Advertisement
ಅನುಕ್ರಮ

ಹಳೇ ಬಟ್ಟೆಗೆ ಹೊಸ ಲುಕ್

Share

ಪುಟ್ಟ ಮಕ್ಕಳು ಹೊರಗಡೆ ಆಟವಾಡಿ ಮನೆಯೊಳಗೆ ಕಾಲಿಡುತ್ತಿದ್ದಂತೆ “ನೋಡ್ರೋ ಕೈ ಕಾಲುಗಳೆಲ್ಲಾ ಮಣ್ಣಾಗಿದೆ. ಚೆನ್ನಾಗಿ ಕಾಲುಗಳನ್ನು ತೊಳೆದು ಮುಂಬಾಗಿಲ ಹೊಸ್ತಿಲ ಮುಂದಿರುವ ನೆಲಹಾಸುವಿನಲ್ಲಿ ಕಾಲು ಉಜ್ಜಿ ಒಳಗಡೆ ಹೋಗಿರೋ” ಎನ್ನುವ ಮಾತು ಮನೆಯಲ್ಲಿರುವ ಹಿರಿಯರಿಂದ ಬರುವುದು ಸಾಮಾನ್ಯ. ನಮ್ಮ ತಲತಲಾಂತರದಿಂದ ಬಂದಂತಹ ಪದ್ಧತಿ ಇದು. ಈಗಲೂ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಚಾಚೂ ತಪ್ಪದೆ ಪಾಲಿಸುತ್ತೇವೆ. ಅಂಗಳದಲ್ಲಿ ನಡೆದಾಡುವಾಗ ಕಾಲುಗಳಿಗೆ ಅಂಟಿರುವ ಧೂಳು, ಕೊಳೆ ಹೋಗಲಿ ಎಂದು ನೀರು ಹಾಕಿ ಚೆನ್ನಾಗಿ ತೊಳೆದ ನಂತರ, ಆ ನೀರು ಮನೆಯೊಳಗೆ ಬಂದು ಜಾರಿ ಬೀಳದಂತೆ ಜಾಗರೂಕತೆ ವಹಿಸಲು ಈ ಕ್ರಮ. ಇದಲ್ಲದೆ ಕ್ರಿಮಿಕೀಟಗಳು ಮನೆಯೊಳಗೆ ಪ್ರವೇಶಿಸದಂತೆ ಮುನ್ನೆಚ್ಚರಿಕೆ ವಹಿಸಿ ಆರೋಗ್ಯದ ದೃಷ್ಟಿಯಿಂದ ಕೂಡಾ ಇದೊಂದು ಒಳ್ಳೆಯ ಅಭ್ಯಾಸ.

ಇತ್ತೀಚಿನ ದಿನಗಳಲ್ಲಂತೂ “ಕೊರೋನಾ” ಎನ್ನುವ ಕಣ್ಣಿಗೆ ಕಾಣದ ವೈರಸ್‍ನ ಪ್ರಭಾವದಿಂದಾಗಿ ನಮ್ಮ ಪೂರ್ವಿಕರ ಆಚಾರ ವಿಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಉಟ್ಟು ಬಣ್ಣ ಮಾಸಿದ, ಹಳೆಯದಾದ ಕಾಟನ್ ಬಟ್ಟೆಗಳು, ಹರಿದು ಉಪಯೋಗಕ್ಕೆ ಬಾರದ ಗೋಣಿಗಳನ್ನು ಇಂತಹ ಕಾಲೊರೆಸುಗಳಾಗಿ ಬಳಸುತ್ತಿದ್ದ ಕಾಲವೊಂದಿತ್ತು. ಆದರೆ ಪ್ರತಿಯೊಂದರಲ್ಲೂ ಬಗೆಬಗೆಯ ವಿನ್ಯಾಸ, ನವನವೀನತೆ ಹುಡುಕೋ ಈ ಯುಗ, ಕಾಲೊರೆಸುವ ಮ್ಯಾಟ್‍ಗಳನ್ನೂ ಬಿಟ್ಟಿಲ್ಲ. ಈ ಜಾಗಕ್ಕೆ ಬಣ್ಣ ಬಣ್ಣಗಳಿಂದ ಕೂಡಿರುವ, ಕಾಲೊರೆಸಲು ಹಿಂದುಮುಂದು ಆಲೋಚನೆ ಮಾಡುವಂತಹ ಮಟ್ಟಿಗೆ ಸುಂದರವಾದ, ಆಗಮಿಸುವ ಅತಿಥಿಗಳಿಗೆ “ಸುಸ್ವಾಗತ” ಕೋರುವ ಹೀಗೆ ನಾನಾ ನಮೂನೆಯ ಮ್ಯಾಟ್‍ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಟ್ರೆಂಡ್‍ ಛೇಂಜ್ ಆಗಿ ಎಷ್ಟೇ ದುಬಾರಿ ಬೆಲೆಯ ಆಕರ್ಷಕ ಮ್ಯಾಟ್‍ಗಳು ಮಾರುಕಟ್ಟೆಯಲ್ಲಿ ದೊರೆಯಲಿ, ಹಳೇ ಬಟ್ಟೆಗಳು ಮಾತ್ರ ಇಂದಿಗೂ ನವನವೀನ. ಇವು ಮನೆಯಲ್ಲಿನ ಹೆಂಗಳೆಯರ ಕರಕುಶಲತೆಗೆ ಕೈಗನ್ನಡಿ ಹಿಡಿದಂತೆ. ಹಳೆಯ ಉಪಯೋಗಿಸಲು ಯೋಗ್ಯವಲ್ಲದ ಬಟ್ಟೆಗಳನ್ನು ಯಥಾರೂಪದಲ್ಲೇ ಬಳಸುವ ಬದಲು ಅದಕ್ಕೊಂದು ಒಪ್ಪವಾದ ಆಕಾರ ಕೊಟ್ಟು ಹೊಸ ಲುಕ್‍ನಲ್ಲಿ ಮನೆಯ ಮುಂದೆ ಹಾಸಿದರೆ ಸುಂದರವಾದ ವೆಚ್ಚರಹಿತವಾದ ಕಾಲೊರೆಸು ತಯಾರಾಗುತ್ತದೆ.

ಹಳೇ ಬಟ್ಟೆಗಳಿಂದ ತಮಗೆ ಬೇಕಾದ ಹಾಗೇ ವೃತ್ತಾಕಾರ, ಡೈಮಂಡ್ ,ಚೌಕಾಕಾರ, ಆಯತಾಕಾರ, ಹಾರ್ಟ್‍ಶೇಪ್ ಹೀಗೆ ವಿಭಿನ್ನಆಕಾರ, ವಿನ್ಯಾಸಗಳಿಂದ ಮ್ಯಾಟ್‍ಗಳನ್ನು ತಯಾರಿಸಬಹುದು. ಅಂದ ಹಾಗೆ ಇದು ನಾಜೂಕಿನ ಕೆಲಸ. ಈ ಮ್ಯಾಟ್‍ ತಯಾರಿಸಲು ಸಮಯ, ತಾಳ್ಮೆ ಎರಡೂ ಅವಶ್ಯಕ.

ಸೀರೆಯನ್ನು ಉದ್ದವಾಗಿ ತುಂಡರಿಸಿ ತಲೆಗೂದಲನ್ನು ಹೆಣೆಯುವಂತೆ ಸಿಂಪಲ್ ಮ್ಯಾಟ್, ಕ್ರೋಷರ್ ಸಹಾಯದಿಂದ ಹೆಣೆದು ಬೇಕಾದ ವಿನ್ಯಾಸಗಳನ್ನೂ ಮಾಡಬಹುದು. ಒಂದೇ ಬಟ್ಟೆಯ ಬದಲು ಬೇರೆ ಬೇರೆ ಬಣ್ಣದ ಬಟ್ಟೆಗಳನ್ನು ಸೇರಿಸಿ ಕಲರ್‍ಫುಲ್ ಕಾಲೊರೆಸುಗಳನ್ನು ತಯಾರಿಸಬಹುದು.ಇದು ಹೆಂಗಳೆಯರಿಗೆ ಬಿಡುವಿನ ಸಮಯ ಕಳೆಯಲು ಒಳ್ಳೆಯ ಹವ್ಯಾಸವೂ ಹೌದು. ಉಪಯೋಗವಿಲ್ಲದ ಕಾಟನ್, ನೈಲಾನ್ ಸೀರೆ,ನೈಟಿ, ಲುಂಗಿ, ಟೀ ಶರ್ಟ್‍ಗಳಿಂದ ನಾನಾ ವಿನ್ಯಾಸದಲ್ಲಿ ತಯಾರಿಸಬಹುದಾದ ಈ ಮ್ಯಾಟ್‍ಗಳನ್ನು ತಯಾರಿಸುವ ಸುಲಭ ವಿಧಾನಗಳನ್ನು ಅಂತರ್ಜಾಲದ ಮೂಲಕವೂ ಹುಡುಕಿ ಕಲಿಯಬಹುದಾಗಿದೆ. ಕೇವಲ ಮುಂಬಾಗಿಲಿಗೆ ಸೀಮಿತವಾಗಿದ್ದ ಕಾಲೊರೆಸು ಈಗ ಮನೆಯ ಪ್ರತಿ ರೂಮ್‍ಗಳ ಮುಂದೆ, ಅಲ್ಲದೆ ಮಲಗುವ ಮಂಚದ ಕೆಳಗೆ ಜಾಗ ಪಡೆದುಕೊಂಡು ಮನೆ ಸುಂದರವಾಗಿ ಕಾಣಲು ನಾವೂ ಕೂಡಾ ಪ್ರಾಮುಖ್ಯವೇ ಎಂಬುದನ್ನು ಸಾರುತ್ತಿವೆ.

–ವಂದನಾರವಿ ಕೆ.ವೈ.ವೇಣೂರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಖ್ಯಾತಿ-ಪ್ರಚಾರವಲ್ಲ, ಸಮಾಜ ಪರಿವರ್ತನೆಯೇ ಚಾತುರ್ಮಾಸ್ಯದ ಗುರಿ

‘ಅನ್ನಂ ಬ್ರಹ್ಮ’ ಚಾತುರ್ಮಾಸ್ಯದ ಉದ್ದೇಶ ಖ್ಯಾತಿ ಅಥವಾ ಪ್ರಚಾರವಲ್ಲ, ಸಮಾಜ ಪರಿವರ್ತನೆ ಎಂದು…

4 hours ago

ಮೇಘಾಲಯದ ಅಡಿಕೆಗೆ ಜಿಐ ಟ್ಯಾಗ್‌ ಪ್ರಕ್ರಿಯೆ..! ಮಲೆನಾಡು ಅಡಿಕೆಗೂ ಏಕೆ ಪ್ರಯತ್ನಿಸಬಾರದು..?

ಮೇಘಾಲಯ ಅಡಿಕೆಗೆ ಜಿಐ ಟ್ಯಾಗ್‌ ಪಡೆಯಲು ಅರ್ಜಿ ಸಲ್ಲಿಸಿರುವ ಬೆಳವಣಿಗೆ ಅಡಿಕೆಯ ಭೌಗೋಳಿಕ…

7 hours ago

ಹವಾಮಾನ ವರದಿ | 27-09-2026 | ಕರ್ನಾಟಕದಲ್ಲಿ ಸದ್ಯ ಒಣಹವೆ ; ಸೆ.28ರಿಂದ ಮತ್ತೆ ಮಳೆ ಸಾಧ್ಯತೆ..!

ಕರ್ನಾಟಕದಾದ್ಯಂತ ಸೆ.28ರಂದು ಒಣಹವೆ ಆವರಿಸುವ ಸಾಧ್ಯತೆ ಇದ್ದರೂ ಕೊಡಗು ಹಾಗೂ ಚಿಕ್ಕಮಗಳೂರಿನ ಕೆಲವು…

13 hours ago

ಮಲೆನಾಡಿನಲ್ಲಿ ಅಡಿಕೆ ಕಷ್ಟ…!, ಬಯಲುಸೀಮೆಯಲ್ಲಿ ಅಡಿಕೆ ಇಷ್ಟು ಸುಲಭವೇ? ಕಾರಣ ತಿಳಿದರೆ ಅಚ್ಚರಿಯಾಗುತ್ತೆ!

ಬಯಲುಸೀಮೆಯಲ್ಲಿ ಅಡಿಕೆ ಬೆಳೆ ವಿಸ್ತರಣೆಗೆ ನೀರಾವರಿ, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಉತ್ತಮ…

17 hours ago

ಹಾಲಿನ ದರ ಏರಿಕೆ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ – ಡಿ.ಕೆ.ಶಿವಕುಮಾರ್

ಹಾಲಿನ ದರವನ್ನು ₹12 ಹೆಚ್ಚಿಸುವಂತೆ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮನವಿ ಮಾಡಿದ್ದಾರೆ.…

19 hours ago

ದೇಶಿ ಗೋವಿನ ಹಾಲು, ತುಪ್ಪದ ಮಹತ್ವದ ಪ್ರತಿಪಾದನೆ – ಪಾರಂಪರಿಕ ಆಹಾರ ಪದ್ಧತಿಗೆ ಒತ್ತು

ಗೋಕರ್ಣದಲ್ಲಿ ನಡೆದ ಅನ್ನಬ್ರಹ್ಮ ಚಾತುರ್ಮಾಸ್ಯದ ಸಮಾರೋಪದಲ್ಲಿ ದೇಶಿ ಗೋವಿನ ಹಾಲು, ತುಪ್ಪ ಹಾಗೂ…

1 day ago