ಕೂದಲು ಉದುರುವ ಸಮಸ್ಯೆ ಕೇವಲ ಒಬ್ಬ ಇಬ್ಬರಿಗಲ್ಲ. ಇದು ಜಾತಿ, ಭೇದ ವಯಸ್ಸು,ಲಿಂಗ ವಿಲ್ಲದೆ ಎಲ್ಲರಿಗೂ ಕಾಡುವ ಸಮಸ್ಯೆ. ಗಂಡು ಆಗಲಿ ಹೆಣ್ಣು ಆಗಲಿ ಕೂದಲು ಉದುರುತ್ತೇ ಅಂದರೆ ಎಷ್ಟೇ ಹಣ ಖರ್ಚದಾರೂ ತೊಂದರೆ ಇಲ್ಲ, ಪರಿಹಾರ ಸಿಕ್ಕರೇ ಸಾಕು ಎನ್ನುತ್ತಾರೆ. ಆದರೆ, ಅದೇಷ್ಟೇ ದುಬಾರಿ ಎಣ್ಣೆ ಹಚ್ಚಿದರೂ ಕೂದಲು ಉದುರುತ್ತಲೇ ಇದೆ ಎಂದರೆ ನಿಮ್ಮ ಆಹಾರದಲ್ಲಿ ಪ್ರೋಟೀನ್ ಅಂಶವಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. ಇದಕ್ಕಾಗಿ ಯಾವೆಲ್ಲಾ ಆಹಾರದಿಂದ ಪ್ರೋಟೀನ್ ಸಿಗುತ್ತದೆ.. ಇಲ್ಲಿದೆ ಮಾಹಿತಿ..
ಮೊಟ್ಟೆ: ಕೂದಲು ಉದುರುವಿಕೆ ತಡೆಯುವ ಪ್ರಮುಖ ಪೋಷಕಾಂಶವಾದ ಬಯೋಟಿನ್ ಮೊಟ್ಟೆಗಳಲ್ಲಿ ಸಮೃದ್ಧವಾಗಿದೆ. ಪ್ರತಿದಿನ ಮೊಟ್ಟೆ ಸೇವನೆ ಕೂದಲಿಗೆ ಬೇರುಗಳನ್ನು ಬಲಪಡಿಸುತ್ತದೆ.
ಕೋಳಿ ಮಾಂಸ; ಒದು ಕೋದಲಿಗೆ ಕೆರಾಟಿನ್ ರಚನೆಗೆ ಅಗತ್ಯವಾದ ಅಮೈನೋ ಅಮ್ಲಗಳನ್ನು ಒದಗಿಸುವ ಲೀನ್ ಪ್ರೋಟೀನ್ ಉತ್ತಮ ಮೂಲವಾಗಿದೆ.
ನವಣೆ: ಇದು ಒಂದು ಸಂಪೂರ್ಣ ಪ್ರೋಟೀನ್ ಮೂಲವಾಗಿದೆ.
ನಟ್ಸ್: ಬಾದಾಮಿ, ಸೂರ್ಯಕಾಂತಿ, ಕುಂಬಳಕಾಯಿ ಬೀಜ, ಅಗಸೆ ಬೀಜಗಳು ಇದರಿಂದ ವಿಟಮಿನ್ ಇ ಸಿಗುತ್ತದೆ.
ಒಟ್ಸ್: ಇದರಲ್ಲಿ ಕಬ್ಬಿಣ, ಪೈಬರ್ ಮತ್ತು ಸತುವಿದೆ. ಬೆಳಗಿನ ಉಪಾಹಾರದಲ್ಲಿ ಒಟ್ಸ್ ಸೇರಿಸುವುದರಿಂದ ದೀರ್ಘಕಾಲಿಕವಾಗಿ ಕೂದಲನ ಬೇರುಗಳಿಗೆ ಪೋಷಣೆ ದೊರೆಯುತ್ತದೆ.


