Advertisement
ಅನುಕ್ರಮ

ಸಂತೋಷ – ಮನಸ್ಸಿನ ಸ್ಥಿತಿ, ಜೀವನದ ಸತ್ಯ

Share

“ಸಂತೋಷ” ಎಂಬ ಪದವು ಸಂಸ್ಕೃತದ “सम् + तुष्” (ತೃಪ್ತೌ) ಎಂಬ ಮೂಲದಿಂದ ಬಂದಿದೆ. ಇದರ ಅರ್ಥ – ಸಂಪೂರ್ಣ ತೃಪ್ತಿ, ಮನಸ್ಸಿಗೆ ಶಾಂತಿ, ಹೃದಯಕ್ಕೆ ಹರ್ಷ. ನಿಜವಾಗಿ ನೋಡಿದರೆ, ಸಂತೋಷವೆಂದರೆ ದುಬಾರಿ ವಸ್ತುಗಳಲ್ಲೂ, ದೊಡ್ಡ ಸ್ಥಾನ–ಮಾನದಲ್ಲೂ ಮಾತ್ರ ಇರುವುದಲ್ಲ; ಅದು ನಮ್ಮ ಒಳಗಿನ ಮನೋಭಾವದಲ್ಲಿ ನೆಲೆಸಿದೆ.

ವೇದೋಪನಿಷತ್ತುಗಳು ಸಂತೋಷವನ್ನು ಅತ್ಯಂತ ಶ್ರೇಷ್ಠ ತತ್ವವೆಂದು ನೋಡಿವೆ. ತೈತ್ತಿರೀಯೋಪನಿಷತ್ ಹೇಳುತ್ತದೆ: “ಆನಂದೋ ಬ್ರಹ್ಮೇತಿ ವ್ಯಜಾನಾತ್” ಬ್ರಹ್ಮವೇ ಆನಂದ, ಆನಂದವೇ ಬ್ರಹ್ಮ. ಅಂದರೆ ನಿಜವಾದ ಸಂತೋಷ ನಮ್ಮ ಒಳಗಿನ ಆಧ್ಯಾತ್ಮಿಕ ಅನುಭವ. ಛಾಂದೋಗ್ಯೋಪನಿಷತ್ ಹೇಳುವಂತೆ: “ಯೋ ವೈ ಭೂಮಾ ತತ್ಸುಖಂ, ನಾಲ್ಪೇ ಸುಖಮಸ್ತಿ” ಅಲ್ಪವಾದದಲ್ಲ ಸುಖವಿಲ್ಲ, ಅನಂತದಲ್ಲಿಯೇ ಸುಖ. ಇದು ನಮ್ಮ ಇಂದಿನ ಜೀವನಕ್ಕೂ ಹೊಂದುತ್ತದೆ. ಹೆಚ್ಚು ಹಣ–ಹುದ್ದೆ ಪಡೆದಾಗ ತಾತ್ಕಾಲಿಕ ಸಂತೋಷ ಸಿಗಬಹುದು, ಆದರೆ ಅದು ಶಾಶ್ವತವಲ್ಲ. ನಿಜವಾದ ಶಾಂತಿ ನಮ್ಮ ಮನಸ್ಸು ವಿಶಾಲವಾಗಿದಾಗ, ಅಸೀಮತೆಗೆ ತಲುಪಿದಾಗ ಮಾತ್ರ ದೊರೆಯುತ್ತದೆ.

ಭಗವದ್ಗೀತೆ ಈ ಅಂಶವನ್ನು ಅತ್ಯಂತ ಸುಂದರವಾಗಿ ಹೇಳುತ್ತದೆ: “ಯೋऽಂತಃಸುಖೋऽಂತರಾರಾಮಸ್ತಥಾಂತರ್ಜ್ಯೋತಿರೇವ ಯಃ” – ಯಾರು ತಮ್ಮೊಳಗೆ ಸಂತೋಷವನ್ನು ಕಾಣುತ್ತಾರೆ, ಅವರಿಗೇ ನಿಜವಾದ ಶಾಂತಿ ಸಿಗುತ್ತದೆ. ನಾವು ದಿನನಿತ್ಯದಲ್ಲಿ ಅನುಭವಿಸುವುದೂ ಇದೇ. ಹೊರಗಿನ ಪ್ರಾಪ್ತಿಗಳು ಬದಲಾಗುತ್ತಿರುತ್ತವೆ – ಹೊಸ ಕಾರು, ಹೊಸ ಮನೆ, ಹೊಸ ಹುದ್ದೆ – ಇದರಿಂದ ಸಂತೋಷ ತಾತ್ಕಾಲಿಕ. ಆದರೆ ಅಂತರಂಗದಲ್ಲಿ ತೃಪ್ತಿ ಬಂದರೆ, ಆ ಸಂತೋಷ ದೀರ್ಘಕಾಲ ಉಳಿಯುತ್ತದೆ.

ಆದರೆ ಒಂದು ತಪ್ಪು ಕಲ್ಪನೆ ಸಮಾಜದಲ್ಲಿ ಇದೆ. ಕೆಲವೊಮ್ಮೆ ಇನ್ನೊಬ್ಬರಿಗೆ ತೊಂದರೆ ಕೊಡುತ್ತಾ, ಅಥವಾ ಅವರ ಕಷ್ಟದಲ್ಲಿ ಹಿಗ್ಗುತ್ತಾ ಕೆಲವರು ಸಂತೋಷ ಪಡುತ್ತಾರೆ. ಮನುಸ್ಮೃತಿ ಇದನ್ನು ತಿರಸ್ಕರಿಸುತ್ತದೆ: “ಸ ದಂಡ್ಯಃ ಸರ್ವಲೋಕೇಷು ನ ಚ ತೇನ ಸುಖೀ ಭವೇತ್” ಇತರರಿಗೆ ನೋವುಂಟುಮಾಡಿ ಪಡೆದ ಸುಖವು ನಿಜವಾದ ಸುಖವಲ್ಲ. ಇಂದಿನ ಭಾಷೆಯಲ್ಲಿ ಹೇಳಬೇಕೆಂದರೆ, “ನಾವು ಬೇರೆಯವರ ಮೇಲೆ ಕಾಲಿಟ್ಟರೆ ಸ್ವಲ್ಪ ಹೊತ್ತು ಎತ್ತರದಲ್ಲಿದ್ದಂತೆ ಕಾಣಬಹುದು, ಆದರೆ ನಿಜವಾದ ನೆಮ್ಮದಿ ಸಿಗುವುದಿಲ್ಲ.”

ಸಂತೋಷದಿಂದ ಏನು ಪ್ರಯೋಜನ? ವಿಜ್ಞಾನವೂ ಈಗ ಇದನ್ನು ಒಪ್ಪಿಕೊಂಡಿದೆ ಸಂತೋಷದಿಂದ ಕೂಡಿದ ಮನಸ್ಸು ಆರೋಗ್ಯಕ್ಕೆ ಸಹಾಯಕ, ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ, ರೋಗಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ. ಸಂತೋಷದಿಂದ ನಮ್ಮ ಆಲೋಚನೆ ಸ್ಪಷ್ಟವಾಗುತ್ತದೆ, ಸೃಜನಶೀಲತೆ ಬೆಳೆಯುತ್ತದೆ. ಸಮಾಜದಲ್ಲಿಯೂ ಸಹ ಸಂತೋಷಭರಿತ ವ್ಯಕ್ತಿಯ ಸಾನ್ನಿಧ್ಯ ಜನರಿಗೆ ಹಿತ ನೀಡುತ್ತದೆ; ಸಹಾನುಭೂತಿ, ಪ್ರೀತಿ, ಬಾಂಧವ್ಯ ಇವುಗಳು ಹೆಚ್ಚುತ್ತವೆ.
ಸಂತೋಷ ಮತ್ತು ಪ್ರೀತಿ ಬಹಳ ಆಳವಾದ ಸಂಬಂಧ ಹೊಂದಿವೆ. ಬೃಹದಾರಣ್ಯಕೋಪನಿಷತ್ ಹೇಳುತ್ತದೆ: “ಆತ್ಮನಸ್ತು ಕಾಮಾಯ ಸರ್ವಂ ಪ್ರಿಯೋ ಭವತಿ” ಯಾವುದೂ ಸ್ವತಃ ಪ್ರಿಯವಾಗುವುದಿಲ್ಲ, ಅದು ಆತ್ಮಕ್ಕಾಗಿ ಪ್ರಿಯವಾಗುತ್ತದೆ. ಅಂದರೆ ನಿಜವಾದ ಪ್ರೀತಿಯೇ ಆಂತರಿಕ ಸಂತೋಷದ ಮೂಲ. ಪ್ರೀತಿಯಿಲ್ಲದ ಸಂತೋಷ ಸ್ವಾರ್ಥಮಯ, ಕ್ಷಣಿಕ. ಸಂತೋಷವಿಲ್ಲದ ಪ್ರೀತಿ ಬಾಧ್ಯತೆ. ಪ್ರೀತಿ ಮತ್ತು ಸಂತೋಷ ಒಂದೇ ಆಗಿ ಬೆರೆತಾಗ, ಜೀವನಕ್ಕೆ ಶಾಶ್ವತ ಆನಂದ ದೊರೆಯುತ್ತದೆ.

Advertisement

ಇಂದಿನ ಜೀವನದ ನೈಜ ಉದಾಹರಣೆ ತೆಗೆದುಕೊಳ್ಳಿ. ಯಾರಾದರೂ ತಮ್ಮ ಕಚೇರಿಯಲ್ಲಿ ಹುದ್ದೆ ಏರಿದಾಗ ಸಂತೋಷಪಡುತ್ತಾರೆ. ಆದರೆ ಆ ಹುದ್ದೆಯಿಂದ ಮತ್ತೊಬ್ಬರನ್ನು ಕುಗ್ಗಿಸುವ ಹಂಬಲ ಇದ್ದರೆ, ಆ ಸಂತೋಷ ಶಾಶ್ವತವಾಗುವುದಿಲ್ಲ. ಆದರೆ ಆ ವ್ಯಕ್ತಿ ತನ್ನ ಸುತ್ತಲಿನ ಸಹೋದ್ಯೋಗಿಗಳಿಗೆ ಸಹಾಯ ಮಾಡಿದಾಗ, ಅವರಿಗೂ ಉತ್ತೇಜನ ನೀಡಿದಾಗ, ಅವನ ಸಂತೋಷ ಆಳವಾಗಿ ನೆಲೆಗೊಳ್ಳುತ್ತದೆ. ಮನೆಯಲ್ಲಿಯೂ ಇದೇ. ಮಕ್ಕಳು ಹೆಚ್ಚು ಆಟಿಕೆ ಕೇಳಿದಾಗ ತಾತ್ಕಾಲಿಕ ಸಂತೋಷ ಸಿಗಬಹುದು, ಆದರೆ ಪೋಷಕರ ಪ್ರೀತಿ, ಅಕ್ಕಪಕ್ಕದವರ ಜೊತೆಗಿನ ಬಾಂಧವ್ಯವೇ ಅವರ ಶಾಶ್ವತ ಸಂತೋಷಕ್ಕೆ ಆಧಾರ.
ಹೀಗಾಗಿ ಸಂತೋಷವೆಂದರೆ ಕೇವಲ ಬಾಹ್ಯ ಪ್ರಾಪ್ತಿಗಳಲ್ಲ, ಅದು ಅಂತರಂಗದ ಅನುಭವ. ಬೇರೆಯವರಿಗೆ ನೋವುಂಟುಮಾಡುವುದರಲ್ಲಿ ದೊರೆಯುವ ಹಿಗ್ಗು ನಿಜವಾದ ಸಂತೋಷವಲ್ಲ. ಬೇರೆಯವರ ಮುಖದಲ್ಲಿ ನಗು ಮೂಡಿಸಲು ನಾವು ಕಾರಣರಾದಾಗ, ಅದರಿಂದ ನಮ್ಮ ಹೃದಯದಲ್ಲಿ ಉಂಟಾಗುವ ಶಾಂತಿಯೇ ಶುದ್ಧ ಸಂತೋಷ. ಪ್ರೀತಿ, ಕೃಪೆ, ಸಮಾನತೆ ಇವೆಲ್ಲವೂ ಸಂತೋಷದ ಮೂಲಾಧಾರ. ಉಪನಿಷತ್ತು, ಗೀತೆ, ಮಹಾಭಾರತದ ಸಂದೇಶವೆಲ್ಲ ಒಂದೇ ನಿಜವಾದ ಸಂತೋಷವೆಂದರೆ ಒಳಗಿನ ತೃಪ್ತಿ; ಅದು ಶಾಶ್ವತ, ಅದೇ ಮಾನವನ ಜೀವನದ ಪರಮ ಸಾಧನೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

Published by
ಕುಮಾರಸುಬ್ರಹ್ಮಣ್ಯ ಮುಳಿಯಾಲ

Recent Posts

ತೆಂಗಿನಕಾಯಿಯಿಂದ Gen-Z ಫೇವರಿಟ್ ಫುಡ್‌…! ವೆಗನ್ ಕುಲ್ಫಿ ಮತ್ತು ಚಾಕೊಲೇಟ್ ಬಿಡುಗಡೆ

ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್‌ Z ಗಾಗಿ…

9 minutes ago

ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ

ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…

20 minutes ago

ತೆಂಗಿನಕಾಯಿ ಬೆಲೆ ಏಕೆ ಇಳಿಯುತ್ತಿದೆ? ರೈತರಿಗೆ ಮುಂದೇನು?

ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು…

28 minutes ago

ಡಿಜಿಟಲ್ ಕೃಷಿ, ಹವಾಮಾನ ಸಹಿಷ್ಣು ಬೆಳೆಗಳಿಗೆ ಬೆಂಬಲ -ಕೃಷಿ ಸಚಿವರಿಂದ ಸಭೆ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್‌ ಸಿಂಗ್‌ ಚೌಹಾನ್‌ ಅವರು…

1 hour ago

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಎಳ್ಳು ಸೇವನೆ ಉತ್ತಮ

ಚಳಿಗಾಲದಲ್ಲಿ ಆಹಾರ ಪದ್ಥತಿಯಲ್ಲೂ ಬದಲಾವಣೆ ಮಾಡಿಕೊಂಡರೆ ಉತ್ತಮ. ಅದರಲ್ಲಿ ಎಳ್ಳು ಸೇವನೆಯೂ ಒಂದು.…

1 hour ago

ನಗರ ಪ್ರದೇಶದ ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ವಿತರಣೆ ಸಚಿವ ಸಂಪುಟದಲ್ಲಿ ನಿರ್ಣಯ

ರಾಜ್ಯ ಸರ್ಕಾರ, ರಾಜಧಾನಿ ಬೆಂಗಳೂರಿನ ನಂತರ ಇದೀಗ ರಾಜ್ಯಾದ್ಯಂತ ಆಸ್ತಿ ಮಾಲೀಕರಿಗೆ ಸಿಹಿ…

1 hour ago