದಾಗಿದೆ.

ಬಳ್ಪ ಕಾಡಿನಲ್ಲಿ ಎಸೆದಿರುವ ತ್ಯಾಜ್ಯ

ಗುತ್ತಿಗಾರು-ಬಳ್ಪ ರಸ್ತೆಯ ನಡುವೆ ಕಾಡಿನ ನಡುವೆ ಸಾಕಷ್ಟು ಪ್ರಮಾಣದಲ್ಲಿ ಕಸ, ಕೋಳಿತ್ಯಾಜ್ಯ ಸೇರಿದಂತೆ ಇತರ ವಸ್ತುಗಳನ್ನು ಕಾಡಿನಲ್ಲಿ ಎಸೆಯುವ ಬಗ್ಗೆ ಈಗಾಗಲೇ ಮಾಹಿತಿ ಬಂದಿದ್ದು, ಈ ಬಗ್ಗೆಯೂ ಕಾರ್ಯಾಚರಣೆ ನಡೆಸಿ ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದು ಎಂದು ಸಾರ್ವಜನಿಕರು ಹೇಳಿದ್ದಾರೆ. ಅಲ್ಲದೆ ಗ್ರಾಪಂ ಕೂಡಾ ಕಾಡಿನಲ್ಲಿ ಕಸ ಎಸೆಯುವವರ ವಿರುದ್ಧ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕಿದೆ. ಬಳ್ಪ ಕಾಡಿನ ರಸ್ತೆ ಬದಿ ಎಸೆಯುವ ಕಸವು ಹರಿಯುವ ಹೊಳೆಗೆ ಸೇರುತ್ತಿದೆ.ಈ ನೀರನ್ನೇ ಹಲವು ಮಂದಿ ಕುಡಿಯುವುದಕ್ಕೆ ಕೂಡಾ ಬಳಕೆ ಮಾಡುತ್ತಿದ್ದರು. ಹೀಗಾಗಿ ಕಾಡು ಮಾತ್ರವಲ್ಲ, ನದಿಯೂ ಮಲಿನವಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಹೇಳಿದ್ದಾರೆ.

Advertisement

ಕಳೆದ ವಾರ ಬಳ್ಪ ಕಾಡಿನಲ್ಲಿ ಕಸ ಎಸೆಯುವುದರ ಬಗ್ಗೆ ಗುತ್ತಿಗಾರು ಗ್ರಾಮ ಪಂಚಾಯತ್‌ ಆಡಳಿತ ಖುದ್ದು ಪರಿಶೀಲನೆ ನಡೆಸಿದ್ದು, ಈ ಬಗ್ಗೆ ನಿಗಾ ನಿಗಾವಹಿಸಿದೆ.

Advertisement

Guthigar Gram Panchayat has fined those who threw garbage on the roadside. Cleanliness campaign is also going on in Guthigar Gram Panchayat for some time now.

ಪ್ರತಿಕ್ರಿಯಿಸಲು....
ಈ ಕೆಳಗಿನ ಲಿಂಕ್‌ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು…

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಕ್ರಮ ಅಡಿಕೆ ಸಾಗಾಟ ಪತ್ತೆ | 466 ಚೀಲ ಅಡಿಕೆ ವಶಕ್ಕೆ ಪಡೆದ ಅಸ್ಸಾಂ ರೈಫಲ್ಸ್‌
August 13, 2025
11:03 PM
by: ದ ರೂರಲ್ ಮಿರರ್.ಕಾಂ
ಆ.15 ರಿಂದ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಸರ್ಕಾರ ಆದೇಶ
August 13, 2025
9:13 PM
by: The Rural Mirror ಸುದ್ದಿಜಾಲ
15 ದಿನಗಳಿಗೊಮ್ಮೆ ಶಾಲೆ, ಅಂಗನವಾಡಿಗಳ ನೀರಿನ ತಪಾಸಣೆ – ಜಿ. ಪಂ ಸಿಇಒ ಸೂಚನೆ 
August 13, 2025
8:04 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 13-08-2025 | ಆ.21 ರವರೆಗೆ ಮಳೆ ವಿಸ್ತರಣೆ ಎಲ್ಲಿ ? ವಾಯುಭಾರ ಕುಸಿತದ ಕಾರಣದಿಂದ ಮಳೆ ಎಲ್ಲೆಲ್ಲಾ ಇದೆ..?
August 13, 2025
2:02 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group