ಕಳೆದ 4 ವರ್ಷಗಳಿಂದ ಧಾರಾಮೃಥ ಡೈರೀ ಪ್ರಾಡಕ್ಟ್ಸ್ ಫ್ರೈ.ಲಿ. ಕಂಪನಿ ಪಾಲುದಾರಿಕೆಯಲ್ಲಿ ಪಿರಿಯಾಪಟ್ಟಣ ನಡೆಯುತ್ತಿದ್ದ ಡೈರಿಯಿಂದಲೇ ನೇರವಾಗಿ ಗ್ರಾಹಕರಿಗೆ ತಲುಪುತ್ತಿದ್ದ ಹಾಲು ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಮಾರುಕಟ್ಟೆಯಲ್ಲಿ ವಿನೂತನ ಬ್ರಾಂಡ್ “ಹಳ್ಳಿ ಹಾಲು” ಆಗಸ್ಟ್ ತಿಂಗಳಿನಿಂದ ಲಭ್ಯವಾಗಲಿದೆ.
ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಅನೂಪ್ ಕುಮಾರ್ ನೂಚಿಲ ಅವರು ಕಳೆದ 4 ವರ್ಷಗಳಿಂದ ಪಿರಿಯಾಪಟ್ಟಣ ಧಾರಾಮೃಥ ಡೈರೀ ಪ್ರಾಡಕ್ಟ್ಸ್ ಫ್ರೈ.ಲಿ. ಸಹಭಾಗಿತ್ವದಲ್ಲಿ ಹಾಲಿನ ಡೈರಿ ನಡೆಸುತ್ತಿದ್ದರು. ಇದೀಗ ಅನೂಪ್ ಅವರ ಡೈರಿಯಲ್ಲಿನ ಅವರದೇ ಬ್ರಾಂಡ್ *ಹಳ್ಳಿಹಾಲು* ಶುದ್ಧ ದೇಸೀ ಹಸುವಿನ ಹಾಲು ಪ್ಯಾಕಿಂಗ್ ಆರಂಭವಾಗಿದ್ದು ದ ಕ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳ ನಂತರ ಲಭ್ಯವಾಗಲಿದೆ. ಅದರ ಜೊತೆಗೆ ಇತರೇ 12 ಉತ್ಪನ್ನಗಳೊಂದಿಗೆ *ಹಳ್ಳಿಹಾಲು* ಬ್ರಾಂಡ್ ಲೋಕಾರ್ಪಣೆಗೊಳ್ಳಲಿದೆ. ದ.ಕ. ಜಿಲ್ಲೆಯಲ್ಲಿ ಮಾರುಕಟ್ಟೆ ಲಭ್ಯವಿದ್ದು ಆಸಕ್ತ ಡೀಲರ್ಸ್ ಸಂಪರ್ಕಿಸಬಹುದು ಎಂದು ಅನೂಪ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೂರವಾಣಿ ಸಂಖ್ಯೆ: 9606058321