ಶಾಸಕ ಹರೀಶ್‌ ಪೂಂಜಾ ಕಾರು ಓವರ್‌ಟೇಕ್‌ ಪ್ರಕರಣ | ಕೆಲವೇ ಗಂಟೆಗಳಲ್ಲಿ ಸತ್ಯ ಶೋಧಿಸಿದ ಎಸ್‌ ಪಿ | ಸಾರ್ವಜನಿಕರಿಂದ ಶ್ಲಾಘನೆ |

Advertisement
Advertisement

ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಅವರ ಮೇಲೆ ದುಷ್ಕರ್ಮಿಗಳು ದಾಳಿಗೆ ಯತ್ನಿಸಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಶಾಸಕ ಹರೀಶ್ ಪೂಂಜಾ ಕಾರು ಚಾಲಕ ನವೀನ್‌ ದೂರು ನೀಡಿದ್ದರು. ಗುರುವಾರ ರಾತ್ರಿ ಈ ಘಟನೆ ನಡೆದಿತ್ತು. ಆದರೆ ತನಿಖೆಯ ವೇಳೆ ವಾಹನ ಓವರ್‌ಟೇಕ್‌ ಸಂಬಂಧಿತ ಪ್ರಕರಣ ಇದಾಗಿದ್ದು, ಯಾವುದೇ ತಲವಾರು ವಾಹನದಲ್ಲಿ ಇರಲಿಲ್ಲ ಎನ್ನುವ ಅಂಶ ಬಹಿರಂಗವಾಗಿದೆ.

Advertisement

ಈ ಘಟನೆಯ ನಂತರ ದ ಕ ಜಿಲ್ಲೆಯಲ್ಲಿ ಸಂಚಲನ ಮೂಡಿತ್ತು. ಹಿಂದೂ ಸಂಘಟನೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಶಾಸಕರ ಹರೀಶ್‌ ಪೂಂಜಾ ಅವರು ಸಹಜವಾಗಿಯೇ ರಾಜ್ಯದಲ್ಲಿ ಗುರುತಿಸಿಕೊಂಡಿದ್ದರು. ಗುರುವಾರ ರಾತ್ರಿ ಅವರನ್ನು ಹಿಂಬಾಲಿಸಿದ ಕಾರು, ತಲವಾರು ಧಾಳಿಗೆ ಮುಂದಾದವರೂ ಕೆಎಲ್‌ ರಿಜಿಸ್ಟ್ರೇಶನ್‌ ಕಾರು ಎಂಬ ಸುದ್ದಿಯೂ ಆಗಿತ್ತು. ಹೀಗಾಗಿ ಸಹಜವಾಗಿಯೇ ದ ಕ ಜಿಲ್ಲೆಯಲ್ಲಿ ಸೂಕ್ಷ್ಮ ವಾತಾವರಣ ಉಂಟಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಬಿಸಿ ಬಿಸಿ ಚರ್ಚೆಯಾಗಿತ್ತು. ಈ ಪ್ರಕರಣವನ್ನು ತನಿಖೆ ನಡೆಸಿದ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಗಳು ಇದು ವಾಹನ ಓವರ್‌ಟೇಕ್‌ ನಡೆಸುವ ವೇಳೆ ನಡೆದ ಪ್ರಕರಣ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಆರೋಪಿ ವಿರುದ್ದ ಯಾವುದೇ ಕ್ರಿಮಿನಲ್‌ ಪ್ರಕರಣ ಇದುವರೆಗೂ ದಾಖಲಾಗಿಲ್ಲ, ತಲವಾರು ಇರಲಿಲ್ಲ. ವಾಹನವನ್ನು ವಶಪಡಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

Advertisement
Advertisement

ಕೆಲವೇ ಗಂಟೆಗಳಲ್ಲಿ ಸತ್ಯ ಶೋಧಿಸಿ ತಿಳಿಸುವ ಮೂಲಕ ದ ಕ ಜಿಲ್ಲೆಯಲ್ಲಿ ಶಾಂತಿಯ ವಾತಾವರಣ ಸೃಷ್ಟಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಹಾಗೂ ಪೊಲೀಸ್‌ ಇಲಾಖೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಆದರೆ ಶಾಸಕರಾಗಿದ್ದು, ದ ಕ ಜಿಲ್ಲೆಯ ಶಾಂತಿ ಸ್ಥಾಪನೆಗೆ ಹಾಗೂ ಕೋಮು ಸಂಘರ್ಷಕ್ಕೆ ಇತಿಶ್ರೀ ಹಾಡಬೇಕಾಗಿದ್ದ ಶಾಸಕರು ಈ ರೀತಿ ನಡೆಸಿದರೇ ಎಂಬುದು ಈಗ ಚರ್ಚೆಯಾಗುತ್ತಿರುವ ವಿಷಯವಾಗಿದೆ. ಒಂದು ವೇಳೆ ಶಾಸಕರ ಕಾರನ್ನು ಓವರ್‌ ಟೇಕ್‌ ಮಾಡುವ ಅಥವಾ ಪೈಪೋಟಿ ನೀಡಿದರೆ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಗಳು ಅತಿವೇಗದ ಚಾಲನೆಗೆ ದೂರು ದಾಖಲಿಸಲು ಪೊಲೀಸ್‌ ಇಲಾಖೆಗೆ ಸೂಚನೆ ನೀಡಬಹುದು. ಆದರೆ ಈ ರೀತಿ ಕೇಸು ದಾಖಲಿಸಿದರೇ ಎಂಬುದು ಈಗ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ.

Advertisement
Advertisement

ದ ಕ ಜಿಲ್ಲೆಯಲ್ಲಿ ಅಭಿವೃದ್ಧಿ ಪರವಾಗಿ ಕೆಲಸ ಮಾಡುತ್ತಿರುವ ಹಾಗೂ ಕಾಳಜಿ ಹೊಂದಿರುವ ಶಾಸಕರ ಮೇಲೆ ದುಷ್ಕರ್ಮಿಗಳು ತಲವಾರು ಧಾಳಿಗೆ ಯತ್ನಿಸಿದ್ದಾರೆ ಎಂದು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾದಾಗ ಸಹಜವಾಗಿಯೇ ಮಾಧ್ಯಮಗಳು ತಕ್ಷಣವೇ ವರದಿ ಮಾಡಿದ್ದವು. ಶಾಸಕರು ಪೊಲೀಸ್‌ ರಕ್ಷಣೆಯನ್ನೂ  ಪಡೆದಿದ್ದರು.

 

Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಶಾಸಕ ಹರೀಶ್‌ ಪೂಂಜಾ ಕಾರು ಓವರ್‌ಟೇಕ್‌ ಪ್ರಕರಣ | ಕೆಲವೇ ಗಂಟೆಗಳಲ್ಲಿ ಸತ್ಯ ಶೋಧಿಸಿದ ಎಸ್‌ ಪಿ | ಸಾರ್ವಜನಿಕರಿಂದ ಶ್ಲಾಘನೆ |"

Leave a comment

Your email address will not be published.


*