ಗುತ್ತಿಗಾರು ಗ್ರಾಮದ ಬಳ್ಳಕ್ಕದ ಕಾಲನಿಯ ಕೆಲವು ಮನೆಗಳಿಗೆ ಗ್ರಾಪಂ ವತಿಯಿಂದ ನಿರ್ಮಾಣವಾದ ಕುಡಿಯುವ ನೀರಿನ ವ್ಯವಸ್ಥೆಗೆ ಚಾಲನೆ ನೀಡಲಾಯಿತು. ಗ್ರಾಪಂ ಸದಸ್ಯರುಗಳಾದ ಎಂ ಕೆ ಶಾರದಾ, ಲತಾ ಕುಮಾರಿ, ಭರತ್ ಕಮಿಲ ಹಾಗೂ ವಸಂತ ಮೊಗ್ರ ಉಪಸ್ಥಿತರಿದ್ದರು.
ಗುತ್ತಿಗಾರು ಗ್ರಾಮದ ಬಳ್ಳಕ್ಕದ ಕಾಲನಿಯ ಕೆಲವು ಮನೆಗಳಿಗೆ ಹಲವು ವರ್ಷಗಳಿಂದ ಕುಡಿಯುವ ನೀರಿನ ವ್ಯವಸ್ಥೆ ಇದ್ದಿರಲಿಲ್ಲ. ಸಮೀಪದ ಹೊಳೆಯಿಂದ ಅಥವಾ ಆಸುಪಾಸಿನ ಮನೆಗಳಿಂದ ನೀರನ್ನು ಹೊತ್ತ ತರಬೇಕಿತ್ತು. ಮಳೆಗಾಲ ಹೊಳೆಯ ಕಲುಷಿತ ನೀರನ್ನೇ ಕುಡಿಯಬೇಕಾದ ಸ್ಥಿತಿ ಇತ್ತು. ಈ ಬಗ್ಗೆ ಗ್ರಾಪಂ ಯೋಜನೆಯನ್ನು ಬಳಸಿಕೊಂಡು ಗ್ರಾಪಂ ಸದಸ್ಯರು ಈ ಮನೆಗಳಿಗೆ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿದರು. ಶುಕ್ರವಾರ ಮನೆಗಳಿಗೆ ನೀರಿನ ಬಳಕೆಗೆ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭ ಗ್ರಾಪಂ ಸದಸ್ಯರುಗಳಾದ ಎಂ ಕೆ ಶಾರದಾ, ಲತಾ ಕುಮಾರಿ, ಭರತ್ ಕಮಿಲ ಹಾಗೂ ವಸಂತ ಮೊಗ್ರ , ಗ್ರಾಮ ಭಾರತ ತಂಡದ ಸಂಚಾಲಕ ಸುಧಾಕರ ಮಲ್ಕಜೆ, ಪ್ರಮುಖರಾದ ಬಿಟ್ಟಿ ನೆಡುನೀಲಂ, ಮಹೇಶ್ ಪುಚ್ಚಪ್ಪಾಡಿ, ಕಾಮಗಾರಿ ನಡೆಸಿದ ಅಚ್ಚುತ ಮಲ್ಕಜೆ ಹಾಗೂ ಸ್ಥಳೀಯರಾದ ಕುಸುಮಾಧರ, ವಿಶ್ವನಾಥ ಮೊದಲಾದವರು ಇದ್ದರು.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಒಂದೆರಡು ಕಡೆ ಹಾಗೂ…
ಉದ್ಯೋಗದ ಪರೀಕ್ಷೆಗಳಿಗೂ ಧಾರ್ಮಿಕ ಸಂಕೇತಗಳಿಗೂ ಯಾಕೆ ಹೊಂದಿ ಬರುವುದಿಲ್ಲ? ಇದೊಂದು ಮಿಲಿಯನ್ ಡಾಲರ್…
ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ ಮೇ ತಿಂಗಳ 2 ರಿಂದ…
ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿವಿಧ…
ಈಗಿನಂತೆ ಮೇ 1ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಾಗೂ ಮೇ 5ರಿಂದ ಉತ್ತರ…
ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…