ಹೌದು ಹರಿಯಲ್ ಪಕ್ಷಿಯು ನಿಜಕ್ಕೂ ನೆಲದ ಮೇಲೆ ಕಾಲಿಡದ ವಿಶಿಷ್ಟವಾದ ಹಕ್ಕಿಯಾಗಿದೆ. ಇದು ನೋಡಲು ಪಾರಿವಾಳದಂತೆಯೇ ಕಾಣುತ್ತದೆ, ಆದರೆ ಬೂದು ಪಟ್ಟೆಗಳೊಂದಿಗೆ ಹಸಿರು ಮತ್ತು ಹಳದಿಯಾಗಿದೆ. ಇದರ ವಿಶಿಷ್ಟ ಬಣ್ಣದಿಂದಾಗಿ ಇದನ್ನು ಹರಿಯಲ್ ಪಕ್ಷಿ ಎಂದು ಕರೆಯಲಾಗುತ್ತದೆ.
ಈ ಹಕ್ಕಿ ಭಾರತೀಯ ಉಪಖಂಡದಲ್ಲಿ ಕಂಡುಬರುತ್ತದೆ ಮತ್ತು ಯಾವಾಗಲೂ ಎತ್ತರದ ಮರಗಳ ಮೇಲೆ ತನ್ನ ಗೂಡುಗಳನ್ನು ಮಾಡುತ್ತದೆ. ಈ ಹಕ್ಕಿಯ ಕೊಕ್ಕು ತುಂಬಾ ಪ್ರಬಲವಾಗಿದ್ದು, ಹಣ್ಣು ಮತ್ತು ಎಲೆಗಳ ಮೇಲೆ ಸಂಗ್ರಹವಾಗುವ ಇಬ್ಬನಿಯನ್ನು ಕುಡಿಯುವ ಮೂಲಕ ಅದು ತನ್ನ ಬಾಯಾರಿಕೆಯನ್ನು ತಣಿಸುತ್ತದೆ. ಹರಿಯಾಲ್ ಹಕ್ಕಿಯು ಎತ್ತರದ ಮರಗಳ ಮೇಲೆ ತನ್ನ ಗೂಡನ್ನು ನಿರ್ಮಿಸುತ್ತದೆ. ಮಾತ್ರವಲ್ಲ ಇದು ತುಂಬ ಅಲಸ್ಯ ಮತ್ತು ನಾಚಿಕೆ ಸ್ವಭಾವದ ಪಕ್ಷಿಯಾಗಿರುವುದರಿಂದ ಗೂಡಿನಿಂದ ಅಷ್ಟಾಗಿ ಹೊರಬರುವುದಿಲ್ಲ ಎಂದು ವರದಿಗಳು ಹೇಳುತ್ತದೆ.
ಈ ಹಕ್ಕಿ 26 ವರ್ಷಗಳವರೆಗೆ ಬದುಕಬಲ್ಲದು. ಹರಿಯಲ್ ಬರ್ಡ್ 3 ಅಡಿ ಉದ್ದದ ಪಕ್ಷಿಯಾಗಿದ್ದು, ಇದು ಸಾಮಾನ್ಯವಾಗಿ ಮರಗಳ ಎತ್ತರದಲ್ಲಿ ಕುಳಿತು ಕಂಡುಬರುತ್ತದೆ. ಈ ಪಕ್ಷಿಯು ಮಹಾರಾಷ್ಟ್ರದ ರಾಜ್ಯ ಪಕ್ಷಿಯಾಗಿದ್ದರೂ, ಉತ್ತರ ಪ್ರದೇಶದಲ್ಲಿಯೂ ಕಂಡುಬರುತ್ತದೆ. ಅದಲ್ಲದೇ ಈ ಹಕ್ಕಿಯನ್ನು ಪಾಕಿಸ್ತಾನ, ನೇಪಾಳ ಮತ್ತು ಶ್ರೀಲಂಕಾದಲ್ಲಿಯೂ ಕಾಣಬಹುದು.