ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮತ್ತೊಂದು ಮಾದರಿ ಹೆಜ್ಜೆ ಇರಿಸಿದೆ. ಈಗಾಗಲೇ ಪೆಟ್ರೋಲ್ ಪಂಪ್ ಮೂಲಕ ರಾಜ್ಯದಲ್ಲೇ ಗುರುತಿಸಿಕೊಂಡಿರುವ ಸಹಕಾರಿ ಸಂಘವು ಈಗ ಸುವರ್ಣ ಸಹಕಾರ ಮಾರ್ಟ್ ಮೂಲಕ ದಿನಸಿ ವಸ್ತುಗಳನ್ನು ಸದಸ್ಯರು ಹಾಗೂ ಗ್ರಾಮದ ಜನರಿಗೆ ನೀಡಲು ಯೋಜನೆ ಹಾಕಿಕೊಂಡಿದ್ದು ಇದು ಮತ್ತೊಮ್ಮೆ ಗಮನ ಸೆಳೆದಿದೆ. ಕಡಿಮೆ ದರದಲ್ಲಿ ಗುಣಮಟ್ಟದ ದಿನಸಿ ಹಾಗೂ ಗೃಹಬಳಕೆ ವಸ್ತುಗಳನ್ನು ನೀಡುವುದು ಇದರ ಉದ್ದೇಶವಾಗಿದೆ.
ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಅತ್ಯಂತ ಗುಣಮಟ್ಟದ ಸೇವೆಯನ್ನು ಸದಸ್ಯರಿಗೆ ನೀಡುತ್ತಿದೆ. ತನ್ನ ಸಂಘದ ಸದಸ್ಯರಿಗೆ ಸಾಲ ಸೌಲಭ್ಯದಿಂದ ತೊಡಗಿ ಎಲ್ಲಾ ರೀತಿಯಲ್ಲೂ ಗ್ರಾಮದ ಜನರಿಗೆ ಆರ್ಥಿಕ, ಸಾಮಾಜಿಕ ಭದ್ರತೆ ನೀಡುವುದು ಸಹಕಾರಿ ಸಂಘದ ಮೂಲ ಉದ್ದೇಶವಾಗಿದೆ. ಇದೀಗ ಸಂಘದ ಅಧ್ಯಕ್ಷರಾಗಿ ವೆಂಕಟ್ ದಂಬೆಕೋಡಿ ಅವರು ಸಂಘವನ್ನು ಮುನ್ನಡೆಸುತ್ತಿದ್ದು ಈಗಾಗಲೇ ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಈಗ ಸುವರ್ಣ ಸಹಕಾರ ಮಾರ್ಟ್ ಮೂಲಕ ದಿನಸಿ ವಸ್ತುಗಳನ್ನು ಸದಸ್ಯರಿಗೆ ಹಾಗೂ ಗ್ರಾಮದ ಜನರಿಗೆ ನೀಡಲು ಉತ್ಸಾಹದಿಂದ ಇಳಿದಿದೆ. ಇಲ್ಲಿ ಕೂಡಾ ಸದಸ್ಯರಿಗೆ ಸಾಲ ಸೌಲಭ್ಯ ಹಾಗೂ ವಿವಿಧ ಬಗೆಯ ಯೋಜನೆಗಳನ್ನು ಹಾಕಿಕೊಂಡಿದೆ.ಈ ಮೂಲಕ ಸಂಘದ ಸದಸ್ಯರಿಗೆ ಗುಣಮಟ್ಟದ ಸೇವೆ ನೀಡಲು ಬದ್ದವಾಗಿದೆ.
ನೂತನ ಸುವರ್ಣ ಸಹಕಾರ ಮಾರ್ಟ್ ನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿ,
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…