ದಕ್ಷಿಣಕನ್ನಡದ ಪುತ್ತೂರಿನಿಂದ ಕಾವು ಮಾರ್ಗವಾಗಿ ಸುಮಾರು 22 ಕಿಲೋಮೀಟರ್ ಸಾಗಿದಾಗ ಸಿಗುತ್ತದೆ ಈಶ್ವರಮಂಗಲ ಎನ್ನುವ ಪುಟ್ಟಊರು. ಇಲ್ಲಿಗೆ ಸಮೀಪದಲ್ಲಿದೆ ಹನುಮಗಿರಿ ಬೆಟ್ಟ.ರಾಮಭಕ್ತ ಇಲ್ಲಿ ಹನುಮಂತ, ವರಾಹ, ನರಸಿಂಹ, ಹಯಗ್ರೀವ ಮತ್ತುಗರುಡ ಹೀಗೆ ಐದು ಮುಖಗಳನ್ನೊಳಗೊಂಡು ಪಂಚಮುಖಿ ಆಂಜನೇಯನಾಗಿ ನೆಲೆಸಿ ಭಕ್ತರನ್ನು ಪೊರೆಯುತ್ತಿದ್ದಾನೆ.
ಸುಮಾರು 11 ಅಡಿ ಎತ್ತರವಿರುವ ಆಂಜನೇಯ ವಿಗ್ರಹವನ್ನು ಕೃಷ್ಣ ಶಿಲೆಯಲ್ಲಿ ಕೆತ್ತಲಾಗಿದ್ದುಇದು ಏಕಶಿಲಾ ವಿಗ್ರಹವಾಗಿದೆ. ರಘುಕುಲ ತಿಲಕ ಶ್ರೀ ರಾಮಚಂದ್ರನ ಹತ್ತು ಅಡಿ ಎತ್ತರದ ವಿಗ್ರಹವೂಇಲ್ಲಿದೆ. ಈ ಕ್ಷೇತ್ರ ಶ್ರೀ ರಾಮಾಂಜನೇಯರ ಐಕ್ಯತೆಯನ್ನು ಸಾರುವತಾಣವೂ ಹೌದು.
ಓಡಾಡಲು ವಿಶಾಲವಾದ ಅಂಗಣ, ಮಕ್ಕಳಿಗಾಗಿ ಮಾಡಲಾದ ಪಾರ್ಕ್, ಒಂದುಕಡೆ ನಿಂತು ನೋಡಿದರೆ ಕಾಣಸಿಗುವ ಬೆಟ್ಟಗುಡ್ಡಗಳ ಸಾಲುಗಳು, ಸಂಜೆಯ ಹೊತ್ತಿಗೆ ಬೀಸುವ ತಂಪಾದ ಗಾಳಿ ಕಣ್ಮನಕ್ಕೆ ಮುದಕೊಡುವಂತಿದೆ. ಮದ್ಯಾಹ್ನ ದೇವಸ್ಥಾನದ ವತಿಯಿಂದ ಊಟದ ವ್ಯವಸ್ಥೆಯೂಇದೆ.ಗೋವುಗಳ ಸಂರಕ್ಷಣೆಗೆ ಗೋ ಶಾಲೆಯೂ ಇಲ್ಲಿದೆ.ಇಲ್ಲಿ ಬಂದು ಭಕ್ತಿಯಿಂದ ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡಿದರೆ ಆರೋಗ್ಯದ ಸಮಸ್ಯೆಗಳು ಪರಿಹಾರವಾಗುತ್ತದೆ ಅಲ್ಲದೇ ಬೇಡಿದ್ದನ್ನುಆಂಜನೇಯ ಈಡೇರಿಸುತ್ತಾನೆ ಎನ್ನುವ ಮಾತುಗಳಿವೆ.
# ವಂದನಾರವಿ ಕೆ.ವೈ.ವೇಣೂರು.