ಎರಡು ದಿನಗಳ ಹಿಂದೆ ಭಾರೀ ಮಳೆಯಿಂದಾಗಿ ಕಲ್ಮಕಾರು ಭಾಗದಿಂದ ಪ್ರವಾಹವೇ ಹರಿಯಿತು. ಇದರ ಕಾರಣದಿಂದ ಹರಿಹರ ಪಲ್ಲತ್ತಡ್ಕದಲ್ಲಿ ರಾಶಿ ಬಿದ್ದ ಮರದ ದಿಮ್ಮಿಗಳನ್ನು ತೆರವು ಮಾಡುವ ಕಾರ್ಯ ನಡೆಯುತ್ತಿತ್ತು. ಈ ವೇಳೆ ಕ್ರೇನ್ ಆಪರೇಟರ್ ಹೊಳೆಯ ಪಕ್ಕದಲ್ಲಿ ನಿಂತಿದ್ದ ವೇಳೆ ನೀರಿಗೆ ಬಿದ್ದರು. ನೀರಿನಲ್ಲಿ ಈಜಲು ಕಷ್ಟಪಡುವುದರ ಅರಿತ ಯುವಕನೋರ್ವ ನದಿಗೆ ಹಾರಿ ಅವರನ್ನು ರಕ್ಷಿಸಿದರು. ನೀರಿಗೆ ಬಿದ್ದ ಕೇನ್ ಆಪರೇಟರ್ ಶರೀಫ್. ರಕ್ಷಣೆ ಮಾಡಿದವರು ಹರಿಹರ ನಿವಾಸಿ ಸೋಮಶೇಖರ್ ಕಟ್ಟೆಮನೆ.
ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೋಮು ಸೌಹಾರ್ದತೆಯ ಪಾಠ | ಹರಿಹರದಲ್ಲಿ ಮುಸ್ಲಿಂ ಯವಕನನ್ನು ರಕ್ಷಿಸಿದ ಹಿಂದೂ ಯುವಕ |#dakshinakannada #ದಕ್ಷಿಣಕನ್ನಡ #ಸೌಹಾರ್ದತೆ pic.twitter.com/PiMy8PAnxo
Advertisement— theruralmirror (@ruralmirror) August 2, 2022
ಹರಿಹರ ಸೇತುವೆಯಲ್ಲಿ ಸಿಲುಕಿದ್ದ ಮರದ ದಿಮ್ಮಿಗಳನ್ನು ತೆಗೆಯಲು ಪಂಜ ಸಮೀಪದ ಪಡ್ಪಿನಂಗಡಿ ನಿವಾಸಿ ಶರೀಫ್ ಎಂಬವರ ಕ್ರೇನ್ ಹಾಗೂ ಸ್ಥಳೀಯ ನಿವಾಸಿಯೋರ್ವರ ಜೆಸಿಬಿ ವಾಹನಗಳನ್ನು ತರಿಸಲಾಗಿತ್ತು. ಕಾರ್ಯಾಚರಣೆಯ ವೇಳೆ ಆಪರೇಟರ್ ಶರೀಫ್ ಕ್ರೇನ್ ನಿಂದ ಇಳಿದು ಹೊಳೆ ಪಕ್ಕದಲ್ಲಿ ನಿಂತು ನೋಡುತ್ತಿದಾಗ ಮರದ ದಿಮ್ಮಿಯೊಂದು ತಾಗಿದ ಪರಿಣಾಮ ಹರಿಯುತ್ತಿರುವ ನೀರಿಗೆ ಶರೀಫ್ ಬಿದ್ದಿದ್ದರು. ಈ ವೇಳೆ ಹರಿಹರ ನಿವಾಸಿ ಸೋಮಶೇಖರ್ ಕಟ್ಟೆಮನೆ ಎಂಬವರು ಹೊಳೆಗೆ ಜಿಗಿದು ಶರೀಫ್ ರನ್ನು ರಕ್ಷಿಸಿದ್ದಾರೆ. ಬಳಿಕ ಜೆಸಿಬಿ ಹಾಗೂ ಹಗ್ಗದ ಸಹಾಯದಿಂದ ಊರಿನ ಇತರರು ಸೇರಿ ಶರೀಫ್ ರನ್ನು ಮೇಲಕ್ಕೆತ್ತಿದ್ದಾರೆ.
ಸೋಮಶೇಖರ್ ಕಟ್ಟೆಮನೆಯವರ ಸಾಹಸವನ್ನು ಸಾಮಾಜಿಕ ಕಾರ್ಯಕರ್ತ ಗುರುಪ್ರಸಾದ್ ಪಂಜ ಹಾಗೂ ಆಶಿತ್ ಕಲ್ಲಾಜೆಯವರು ತಮ್ಮ ಫೇಸ್‍ಬುಕ್ ನಲ್ಲಿ ಹಂಚಿಕೊಂಡಿದ್ದರು. ಈ ಸುದ್ದಿ ಭಾರೀ ವೈರಲ್ ಆಗಿದೆ. 1000 ಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಅಲ್ಲಲ್ಲಿ ಕೋಮು ಸಂಬಂಧಿತ ಅಶಾಂತಿಯ ಬೆನ್ನಲ್ಲೇ ಇಂತಹ ಘಟನೆ ನಡೆದಿರುವುದು ಗ್ರಾಮೀಣ ಭಾಗದಲ್ಲಿ ಇನ್ನೂ ಸೌಹಾರ್ದತೆಯ , ಶಾಂತಿಯ ವಾತಾವರಣ ಇದೆ ಎನ್ನುವ ಸಂದೇಶ ನೀಡಿದೆ. ಕರಾವಳಿಯ ಎಲ್ಲೂ ಕೊತ ಕೊತದ ಪರಿಸ್ಥಿತಿ ಇಲ್ಲ. ಇದರ ಜೊತೆಗೆ ಪ್ರಕೃತಿಯ ಎರಡೇ ಗಂಟೆಯ ಅಬ್ಬರಕ್ಕೆ ಇಡೀ ಊರೇ ನಿಜಕ್ಕೂ ಕೊತ ಕೊತವಾಗಿದೆ, ಧರ್ಮ, ಜಾತಿ, ಅಭಿವೃದ್ಧಿ ಯಾವುದನ್ನೂ ಬಿಡದೇ ಪ್ರವಾಹ ಕೊಚ್ಚಿದೆ. ಈ ಮೂಲಕವೂ ಪ್ರಕೃತಿ ಎಚ್ಚರಿಸಿದೆ.