Advertisement
Opinion

ಅಡಿಕೆಗೆ ಗುಟ್ಕಾ ನಂಟು ಶಾಶ್ವತವಲ್ಲ | ಅಡಿಕೆಯ ಹಿಂದಿನ ಕಾಲದ ವೈಭವ ಮರಳಿ ಪಡೆಯಲು ಏನು ಮಾಡಬಹುದು..?

Share

ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಘಟನೆ ಇದು.‌ಆಗ ಗುಟ್ಕಾ ಬ್ಯಾನ್ ಎಂಬ ಸುದ್ದಿ ದೊಡ್ಡದಾಗಿತ್ತು. ಅಡಿಕೆಗೆ ಗುಟ್ಕಾವೇ ಆಸರೆ. ಗುಟ್ಕಾ ಆರೋಗ್ಯಕ್ಕೆ ಹಾನಿಕಾರಕ ಎಂದು ಚೆರ್ಚೆ ಶುರುವಾಗಿತ್ತು. ಗುಟ್ಕಾ ಬ್ಯಾನ್ ಆದರೆ ಅಡಿಕೆ ಬೆಲೆ ಸಂಪೂರ್ಣ ಕುಸಿಯುತ್ತದೆ ಎಂಬ ಮಾತು ಆಗ ಎಲ್ಲಾ ಅಡಿಕೆ ಬೆಳೆಗಾರರಲ್ಲಿತ್ತು…

Advertisement
Advertisement
Advertisement
Advertisement

ಆ ಸಂಧರ್ಭದಲ್ಲಿ ದಿವಂಗತ ಕೆ ವಿ ಸುಬ್ಬಣ್ಣ ಹೆಗ್ಗೋಡು ಅವರು.”ಅಡಿಕೆಗೆ ಗುಟ್ಕಾ ಆಧಾರವಾದರೆ ನಮಗೆ ಅಡಿಕೆ ಬೆಳೆಯೇ ಬೇಡ ” ಎಂದಿದ್ದರು. ನಿಜಕ್ಕೂ ನಮ್ಮ ಮಲೆನಾಡು ಕರಾವಳಿಯ ಸಾಂಪ್ರದಾಯಿಕ ಅಡಿಕೆಗೆ ಹಿಂದಿನ ಎಲೆ ಅಡಿಕೆ ಹಾಕುವ , ಬೀಡಾ ತಾಂಬೂಲಕ್ಕಾಗಿ ಬೇಡಿಕೆಯಿದ್ದಿದ್ದರೆ ‌….!! ತುಂಬಾ ಚೆನ್ನಾಗಿತ್ತು… ಯಾವಾಗ ಗುಟ್ಕಾ ಅಡಿಕೆಗೆ ಖರೀದಿದಾರ ಆಯಿತೋ ಅಡಿಕೆಯ ಮಾನ-ಮರ್ಯಾದೆ ಹೋಯಿತು. ನಮ್ಮ ಮಲೆನಾಡು ಕರಾವಳಿಯ ಅಡಿಕೆಯ ಸಾಂಪ್ರದಾಯಿಕ ಬಳಕೆಯನ್ನು ಪ್ರೋತ್ಸಾಹಿಸಬೇಕಿದೆ. ಗುಟ್ಕೋತ್ತರ ಕಾಲದ ಮಲೆನಾಡು ಕರಾವಳಿಯ ಅಡಿಕೆ ಯ ಬೇಡಿಕೆ ಮತ್ತೆ ಬಂದರೆ ಒಳ್ಳೆಯದು. ಅಡಿಕೆ ಗುಟ್ಕಾ ನೆಂಟಸ್ಥನದಲ್ಲೇ ಇದ್ದರೆ ನಮ್ಮ ಮಲೆನಾಡಿನ ಅಡಿಕೆಗೆ ಇನ್ನೊಂದು ನಾಲ್ಕೈದು ವರ್ಷಗಳ ಕಾಲ ಮಾತ್ರ ಬೇಡಿಕೆಯಿರಬಹುದು.

Advertisement

ಕಾಲ ಬದಲಾಗುತ್ತಿರುತ್ತದೆ. ಜನರ ಆಸಕ್ತಿ ಹವ್ಯಾಸಗಳೂ ಬದಲಾಗುತ್ತಿರುತ್ತದೆ. ಬೀಡಿ ಸೇದುತ್ತಿದ್ದವ ಗುಟ್ಕಾಕ್ಕೆ ಬಂದ. ಇದೀಗ ನೇರವಾಗಿ ಅಮಲುಕಾರಕ ಡ್ರಗ್ಸ್ ಹಳ್ಳಿ ಹಳ್ಳಿಗೂ ಬಂದು ತಲುಪುತ್ತಿದೆ. ಕೆಲವೇ ವರ್ಷಗಳಲ್ಲಿ ಗುಟ್ಕಾ ಕೂಡ ಬೆಲೆ ಕಳೆದುಕೊಳ್ಳುವ ಸಾದ್ಯತೆಯಿದೆ. ಜನ ಕೊಂಕಣ ಸುತ್ತಿ ಮೈಲಾರಕ್ಕೆ ಬರೋದಕ್ಕಿಂತ ನೇರವಾಗಿಯೇ ಡ್ರಗ್ಸ್ ತಗೋಬಹುದು.ಇವತ್ತು ಗುಟ್ಕಾ ಜಾಹೀರಾತಿನಲ್ಲಿ ರೂಪದರ್ಶಿ ಗಳಾಗಿರುವ ಶಾರುಕ್ ಖಾನ್ ಅಜಯ್ ದೇವಗನ್ ತರದವರ ನೋಡಿ ಗುಟ್ಕಾ ಹಾಕುವವರು ಕೂಲಿ ಕಾರ್ಮಿಕರು , ನೆದ್ದೆಗೆಟ್ಟು ಡ್ರೈವಿಂಗ್ ಮಾಡುವ ಡ್ರೈವರ್‌ ಗಳು ಮಾತ್ರ. ಸೊಂಟದಲ್ಲಿ ಅಥವಾ ಕೈಚೀಲದಲ್ಲಿ ಎಲೆ ಅಡಿಕೆ ಚೀಲ ಇಟ್ಟುಕೊಂಡು ಓಡಾಡುತ್ತಿದ್ದವರು ಈಗಿಲ್ಲ.ಜೋಬಿನಲ್ಲಿ ಬೀಡಿ ಬೆಂಕಿಪೊಟ್ಣ ಇಟ್ಟುಕೊಂಡು ಓಡಾಡುವರು ಈಗಿಲ್ಲ. ಸದ್ಯ ಗುಟ್ಕಾ ಜೇಬಿನಲ್ಲಿ ಇಟ್ಟುಕೊಂಡವರು ಅಲ್ಲಲ್ಲಿ ಕಾಣಿಸುತ್ತಿದ್ದಾರೆ.ಅದೂ ತಾತ್ಕಾಲಿಕ…

ಅಮಲುಕಾರಕ ಉತ್ಪನ್ನ ತಯಾರಿಸಿ ಮಾರಾಟ ಮಾಡುವವರು ತಮ್ಮ ಉತ್ಪನ್ನ ಮಾರಲು ಇನ್ನೊಂದು ಮಾದ್ಯಮ ಹುಡುಕಿಕೊಂಡು ಹೋಗ್ತಾರೆ.ಅಡಿಕೆ ತಾಂಬೂಲಕ್ಕೆ ಸಾವಿರಾರು ವರ್ಷಗಳಿಂದ ಪೂಜನೀಯ ಸ್ಥಾನ ಇತ್ತು.ಎಲ್ಲಾ ಶುಭ ಕಾರ್ಯಗಳಲ್ಲೂ ಎಲೆ ಅಡಿಕೆ ತಾಂಬೂಲ ಇಡುವುದು ಸಾಮಾನ್ಯ. ಯಾರೂ ಎಲೆ ಅಡಿಕೆ ಬದಲಾಗಿ ಗುಟ್ಕಾ ಪ್ಯಾಕೆಟ್ ಇಡೋಕಾಗೋಲ್ಲ.ಅಡಿಕೆ ಬೆಳೆಗಾರರ‌ ಸಂಘಗಳು ಸಾಂಪ್ರದಾಯಿಕ ಅಡಿಕೆ ಬಳಕೆಯ ಮಹತ್ವವನ್ನು ದೇಶದಾದ್ಯಂತ ಪ್ರಚುರ ಪಡಿಸಿ ನಮ್ಮ ಭಾಗದ ದೇಶಾವರಿ ಅಡಿಕೆಗೆ ಮತ್ತೆ ಬೇಡಿಕೆ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಅಡಿಕೆಯ ಸಾಂಪ್ರದಾಯಿಕ ಬಳಕೆಯ ಬಗ್ಗೆ ಹೆಚ್ಚು ಜನರಿಗೆ ತಿಳಿಸಲು ಅಡಿಕೆ ಸಂಶೋಧನೆ ಕೇಂದ್ರ, ಆಹಾರ ಸಂಶೋಧನಾ ಕೇಂದ್ರ, ಕೃಷಿ ವಿ ವಿ ಗಳು, ತೋಟಗಾರಿಕಾ ಸಚಿವಾಲಯ ಕೈ ಜೋಡಿಸಿದರೆ ಅತ್ಯುತ್ತಮ.ಅಡಿಕೆ ಯ ಹಿಂದಿನ ಕಾಲದ ವೈಭವ ಮರಳಿ ಬರಲಿ.ಅಡಿಕೆಯು ಆರೋಗ್ಯವನ್ನು ವೃದ್ದಿಸಿ ಅಡಿಕೆ ಬೆಳೆಗಾರರ ಉಳಿಸಲಿ.

Advertisement
ಬರಹ :
ಪ್ರಬಂಧ ಅಂಬುತೀರ್ಥ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಸಿರಿಧಾನ್ಯ ಮೇಳ | ಮೂರು ದಿನದಲ್ಲಿ185.41 ಕೋಟಿ ರೂಪಾಯಿ ವಹಿವಾಟು |

ಬೆಂಗಳೂರಿನಲ್ಲಿ ನಡೆದ ಮೂರು ದಿನಗಳ ಸಿರಿಧಾನ್ಯ ಮೇಳದಲ್ಲಿ 185.41 ಕೋಟಿ ರೂಪಾಯಿ ವಹಿವಾಟು…

2 hours ago

ಎಗ್ರಿಟೂರಿಸಂ | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದರಿಯೊಂದನ್ನು ತೆರೆದ ಕೃಷಿಕ ಸುರೇಶ್‌ ಬಲ್ನಾಡು |

ಅಡಿಕೆಯ ವಿವಿಧ ಸಮಸ್ಯೆಗಳು ಇಂದು ಕೃಷಿಕರನ್ನು ಕಾಡಲು ಆರಂಭವಾಗಿದೆ. ಅಡಿಕೆಯ ಜೊತೆಗೆ ಇನ್ನೊಂದು…

3 hours ago

ಕೇಂದ್ರ ಸರ್ಕಾರದ  ಬಜೆಟ್ ಮೇಲೆ ರೈತಾಪಿ ವರ್ಗ  ಬಹಳ ನಿರೀಕ್ಷೆ | ಕುರುಬೂರು ಶಾಂತಕುಮಾರ್

ಕೇಂದ್ರ ಸರ್ಕಾರದ ಈ ಬಾರಿ ಬಜೆಟ್ ಮೇಲೆ ರೈತಾಪಿ ವರ್ಗ  ಬಹಳ ನಿರೀಕ್ಷೆ…

13 hours ago

‌ಸಾರಡ್ಕ ಕೃಷಿ ಹಬ್ಬ | “ನಾ ಕಂಡಂತೆ ಸಾರಡ್ಕ ಕೃಷಿ ಹಬ್ಬ 2025” ಕೃಷಿಕ ಎ ಪಿ ಸದಾಶಿವ ಅವರ ಅಭಿಪ್ರಾಯ |

ಸಾರಡ್ಕದಲ್ಲಿ ನಡೆದ ಕೃಷಿಹಬ್ಬದ ಬಗ್ಗೆ ಸಾವಯವ ಕೃಷಿಕ ಎ ಪಿ ಸದಾಶಿವ ಅವರ…

23 hours ago

ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಭಾರೀ ಕಾಡ್ಗಿಚ್ಚು | ನೂರಾರು ಎಕರೆ ಅರಣ್ಯ ನಾಶ | ಬೆಂಕಿ ನಂದಿಸಲು ಅರಣ್ಯ ಇಲಾಖೆ ಪ್ರಯತ್ನ |

ಕಳೆದ ಒಂದು ವಾರದಲ್ಲಿ ಚಾರ್ಮಾಡಿ ಘಾಟ್‌ನಲ್ಲಿ ಉಂಟಾದ ಎರಡನೇ  ಕಾಡ್ಗಿಚ್ಚು ಪ್ರಕರಣ ಇದಾಗಿದೆ.…

2 days ago

ವಿದೇಶದಿಂದ ಅಡಿಕೆ ಕಳ್ಳಸಾಗಾಣಿಕೆ ಪ್ರಕರಣ | ಡಿಎಂಕೆ ಕೌನ್ಸಿಲರ್ ವಶಕ್ಕೆ ಪಡೆದ ಡಿಆರ್‌ಐ

ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ…

2 days ago