ಮಹಾರಾಷ್ಟ್ರದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾ ಉತ್ಪಾದಕರು ಮತ್ತು ಮಾರಾಟಗಾರರನ್ನು ಮಹಾರಾಷ್ಟ್ರ ಮೋಕಾ (MCOCA) ವ್ಯಾಪ್ತಿಗೆ ತರಲಾಗುವುದು ಎಂದು ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಸಚಿವ ನರಹರಿ ಜಿರ್ವಾಲ್ ಬುಧವಾರ ಪ್ರಕಟಿಸಿದ್ದಾರೆ. ಕಾನೂನು ಹೆಚ್ಚು ಪರಿಣಾಮಕಾರಿಯಾಗಿಸಲು ಕಠಿಣ, ವಿಶೇಷ ಕಾನೂನನ್ನು ತರುವ ಪ್ರಕ್ರಿಯೆ ನಡೆಯುತ್ತಿದೆ ಎಂದು ದೇವೇಂದ್ರ ಫಡ್ನವೀಸ್ ಕೂಡಾ ಹೇಳಿದ್ದಾರೆ.
ನಾಗ್ಪುರದಲ್ಲಿ ನಡೆಯುತ್ತಿರುವ ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ, ಗುಟ್ಕಾ ಮತ್ತು ಮಾದಕ ದ್ರವ್ಯಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಮತ್ತು ಅದನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಕಠಿಣ, ವಿಶೇಷ ಕಾನೂನನ್ನು ತರುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಫಡ್ನವೀಸ್ ಹೇಳಿದ್ದಾರೆ.
ಗುಟ್ಕಾ ಮತ್ತು ಪಾನ್ ಮಸಾಲಾವನ್ನು ಇತರ ರಾಜ್ಯಗಳಿಂದ ಅಕ್ರಮವಾಗಿ ಹೆಚ್ಚಿನ ಪ್ರಮಾಣದಲ್ಲಿ ತರಲಾಗುತ್ತದೆ. ಇಂತಹದ್ದನ್ನು ವಶಪಡಿಸಿಕೊಂಡು ಕ್ರಿಮಿನಲ್ ಕ್ರಮ ಕೈಗೊಂಡಿದ್ದರೂ ಮಾರಾಟ ಮುಂದುವರೆದಿದೆ . ಗುಟ್ಕಾ ಮತ್ತು ಸುವಾಸನೆಯ ಪಾನ್ ಮಸಾಲಾವನ್ನು ನಿಷೇಧಿಸಿದ್ದರೂ, ಶಾಲೆಗಳು ಮತ್ತು ಕಾಲೇಜುಗಳ ಬಳಿಯ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ವಿಪಕ್ಷಗಳು ಆರೋಪಿಸಿದ್ದವು.
ಮಹಾರಾಷ್ಟ್ರದಲ್ಲಿ ಪಾನ್ ಮಸಾಲಾ ಹಾಗೂ ಗುಟ್ಕಾ ನಿಷೇಧವಾಗುವುದು ಕರ್ನಾಟಕದ ಅಡಿಕೆಯ ಮಾರುಕಟ್ಟೆ ಮೇಲೂ ಹೊಡೆತ ಬೀಳುತ್ತದೆ. ಪಾನ್ ಮಸಾಲಾದಲ್ಲಿ ಯಾವುದೇ ಹಾನಿ ಇಲ್ಲದೇ ಇದ್ದರೂ ಈ ಬಗ್ಗೆ ಸರ್ಕಾರಗಳ ಗಮನ ಸೆಳೆಯುವ ಕೆಲಸ ನಡೆಯಬೇಕಿದೆ.


