ಅನೇಕ ಸಮಯಗಳಿಂದ ಆಮೆ ನಡಿಗೆಯಲ್ಲಿ ಸಾಗುತ್ತಿದೆ ಈ ಕಾಮಗಾರಿ.. ಹೇಳೋರಿಲ್ಲ.. ಕೇಳೋರಿಲ್ಲ..! ಇದು ಸದ್ಯದ ಸ್ಥಿತಿ. ಇರುವುದು ಸುಳ್ಯ ತಾಲೂಕಿನ ಗುತ್ತಿಗಾರು ಪೇಟೆಯಲ್ಲಿ.
ಸುಳ್ಯ ತಾಲೂಕಿನಲ್ಲಿ ಎರಡನೇ ಅತಿ ದೊಡ್ಡ ಪೇಟೆ ಎಂಬ ಹೆಗ್ಗಳಿಕೆ ಇರುವುದು ಗುತ್ತಿಗಾರಿಗೆ. ಗುತ್ತಿಗಾರು ಪೇಟೆಯಲ್ಲಿ ಕಳೆದ ಅನೇಕ ದಿನಗಳಿಂದ ಲೋಕೋಪಯೋಗಿ ಇಲಾಖೆಯಿಂದ ಮೋರಿ ರಚನೆಯ ಕಾರ್ಯ ನಡೆಸಲಾಗುತ್ತಿದೆ. ಇಂದಿಗೂ ಪೂರ್ತಿಯಾಗಿಲ್ಲ. ಈ ಕಾಮಗಾರಿ ಕುಂಟುತ್ತಾ ಸಾಗಿತ್ತು, ಇದೀಗ ಮೋರಿ ಅಳವಡಿಕೆ ಕಾರ್ಯ ಮುಗಿದಿದೆ. ಹಾಗಿದ್ದರೂ ಕೆಲಸ ಪೂರ್ತಿಯಾಗಿಲ್ಲ. ಈಗ ದ್ವಿಚಕ್ರ ವಾಹನ ಸವಾರರಿಗೆ ಸಂಕಷ್ಟವಾಗಿದೆ. ಈಗಾಗಲೇ ಅಪಘಾತಗಳು ನಡೆದಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ತಕ್ಷಣವೇ ಸೂಕ್ತ ದುರಸ್ತಿ ಕಾರ್ಯ ನಡೆಯಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel