ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ (Guthigar PAC Bank) ಸಂಘದ ವಾರ್ಷಿಕ ಮಹಾಸಭೆಯು ಸಹಕಾರಿ ಸಂಘದ ದೀನದಯಾಳ್ ಸಭಾಭವನದಲ್ಲಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸುಳ್ಯ ತಾಲೂಕಿನ ಪ್ರತಿಷ್ಟಿತ ಸಹಕಾರಿ ಸಂಘಗಳಲ್ಲಿ ಒಂದಾಗಿರುವ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ ಶನಿವಾರ ನಡೆಯಿತು. ಪ್ರಸಕ್ತ ಸಾಲಿನಲ್ಲಿ ಸಂಘವು 434 ಕೋಟಿ ರೂಪಾಯಿ ವ್ಯವಹಾರ ನಡೆಸಿ 1.42 ಕೋಟಿ ರೂಪಾಯಿ ಲಾಭಾಂಶ ಪಡೆದಿದೆ. ಸದಸ್ಯರಿಗೆ ಶೇ.7 ಡಿವಿಡೆಂಟ್ ಘೋಷಿಸಲಾಯಿತು.
ಈ ಸಂದರ್ಭ ಕ್ಯಾಂಪ್ಕೋ ಗೆ ಅತಿ ಹೆಚ್ಚು ಅಡಿಕೆ ಮಾರಾಟ ಮಾಡಿದ ರತ್ನ ಎಂ ಮುಂಡೋಡಿ, ಕೊಕ್ಕೋ ಮಾರಾಟ ಮಾಡಿದ ವಿಭಾಗದಲ್ಲಿ ನಾಗಪ್ಪ ಗೌಡ, ತಿರುಮಲೇಶ್ವರ್ ಭಟ್ ಚಣಿಲ, ಕಮಲಾಕ್ಷ ಸಂಪ್ಯಾಡಿ, ಅತೀ ಹೆಚ್ಚು ರಸಗೊಬ್ಬರ ಖರೀದಿಗಾಗಿ ಮುಳಿಯ ಕೇಶವ ಭಟ್, ದಯಾನಂದ ಮುತ್ಲಾಜೆ , ಪೆಟ್ರೋಲ್ ಮತ್ತು ಡೀಸೆಲ್ ಖರೀದಿಗಾಗಿ ಸೌರಭ ಟ್ರಾವೆಲ್ಸ್ ನ ಕುಮಾರ್, ಶ್ರೇಯಸ್ ಎಂ ಡಿ ಹೆಚ್ಚು ದಿನಸಿ ಖರೀದಿಗಾಗಿ ಶಿವಪ್ರಕಾಶ್ ಕಡಪಳ, ಪದ್ಮನಾಭ ಕಾಜಿಮಡ್ಕ ದಯಾನಂದ ಮುತ್ತಾಜೆ, ಅತೀ ಹೆಚ್ಚು ದಿನಸಿ ಖರೀದಿ ಮಾಡಿದ ಸಂಸ್ಥೆಯ ಸಲುವಾಗಿ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪರವಾಗಿ ವ್ಯವಸ್ಥಾಪನ ಸಮಿತಿ ಸದಸ್ಯ ಚಂದ್ರಶೇಖರ ಬಾಳುಗೋಡು, ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ಪರವಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಣ್ಣಗೌಡ ಮತ್ತು ಲಿಂಗಪ್ಪ ಕಾಜಿಮಡ್ಕ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕಿಶೋರ್ ಕುಮಾರ್ ಅಂಬೆಕಲ್ಲು, ನಿರ್ದೇಶಕರುಗಳಾದ ಬೆಳ್ಯಪ್ಪ ಗೌಡ, ಎ.ವಿ ತೀರ್ಥರಾಮ, ಕೇಶವ ಭಟ್ ಮುಳಿಯ, ಮಂಜುಳಾ ಮುತ್ಲಾಜೆ, ರವಿಪ್ರಕಾಶ್ ಬಳ್ಳಕ್ಕ ,ಕೃಷ್ಣಯ್ಯ ಮೂಲೆತೋಟ, ಜಯಪ್ರಕಾಶ್ ಮೊಗ್ರ, ನವೀನ್ ಬಾಳುಗೋಡು, ಚಂದ್ರಾವತಿ ಮುಂಡೋಡಿ, ಕುಂಞ ಬಳ್ಳಕ್ಕ, ಆನಂದ ಹಲಸಿನಡ್ಕ ಉಪಸ್ಥಿತರಿದ್ದರು.
ವೆಂಕಟ್ ದಂಬೆಕೋಡಿ ಸ್ವಾಗತಿಸಿ ಶರತ್ ಎ.ಕೆ ವಂದಿಸಿದರು. ಕಿಶೋರ್ ಕುಮಾರ್ ಪೈಕ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಎ ಕೆ ವರದಿ ವಾಚಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎ.ವಿ ತೀರ್ಥರಾಮ, ಕೇಂದ್ರ ರಬ್ಬರ್ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾದ ಮುಳಿಯ ಕೇಶವ ಭಟ್, ಅವರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ನಿವೃತ್ತರಾದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹೂವಯ್ಯ ಗೌಡ ಸಂಪ್ಯಾಡಿ ಮತ್ತು ಜಯಂತಿ ದಂಪತಿಗಳನ್ನು ಗೌರವಿಸಲಾಯಿತು.
ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…
ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…
ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್…
ಪ್ರಯತ್ನ, ಪರಿಶ್ರಮ, ಛಲ ಇದ್ದರೂ ಸೋಲು ಬೆನ್ನತ್ತಿದರೆ ಕಾರಣವೇನು? ಹಿರಿಯರ ಪಾಪದ ಫಲ,…
ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿ ತೊಂದರೆಯಾಗದಂತೆ ಅಗತ್ಯ ಕ್ರಮ…
ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?. ಈ ಪ್ರಶ್ನೆಗೆ ಹಲವರದು ಹಲವು…