ಪುತ್ತೂರು: ದೀಪಾವಳಿ ಶುಭ ದೀಪಾವಳಿ ಅಭಿಯಾನ

November 9, 2023
8:48 AM
ಸ್ವಚ್ಛ ದೀಪಾವಳಿ ವಿಡಿಯೋ ರೀಲ್ಸ್ 30 ರಿಂದ 60 ಸೆಕೆಂಡುಗಳ ಸಣ್ಣ ವಿಡಿಯೋಗಳನ್ನು ಸಂಯೋಜಿಸಿ,ರಚಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೂಲಕ ನಾಗರಿಕರು ತೊಡಗಿಸಿಕೊಳ್ಳಲು ಪುತ್ತೂರು ನಗರಸಭೆ ಕೋರಿದೆ.

ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ದೀಪಗಳ ಹಬ್ಬವಾದ ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿನಾಗಿ ಆಚರಿಸಲು ನವೆಂಬರ್ 6 ರಿಂದ ನವೆಂಬರ್ 14ರವರೆಗೆ ಸ್ವಚ್ಛ ದೀಪಾವಳಿ ಶುಭ ದೀಪಾವಳಿ ಅಭಿಯಾನ ನಡೆಯಲಿದೆ.

Advertisement

ಪಟಾಕಿಗಳು ಸ್ಪೋಟಿಸುವುದರಿಂದ ಉಂಟಾಗುವ ಶಬ್ದ ಮಾಲಿನ್ಯ, ವಾಯುಮಾಲಿನ್ಯ ಮತ್ತು ತ್ಯಾಜ್ಯ ಉತ್ಪಾದನೆಯಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಹಿತ ದೃಷ್ಟಿಯಿಂದ ಹಸಿರು ಪಟಾಕಿಗಳನ್ನು ಮಾತ್ರ ಉಪಯೋಗಿಸಿ ಮತ್ತು ಏಕ ಬಳಿಕೆ ಪ್ಲಾಸ್ಟಿಕ್ ಬದಲಾಗಿ ಪರ್ಯಾಯವಾದ ವಸ್ತುಗಳನ್ನು ಅಥವಾ ಪರಿಸರಸ್ನೇಹಿ ವಸ್ತುಗಳನ್ನು ಬಳಸುವ ಮತ್ತು ತ್ಯಾಜ್ಯದಿಂದ ಉಪಯುಕ್ತ ವಸ್ತುಗಳನ್ನು ಸಿದ್ಧಪಡಿಸಿ ದೀಪಾವಳಿ ಉಡುಗೊರೆಯನ್ನು ನೀಡಿ ಪರಿಸರಸ್ನೇಹಿ ದೀಪಾವಳಿ ಹಬ್ಬವನ್ನು ಆಚರಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಸ್ವಚ್ಛ ದೀಪಾವಳಿ ಸಹಿ ಅಭಿಯಾನ ವನ್ನು Mygov ಪೋರ್ಟಲ್ ನಲ್ಲಿ Upload  ಮಾಡುವ ಮೂಲಕ ನಾಗರಿಕರು ನಗರ ಸಭೆಯೊಂದಿಗೆ ಸಹಕರಿಸುವುದು ಮತ್ತು ಸದರಿ ಸಹಿ,ಸಿಗ್ನೇಚರ್ ಅಭಿಯಾನಕ್ಕೆ ಸೇರುವ ಮೂಲಕ ಅವರ ಬದ್ಧತೆಯನ್ನು ಪ್ರದರ್ಶಿಸಬೇಕು.ಸ್ವಚ್ಛ ದೀಪಾವಳಿ ವಿಡಿಯೋ ರೀಲ್ಸ್ 30 ರಿಂದ 60 ಸೆಕೆಂಡುಗಳ ಸಣ್ಣ ವಿಡಿಯೋಗಳನ್ನು ಸಂಯೋಜಿಸಿ,ರಚಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೂಲಕ ನಾಗರಿಕರು ತಮ್ಮ ಮನೆಗಳ ಹಂತದಲ್ಲಿ ಆಚರಿಸುವ ಸ್ವಚ್ಛ ದೀಪಾವಳಿ ಆಚರಣೆಗಳ ವಿಶಿಷ್ಟ ವಿಧಾನಗಳನ್ನು ಪ್ರದರ್ಶಿಸಿ ನಗರಸಭೆಗೆ ತಿಳಿಸಲು ಕೋರಿದೆ.

ಈ ಅಭಿಯಾನದಲ್ಲಿ ಎಲ್ಲಾ ನಗರದ ನಾಗರಿಕರು ಭಾಗವಹಿಸಿ ಪರಿಸರಸ್ನೇಹಿ ದೀಪಾವಳಿ ಹಬ್ಬವನ್ನು ಆಚರಿಸಿ ಯಶಸ್ವಿಗೊಳಿಸಲು ಸಾರ್ವಜನಿಕರಲ್ಲಿ ಕೋರಲಾಗಿದೆ ಎಂದು ಪುತ್ತೂರು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಕ್ಕಳಿಗೊಂದು ಪುಟ | ನಮ್ಮದೊಂದು ಬೆಳಕು….
July 3, 2025
10:43 AM
by: ಮಹೇಶ್ ಪುಚ್ಚಪ್ಪಾಡಿ
ವೃಷಭದಲ್ಲಿ ಶುಕ್ರ ಸಂಚಾರದಿಂದ ಮಹಾಲಕ್ಷ್ಮೀ ರಾಜಯೋಗ
July 3, 2025
7:00 AM
by: ದ ರೂರಲ್ ಮಿರರ್.ಕಾಂ
ಒಂದು ಸೇತುವೆಯ ಹೋರಾಟದ ಕತೆ | ಕೊನೆಗೂ ಕೈಗೂಡಿತು ಬೃಹತ್‌ ಸೇತುವೆ | ಅದು ಅಂಬಾರಗೂಡ್ಲು-ಕಳಸವಳ್ಳಿ ಸೇತುವೆ |
July 3, 2025
12:24 AM
by: The Rural Mirror ಸುದ್ದಿಜಾಲ
ಅರಿವು ಕೇಂದ್ರಗಳಿಗೆ ಅಲೆಕ್ಸಾ ಸಾಧನ ವಿತರಿಸುವ ‘ತರಂಗಿಣಿ’ ಕಾರ್ಯಕ್ರಮ
July 3, 2025
12:10 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group