ಗುತ್ತಿಗಾರು ಸಹಕಾರಿ ಸಂಘದಿಂದ ಮತ್ತೊಂದು ಮಾದರಿ ಹೆಜ್ಜೆ | ಇದು ಸುವರ್ಣ ಸಹಕಾರ ಮಾರ್ಟ್ |

October 26, 2020
10:40 AM

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮತ್ತೊಂದು ಮಾದರಿ ಹೆಜ್ಜೆ ಇರಿಸಿದೆ. ಈಗಾಗಲೇ ಪೆಟ್ರೋಲ್‌ ಪಂಪ್‌ ಮೂಲಕ ರಾಜ್ಯದಲ್ಲೇ ಗುರುತಿಸಿಕೊಂಡಿರುವ ಸಹಕಾರಿ ಸಂಘವು  ಈಗ ಸುವರ್ಣ ಸಹಕಾರ ಮಾರ್ಟ್ ಮೂಲಕ ದಿನಸಿ ವಸ್ತುಗಳನ್ನು ಸದಸ್ಯರು ಹಾಗೂ ಗ್ರಾಮದ ಜನರಿಗೆ ನೀಡಲು ಯೋಜನೆ ಹಾಕಿಕೊಂಡಿದ್ದು ಇದು ಮತ್ತೊಮ್ಮೆ ಗಮನ ಸೆಳೆದಿದೆ. ಕಡಿಮೆ ದರದಲ್ಲಿ  ಗುಣಮಟ್ಟದ ದಿನಸಿ ಹಾಗೂ ಗೃಹಬಳಕೆ ವಸ್ತುಗಳನ್ನು ನೀಡುವುದು  ಇದರ ಉದ್ದೇಶವಾಗಿದೆ.

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಅತ್ಯಂತ ಗುಣಮಟ್ಟದ ಸೇವೆಯನ್ನು ಸದಸ್ಯರಿಗೆ ನೀಡುತ್ತಿದೆ. ತನ್ನ ಸಂಘದ ಸದಸ್ಯರಿಗೆ ಸಾಲ ಸೌಲಭ್ಯದಿಂದ ತೊಡಗಿ ಎಲ್ಲಾ ರೀತಿಯಲ್ಲೂ ಗ್ರಾಮದ ಜನರಿಗೆ ಆರ್ಥಿಕ, ಸಾಮಾಜಿಕ ಭದ್ರತೆ ನೀಡುವುದು  ಸಹಕಾರಿ ಸಂಘದ ಮೂಲ ಉದ್ದೇಶವಾಗಿದೆ. ಇದೀಗ ಸಂಘದ ಅಧ್ಯಕ್ಷರಾಗಿ ವೆಂಕಟ್‌ ದಂಬೆಕೋಡಿ ಅವರು ಸಂಘವನ್ನು ಮುನ್ನಡೆಸುತ್ತಿದ್ದು ಈಗಾಗಲೇ ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಈಗ ಸುವರ್ಣ ಸಹಕಾರ ಮಾರ್ಟ್ ಮೂಲಕ ದಿನಸಿ ವಸ್ತುಗಳನ್ನು ಸದಸ್ಯರಿಗೆ ಹಾಗೂ ಗ್ರಾಮದ ಜನರಿಗೆ ನೀಡಲು ಉತ್ಸಾಹದಿಂದ ಇಳಿದಿದೆ. ಇಲ್ಲಿ ಕೂಡಾ ಸದಸ್ಯರಿಗೆ ಸಾಲ ಸೌಲಭ್ಯ ಹಾಗೂ ವಿವಿಧ ಬಗೆಯ ಯೋಜನೆಗಳನ್ನು ಹಾಕಿಕೊಂಡಿದೆ.ಈ ಮೂಲಕ ಸಂಘದ ಸದಸ್ಯರಿಗೆ ಗುಣಮಟ್ಟದ ಸೇವೆ ನೀಡಲು ಬದ್ದವಾಗಿದೆ.

 

ನೂತನ ಸುವರ್ಣ ಸಹಕಾರ ಮಾರ್ಟ್ ನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿ,

ಸಹಕಾರಿ ಸಂಘಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟಗಳು ನಡೆಯಬೇಕು. ಬೈಲಾಗನುಗುಣವಾಗಿ ನಡೆದುಕೊಳ್ಳದೇ ಸಂಘದ ಏಳಿಗೆಯ ಹಿತದೃಷ್ಟಿಯಿಂದ ಬೈಲಾವನ್ನು ಹೊರತುಪಡಿಸಿಯೂ ಕಾರ್ಯಪ್ರವೃತವಾಗುವ ನಿರ್ಧಾರಗಳನ್ನು‌ಅನುಸರಿಸುವುದು ಒಳಿತು ಎಂದು  ಅಭಿಪ್ರಾಯ ಪಟ್ಟರು.ರಾಜ್ಯದಲ್ಲಿ ಕರಾವಳಿ ಜಿಲ್ಲೆಗಳ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತಿದ್ದು ಇತರ ಸಂಘಗಳಿಗೆ ಮಾದರಿಯಾಗಿ ಮುನ್ನಡೆಯುತ್ತಿವೆ ಎಂದರು.
ಶಾಸಕ ಎಸ್‌ ಅಂಗಾರ ಮಾತನಾಡಿ, ನಾವು ನಮ್ಮ ಸಂಸ್ಥೆ ಯ ಬಗ್ಗೆ ಹೆಚ್ಚು ನಿಗಾವಹಿಸಿ ಕಾರ್ಯ ಪ್ರವೃತರಾದಾಗ ಆ ಸಂಸ್ಥೆ ಹೆಚ್ಚು ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಈ ರೀತಿ ಗುತ್ತಿಗಾರು ಸಹಕಾರಿ ಸಂಘದ ಪ್ರಮುಖರು ಯೋಚನೆ ಹೊಂದಿದ್ದ ರಿಂದಲೇ ಇಷ್ಟೊಂದು ಅಭಿವೃದ್ಧಿ ಹೊಂದಿದೆ ಎಂದರು.
ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಸದಸ್ಯರ ಹಿತದೃಷ್ಟಿಯಿಂದ ಹಮ್ಮಿಕೊಂಡಿರುವ ಈ  ಕಾರ್ಯಯೋಜನೆಯ ಸಾಧಕ-ಬಾಧಕಗಳಲ್ಲಿ ನಕಾರಾತ್ಮಕ ಚಿಂತನೆಗಳ ಬಿಟ್ಟು ತನ್ನೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸಂಘದ ಏಳಿಗೆಗೆ ಸಹಕರಿಸುವಂತೆ ಮನವಿ‌ ಮಾಡಿದರು.
ವೇದಿಕೆಯಲ್ಲಿ ತಾ.ಪಂ. ಸದಸ್ಯೆ ಯಶೋದಾ ಬಾಳೆಗುಡ್ಡೆ, ಸಂಘದ ಮಾಜಿ ಅಧ್ಯಕ್ಷರುಗಳಾದ ಭರತ್‌ ಮುಂಡೋಡಿ, ಮುಳಿಯ ತಿಮ್ಮಪ್ಪಯ್ಯ, ನಿವೃತ್ತ ವೃತ್ತ ನಿರೀಕ್ಷಕ ಎಂ ಡಿ ಸುಬ್ಬಣ್ಣ ಗೌಡ, ಕೃಷಿಕ ಚಂದ್ರಶೇಖರ, ಶ್ಯಾಂ ಗೊರಗೋಡಿ, ಸಂಘದ ಉಪಾಧ್ಯಕ್ಷ ಕಿಶೋರ್‌ ಕುಮಾರ್‌ ಅಂಬೆಕಲ್ಲು ಹಾಗೂ ನಿರ್ದೇಶಕರುಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್‌ ಎ ಕೆ ಮೊದಲಾದವರು
ಇದ್ದರು.

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಾರ್ಚ್ 19 ರಿಂದ 5 ರಾಶಿಗಳಿಗೆ ವಿಶೇಷ ಶುಭ ಸೂಚನೆ
March 19, 2025
6:41 AM
by: ದ ರೂರಲ್ ಮಿರರ್.ಕಾಂ
ನಗುವಿನೊಂದಿಗೆ ಭೂಮಿಗೆ ಇಳಿದ ಗಗನಯಾತ್ರಿ ಸುನಿತಾ ವಿಲಿಯಮ್ಸ್
March 19, 2025
6:22 AM
by: The Rural Mirror ಸುದ್ದಿಜಾಲ
ನಭೋಮಂಡಲಕ್ಕೆ ಇಣುಕುನೋಟ | ಗಗನಯಾತ್ರಿಗಳನ್ನು ಸ್ವಾಗತಿಸೋಣ…|
March 18, 2025
9:52 PM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಚಿಕ್ಕಮಗಳೂರು ಜಿಲ್ಲೆ | ಮಂಗನ ಕಾಯಿಲೆ ಸೋಂಕಿಗೆ ವೃದ್ಧೆ ಬಲಿ | ಮಂಗನಕಾಯಿಲೆ ಬಗ್ಗೆ ಇರಲಿ ಎಚ್ಚರ |
March 18, 2025
8:31 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

NEWS UPDATE ಪಡೆಯಲು ಇಲ್ಲಿ ಬನ್ನಿ...