ಮಾಹಿತಿ

ಎಲ್ಲರಿಗೂ ಸುರಕ್ಷಿತ ಟ್ಯಾಪ್ ನೀರನ್ನು ಒದಗಿಸಲು ಬಾಟಲ್ ನೀರು ಮಾರಾಟದ ಅರ್ಧದಷ್ಟು ಹಣ ಸಾಕು – UN ಸ್ಫೋಟಕ ವರದಿ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಬಾಟಲ್ ವಾಟರ್‌ಗಾಗಿ ಜಾಗತಿಕವಾಗಿ ಖರ್ಚು ಮಾಡುವ ಅರ್ಧದಷ್ಟು ಹಣ ಟ್ಯಾಪ್‌ಗಳಿಂದ ನೀರು ಒದಗಿಸಲು ಸಾಕು. ಕೇಳಲು ಆಶ್ಚರ್ಯ  ಅನ್ನಿಸಿದರು ವಿಷಯ ಮಾತ್ರ ಸತ್ಯ.

Advertisement

ಇತ್ತೀಚಿನ ದಿನಗಳಲ್ಲಿ ಬಾಟಲ್ ನೀರಿನ ಮಾರಾಟವು ಯಥೇಚ್ಛವಾಗಿ ಬೆಳೆಯುತ್ತಿದೆ.  ಇತ್ತೀಚೆಗೆ ಬಿಡುಗಡೆಯಾದ ಯುಎನ್ ಅಧ್ಯಯನದ ಪ್ರಕಾರ, ಅಂದಾಜು 85 ಪ್ರತಿಶತದಷ್ಟು ಬಾಟಲಿಗಳು ನೆಲದಲ್ಲಿ ಹುದುಗುವುದರಿಂದ ಪ್ಲಾಸ್ಟಿಕ್ ತ್ಯಾಜ್ಯದಲ್ಲಿ ದೊಡ್ಡ ಮಟ್ಟದ ಪರಿಸರ ಹಾನಿಗೆ ಕಾರಣವಾಗುತ್ತಿದೆ ಎಂದು ವರದಿ ಹೇಳಿದೆ.

ಆದಾಗ್ಯೂ, ಕೆನಡಾ ಮೂಲದ ಲೇಖಕ ಫ್ಲ್ಯಾಗ್ ರ ಅಧ್ಯಯನದ ಪ್ರಕಾರ ನಳ್ಳಿ ಮತ್ತು ಬಾಟಲ್ ವಾಟರ್ ಎರಡರ ಸುರಕ್ಷತೆಯ ಬಗ್ಗೆ ತಪ್ಪು ಕಲ್ಪನೆ ಬಿತ್ತುತ್ತಿರುವುದರಿಂದ ನೀರಿನ ಆದ್ಯತೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳುತ್ತಾರೆ.

“ಬಾಟಲ್ ನೀರು ಆರೋಗ್ಯಕರ ಆಯ್ಕೆಯಾಗಿದೆ ಎಂಬುದು ತಪ್ಪು ಗ್ರಹಿಕೆಯಾಗಿದೆ” ಎಂದು ಪ್ರಮುಖ ಲೇಖಕ ಝೈನೆಬ್ ಬೌಹ್ಲೆಲ್ ತಿಳಿಸಿದರು. “ಆದರೆ ಇದು ದೊಡ್ಡ ವಿಷಯ ಅಲ್ಲ. ಅದಕ್ಕಿಂತ ಹೆಚ್ಚಾಗಿ ಜನರು ಬಾಟಲ್ ನೀರಿಗೆ 150 ರಿಂದ 1,000 ಹೆಚ್ಚುಪಟ್ಟು ಪಾವತಿಸುತ್ತಿದ್ದಾರೆ. ಅಂದ್ರೆ ಶುದ್ಧವಾದ ಒಂದು ಲೀಟರ್ ಟ್ಯಾಪ್ ನೀರಿಗಿಂತಲೂ ಅಧಿಕ ಎಂದು ವರದಿ ಹೇಳಿದೆ.

ಅಧ್ಯಯನದ ಪ್ರಕಾರ, 40 ಕ್ಕೂ ಹೆಚ್ಚು ದೇಶಗಳಲ್ಲಿ ನೂರಾರು ಬಾಟಲ್ ವಾಟರ್ ಬ್ರ್ಯಾಂಡ್‌ಗಳಲ್ಲಿ ಮಾಲಿನ್ಯಕಾರಕಗಳು ಕಂಡುಬಂದಿವೆ, ಆಗಾಗ್ಗೆ ಸ್ಥಳೀಯ ಅಥವಾ ಜಾಗತಿಕ ಮಾನದಂಡಗಳನ್ನು ಮೀರಿವೆ. ಕಳೆದ ದಶಕದಲ್ಲಿ, ಜಾಗತಿಕ ಬಾಟಲಿ ನೀರಿನ ಮಾರಾಟವು 73 ಪ್ರತಿಶತದಷ್ಟು ಹೆಚ್ಚಿ ಸುಮಾರು $270 ಶತಕೋಟಿ ಮತ್ತು 350 ಶತಕೋಟಿ ಲೀಟರ್‌ಗಳಿಗೆ ತಲುಪಿದೆ.

 

ಪ್ರತಿ ವರ್ಷ ಸುಮಾರು 600 ಶತಕೋಟಿ ಪ್ಲಾಸ್ಟಿಕ್ ಬಾಟಲಿಗಳನ್ನು ಉತ್ಪಾದಿಸಲಾಗುತ್ತದೆ, ಇದು ಸರಿಸುಮಾರು 25 ಮಿಲಿಯನ್ ಟನ್ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವಾಗಿದೆ. ಗ್ಲೋಬಲ್ ನಾರ್ತ್‌ನಲ್ಲಿ, ಗ್ರಾಹಕರು ಬಾಟಲ್ ನೀರನ್ನಾದ್ರೆ ಸುಲಭವಾಗಿ ತೆಗೆದುಕೊಂಡು ಹೋಗ ಬಹುದು ಹಾಗೂ ಅದರ ರುಚಿಗೆ ಮನಸೋತು ಖರೀದಿಸಲು ಒಲವು ತೋರುತ್ತಾರೆ. ಆದರೆ ಸೌತ್‌ ಗ್ಲೋಬಲ್ ನಲ್ಲಿ ಸಾಮಾನ್ಯವಾಗಿ ವಿಶ್ವಾಸಾರ್ಹ ಸಾರ್ವಜನಿಕ ನೀರು ಸರಬರಾಜುಗಳ ಕೊರತೆಯಿಂದ ಬಾಟಲ್ ನೀರಿನ ಮಾರಾಟ ಅಧಿಕವಾಗುತ್ತಿದೆ..

ಬಾಟಲ್ ವಾಟರ್ ಉದ್ಯಮವು ಹೆಚ್ಚಾಗಿ ಅನಿಯಂತ್ರಿತವಾಗಿದೆ ಎಂದು ವರದಿಯು ಹೇಳುತ್ತದೆ.  ಏಕೆಂದರೆ ನೀತಿ ನಿರೂಪಕರಿಗೆ ಈ ದಂಧೆ ಬೆಳೆಯುತ್ತಿರುವ ವೇಗಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಇದರಿಂದ ಬಾಟಲ್ ವಾಟರ್ ನೀರು ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು ಅಂತರ್ಜಲ ಕುಸಿತಕ್ಕೆ ಕಾರಣವಾಗುತ್ತಿದೆ ಎಂದು ಲೇಖಕರ ಆತಂಕ.

ಕೆನಡಾದ ಹ್ಯಾಮಿಲ್ಟನ್‌ನಲ್ಲಿರುವ ಯುಎನ್ ಯೂನಿವರ್ಸಿಟಿಯ ಇನ್‌ಸ್ಟಿಟ್ಯೂಟ್ ಆಫ್ ವಾಟರ್ ಎನ್ವಿರಾನ್‌ಮೆಂಟ್ ಅಂಡ್ ಹೆಲ್ತ್‌ನ ವ್ಲಾಡಿಮಿರ್ ಸ್ಮಾಖ್ಟಿನ್, ಎರಡು ಬಿಲಿಯನ್ ಜನರಿಗೆ ಇನ್ನೂ ಸುರಕ್ಷಿತವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದು ಹೇಳುತ್ತಾರೆ. ಆಫ್ರಿಕಾದಲ್ಲಿ ಪರಿಸ್ಥಿತಿಯು ಇನ್ನು ಕೆಟ್ಟದಾಗಿದೆ ಮತ್ತು ಜಾಗತಿಕವಾಗಿ ಇಲ್ಲಿ ಬಾಟಲಿ ನೀರಿನ ಮಾರುಕಟ್ಟೆಗಳ ವಿಸ್ತರಣೆ ಬಹಳ ಮುಂದೆ ಸಾಗಿದೆ. ಹಾಗಾಗಿ ಇದು ಸಾರ್ವಜನಿಕ ನೀರಿನ ವ್ಯವಸ್ಥೆಗಳ ಅಭಿವೃದ್ಧಿಯಿಂದ ಹಿಂದೆ ಉಳಿದಿದೆ. ಇದು ಸಂಪನ್ಮೂಲಗಳನ್ನು ವಿಚಲಿತಗೊಳಿಸುತ್ತದೆ ಎಂದು ಅವರು ವಾದಿಸಿದರು.

2020 ರಲ್ಲಿ ವಿಶ್ವದ ಜನಸಂಖ್ಯೆಯ 74 ಪ್ರತಿಶತದಷ್ಟು ಜನರು ಸುರಕ್ಷಿತವಾಗಿ ನಿರ್ವಹಿಸಲಾದ ಕುಡಿಯುವ ನೀರನ್ನು ಬಳಸುವುದರೊಂದಿಗೆ ಕೆಲವು ಪ್ರಗತಿ ಕಂಡುಬಂದಿದೆ, ಇದು 2000 ರಲ್ಲಿ 62 ಪ್ರತಿಶತದಷ್ಟು ಹೆಚ್ಚಾಗಿದೆ. ಆದರೆ 2030 ರ ವೇಳೆಗೆ ಕುಡಿಯುವ ನೀರನ್ನು ಸಾರ್ವತ್ರಿಕವಾಗಿ ಲಭ್ಯವಾಗುವಂತೆ ಮಾಡುವ ಯುಎನ್ ಗುರಿಯನ್ನು ಪೂರೈಸಲು ಶ್ರಮಿಸಲಾಗುತ್ತಿದೆ. ಆದರೆ ಪ್ರಗತಿ ಅಂದುಕೊಳ್ಳುವ ಮಟ್ಟಿಗೆ ಸಾಗುತ್ತಿಲ್ಲ ಎಂದು ಹೇಳಿದರು.

“ಬಾಟಲ್ ಬದಲಿಗೆ ಸ್ಥಿರವಾದ ವಿಶ್ವಾಸಾರ್ಹ ನೀರನ್ನು ಜನರಿಗೆ ಒದಗಿಸಲು ಸಾರ್ವಜನಿಕ ನೀರು ಸರಬರಾಜುಗಳಲ್ಲಿ ಹೆಚ್ಚು ಹೂಡಿಕೆ ಮಾಡಲು ನಾವು ಪ್ರಯತ್ನಿಸಬೇಕು” ಎಂದು ಅವರು ಹೇಳಿದರು. ಹೆಚ್ಚು ಪಾರದರ್ಶಕತೆ ಮತ್ತು ಕಾನೂನು ಕ್ರಮಗಳಿಗೆ ಕರೆ ನೀಡಿದರೆ ಮಾತ್ರ  ಬಾಟಲಿ ನೀರಿನ ಕಂಪನಿಗಳನ್ನು ತೆಗೆದು ನಳ್ಳಿ ನೀರುಗಳ ಮೂಲಕ ಸಾರ್ವಜನಿಕವಾಗಿ ನೀರನ್ನು ಒದಗಿಸಲು ಒತ್ತಾಯಿಸಲಾಗುತ್ತಿದೆ. ಈ ಚಟುವಟಿಕೆಗಳ ಮೇಲೆ ಪರಿಸರ ಪರಿಣಾಮಗಳನ್ನು ನಿರ್ಣಯಿಸಬಹುದು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ರಾಷ್ಟ್ರೀಯ ಭದ್ರತೆ | ಪ್ರಧಾನಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ | ಹಲವು ವಿಷಯಗಳ ಕುರಿತು ಚರ್ಚೆ

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರದ ಎಲ್ಲಾ…

10 hours ago

ರಾಜ್ಯದ 6 ಜಿಲ್ಲೆಗಳಲ್ಲಿ ಶೀಥಲೀಕರಣ ಘಟಕ ನಿರ್ಮಾಣ

ರಾಜ್ಯದ 6 ಜಿಲ್ಲೆಗಳಲ್ಲಿ ತೋಟಗಾರಿಕಾ ಬೆಳೆಗಳಿಗೆ ಅನುಕೂಲವಾಗುವಂತೆ ಶೀಥಲೀಕರಣ ಘಟಕಗಳನ್ನು ನಿರ್ಮಿಸಲಾಗುತ್ತಿದೆ ಎಂದು…

11 hours ago

ಕೇಂದ್ರದ ಬೆಂಬಲಕ್ಕಾಗಿ  ವಿಶೇಷ ಜಾಥಾ | ಪಕ್ಷಾತೀತವಾಗಿ  ಬೆಂಬಲ

ದೇಶದ  ಸೈನಿಕರಿಗೆ ಗೌರವ ಸಲ್ಲಿಸಿ  ಕೇಂದ್ರ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ  ನಾಳೆ…

11 hours ago

ಆಪರೇಷನ್ ಸಿಂದೂರ ಕಾರ್ಯಾಚರಣೆ | ಸರ್ವ ಪಕ್ಷಗಳ ಸಭೆಯಲ್ಲಿ ಬೆಂಬಲ |

ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರವಾಗಿ ಭಾರತವು ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಿನ್ನೆಯಷ್ಟೇ ನಡೆಸಿತು. ಇದಕ್ಕೆ…

11 hours ago

ಕೃಷಿಕರ ಪರವಾದ ಬರಹಗಾರರ ಮುಂದಿರುವ ಸವಾಲುಗಳು

ಕೃಷಿಯಲ್ಲಿ ಯಾವುದೇ ಬಲವಾದ ಸಂಘಟನೆ ಇಲ್ಲ. ನಮ್ಮ ಧ್ವನಿ ಎತ್ತಲು ಯಾರೂ ಇಲ್ಲ.ಇಂತಹ…

1 day ago

ಮೇ 13 ರಿಂದ 25 ರವರೆಗೆ ಈ ರಾಶಿಗಳಿಗೆ ಅದೃಷ್ಟ!, ಕೆಲವು ರಾಶಿಗಳಿಗೆ ಕಠಿಣ ಕಾಲ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದು ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

1 day ago