ಮಳೆಗಾಲದಲ್ಲಿ ಅದರಲ್ಲೂ ವಿಶೇಷವಾಗಿ ಆಟಿ ತಿಂಗಳು ಅಥವಾ ಆಷಾಡ ಮಾಸದಲ್ಲಿ ಮರಕೆಸು ಅಥವಾ ಕಾಡುಕೆಸುವನ್ನು ಆಹಾರವಾಗಿ ಸೇವಿಸಿದರೆ ಉತ್ತಮ ಎನ್ನುವುದು ಹಿಂದಿನಿಂದಲೂ ಬಂದಿರುವ ಮಾತುಗಳು. ಆದರೆ ಈಚೆಗೆ ಮರದಿಂದ ಈ ಕೆಸುವನ್ನು ತೆಗೆಯುವುದೇ ಸಾಹಸ. ಅಂದಕ್ಕೊಂದು ಉಪಾಯ, ಈಗ ಮರಕೆಸು ನೆಲಕ್ಕೆ ಬಂದಿದೆ, ಮನೆಯಂಗಳಲ್ಲಿ ಈ ಕೆಸುವನ್ನು ಬೆಳೆಯುವುದು ಸಾಧ್ಯವಾಗಿದೆ. ಈ ಪ್ರಯೋಗದಲ್ಲಿ ಯಶಸ್ಸು ಕಂಡವರು ಕೆಲವರು ಇದ್ದಾರೆ. ಅದರಲ್ಲಿ ಬ್ಯಾಂಕ್ ಉದ್ಯೋಗಿ ವಿಶ್ವಾಸ್ ಸುಬ್ರಹ್ಮಣ್ಯ ಕೂಡಾ ಒಬ್ಬರು.………ಮುಂದೆ ಓದಿ……..
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವಾಸವಾಗಿರುವ ಬ್ಯಾಂಕ್ ಉದ್ಯೋಗಿಯಾಗಿರುವ ವಿಶ್ವಾಸ್ ಸುಬ್ರಹ್ಮಣ್ಯ ಕುಕ್ಕುಪುಣಿ ಅವರು ಮರಕೆಸುವನ್ನು ತಮ್ಮ ಮನೆಯಂಗಳದಲ್ಲಿ ಬೆಳೆದಿದ್ದಾರೆ. ಮರ ಕೆಸು ಮಳೆಗಾಲದಲ್ಲಿ ಅದರಲ್ಲೂ ಆಷಾಢ ಮಾಸದಲ್ಲಿ ಅಂದರೆ ಆಟಿ ತಿಂಗಳಲ್ಲಿ ವಿಪರೀತ ಬೆಳೆಯುತ್ತದೆ. ಮರದ ಪೊಟರೆಗಳಲ್ಲಿ ಬೇಸಗೆಯ ಕಾಲದಲ್ಲಿ ಇದ್ದು, ಮಳೆ ಬೀಳುತ್ತಲೇ ಚಿಗುರೊಡೆಯುತ್ತದೆ. ಇದನ್ನು ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಮರದಿಂದ ಕೀಳಲಾಗುತ್ತದೆ. ಇದನ್ನು ಕೀಳುವುದೇ ಒಂದು ಸರ್ಕಸ್. ಮರ ಕೆಸು ಬೇಕೆಂದರೂ ಅದನ್ನು ಕೀಳುವ ಕೆಲಸ ಕಠಿಣವಾದ್ದು. ಹೀಗಾಗಿ ಇದು ಮನೆಯಂಗಳದಲ್ಲಿ ಏಕೆ ಬೆಳೆಯಬಾರದು ಎನ್ನುವುದು ಅನೇಕ ಸಮಯದ ಪ್ರಶ್ನೆಯಾಗಿತ್ತು.ಇಂತಹ ಪ್ರಯತ್ನ ಕೆಲವು ಮಾಡಿದ್ದಾರೆ, ಕೆಲವರು ಯಶಸ್ಸು ಕಾಣಲಿಲ್ಲ.
ಮರ ಕೆಸು ಮನೆಯಂಗಳದಲ್ಲಿ ಬೆಳೆಯುವುದು ಅಷ್ಟೊಂದು ಸುಲಭವಲ್ಲ, ಆದರೆ ಕೆಲವೊಂದು ಐಡಿಯಾ ಅಳವಡಿಸಿಕೊಂಡರೆ ಸುಲಭವೂ ಹೌದು. ಅದಕ್ಕೊಂದು ಉಪಾಯಗಳನ್ನು ಅಳವಡಿಸಿಕೊಳ್ಳಬೇಕು. ಈ ಕೆಲಸವನ್ನು ವಿಶ್ವಾಸ್ ಸುಬ್ರಹ್ಮಣ್ಯ ಅವರು ಮಾಡಿಕೊಂಡು 2018 ರಿಂದ ಮನೆಯಂಗಳದಲ್ಲಿ ಬೆಳೆಯುತ್ತಿದ್ದಾರೆ, ಬೆಳೆದು ಯಶಸ್ವಿಯಾಗಿದ್ದಾರೆ. ಸತತವಾಗಿ ಮರ ಕೆಸವು ಬೆಳೆಯುವ ಪ್ರಯತ್ನದಲ್ಲಿ ಸಂಪೂರ್ಣ ಯಶಸ್ಸು ಕಂಡಿರಲಿಲ್ಲ, 2018 ರ ನಂತರ ಈ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.
ಇದನ್ನು ಬೆಳೆಯಲು ಕೋಕೋ ಪೀಟ್ ಅಥವಾ ಮರದ ತುಂಡುಗಳನ್ನು ಬಳಕೆ ಮಾಡಿದ್ದಾರೆ. ಒಂದು ವರ್ಷಗಳ ಕಾಲ ಮಳೆ-ಬಿಸಿಲಿಗೆ ಒಡ್ಡಿಕೊಂಡಿದ್ದ ಮರದ ತುಂಡುಗಳು ಅಥವಾ ಮರದ ಹುಡಿಯನ್ನು ಬಳಕೆ ಮಾಡಬಹುದು ಅಥವಾ ತೆಂಗಿನ ನಾರನ್ನೂ ಬಳಕೆ ಮಾಡಿ ಮರ ಕೆಸುವಿನ ಗೆಡ್ಡೆಗಳ ಜೊತೆ ಹೂಕುಂಡದಲ್ಲಿ ಹಾಕಿ ಇರಿಸಬೇಕು. ಬೇಸಗೆ ಕಳೆದು ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕೆಸುವು ಚಿಗುರೊಡೆದು ಬೆಳೆಯಲು ಆರಂಭವಾಗುತ್ತದೆ. ಸಾಮಾನ್ಯ ಸೆಪ್ಟಂಬರ್ -ಅಕ್ಟೋಬರ್‌ವರೆಗೂ ಎಲೆಗಳು ಇದ್ದು ನಂತರ ಕೋಡು ಬಂದು ಎಲೆಗಳು ಸಾಯುತ್ತವೆ, ಮುಂದಿನ ಮಳೆಗಾಲಕ್ಕೆ ಸಜ್ಜಾಗುತ್ತದೆ. ಪುನಃ ಸೃಷ್ಟಿಯಾಗುವ ಗೆಡ್ಡೆಗಳನ್ನು ಇನ್ನೊಂದು ಕುಂಡದಲ್ಲಿ ಹಾಕಿ ಗಿಡಗಳನ್ನು ಬೇಕಾದಷ್ಟು ವೃದ್ಧಿಸಿಕೊಳ್ಳಬಹುದು ಎನ್ನುತ್ತಾರೆ ವಿಶ್ವಾಸ ಸುಬ್ರಹ್ಮಣ್ಯ.
ಹೀಗೆ ನಾಟಿ ಮಾಡಿದ ಕೆಸುವು ಜೂನ್ ಆರಂಭದಿಂದ ಅಂದರೆ ಮಳೆ ಆರಂಭವಾದ ಬಳಿಕ ಬೆಳೆಯಲು ಆರಂಭವಾಗುತ್ತದೆ, ಸೆಪ್ಟಂಬರ್‌ವರೆಗೆ ಸುಮಾರು 4-5 ಬಾರಿ ಆಹಾರಕ್ಕಾಗಿ ಬಳಕೆ ಮಾಡಬಹುದು. ಮಳೆ ಹೆಚ್ಚಾದಾಗ ಮಳೆಯಿಂದ ತಪ್ಪಿಸಿ ಛಾವಣಿ ಅಡಿಯಲ್ಲಿ ಇರಿಸಬೇಕು, ಆರಂಭದ ಮಳೆ ಈ ಕುಂಡದ ಮೇಲೆ ಬೀಳಬೇಕು, ಒಣಗಿದ ಸೆಗಣಿ ಗೊಬ್ಬರ ಸೇರಿದಂತೆ ಮರದ ಹುಡಿಯನ್ನೇ ಹೆಚ್ಚಾಗಿ ಬಳಕೆ ಮಾಡಬೇಕು ಇತ್ಯಾದಿ ಕೆಲವು ಸೂಕ್ಷ್ಮ ಸಂಗತಿಗಳು ಇಲ್ಲಿ ಗಮನಿಸಬೇಕಾದ ಅಂಶಗಳು ಎಂದು ಎಚ್ಚರಿಸುತ್ತಾರೆ ವಿಶ್ವಾಸ್. ಕೀಟ ಬಾಧೆಗಳು ತುಂಬಾ ಕಡಿಮೆಯಾಗಿದೆ, ಹೀಗಾಗಿ ಗಮನ ಇರಬೇಕಾದ್ದು ಮಳೆಯದ್ದು ಮಾತ್ರಾ.………ಮುಂದೆ ಓದಿ……..
ಈ ಕೆಸುವು ಆಯುರ್ವೇದದ ಪ್ರಕಾರ ಆರೋಗ್ಯ ಬಹಳ ಉತ್ತಮ ಎಂದು ಹೇಳಲಾಗುತ್ತಿದೆ. ಇದು ಮಳೆ ಬಂದ ನಂತರ ಹುಟ್ಟಿಕೊಂಡು ಬೆಳೆದು ಮಳೆ ಮುಗಿಯುವಾಗ ಮರೆಯಾಗುತ್ತದೆ. ಈ ಅವಧಿಯಲ್ಲಿ ಎಲೆಗಳು ದೊಡ್ಡದಾಗಿ ಬೆಳೆಯುವ ಆಷಾಢ ಮಾಸದಲ್ಲಿ ಇದರ ಖಾದ್ಯ ಮಾಡಿ ಸೇವಿಸಿದರೆ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ.
ಮರ ಕೆಸು, ಕಾಡುಕೆಸು ಇತ್ಯಾದಿ ಹೆಸರಿನಿಂದ ಇದನ್ನು ಕರೆಯಲಾಗುತ್ತದೆ. ಇದು ಕಾಡಿನಲ್ಲಿ ಮರಗಳನ್ನು ಆಶ್ರಯಿಸಿ ಬೆಳೆಯುವ ಕಾರಣ ಇದಕ್ಕೆ ಈ ಹೆಸರು. ಮರದ ಪೊಟರೆ, ಸಂದುಗಳಲ್ಲಿ ಅಂಟಿಕೊಂಡು ಇದು ಬೆಳೆಯುತ್ತದೆ. ಅಲ್ಲೇ ಬೆಳೆದು, ಅಲ್ಲೇ ಬೀಜ ಪಸರಿಸಿ ವಂಶಾಭಿವೃದ್ಧಿಯಾಗುತ್ತದೆ. ಇದನ್ನೇ ಅಂದರೆ ಇದೇ ವಾತಾವರಣವನ್ನು ಮನೆಯಂಗಳದಲ್ಲಿ ಸೃಷ್ಟಿಸುವ ಮೂಲಕ ಮನೆಯಂಗಳದಲ್ಲಿ ಕೂಡಾ ಈ ಕೆಸುವು ಬೆಳೆಯುವ ಪ್ರಯೋಗ ಈಗ ಯಶಸ್ಸಾಗಿದೆ.
The mara kesu plant thrives during the rainy season, particularly in the month of Ashadha, also known as Aati. It is typically kept in wooden pots during the summer and starts to sprout when it rains. In rural areas, it is usually harvested from trees, which can be a challenging task. As a result, many people wonder why it is not commonly grown at home.
Growing mara kesu indoors can be challenging, but with the right strategies, it can be done successfully. Vishwas Subrahmanya has been growing mara kesu at home since 2018, achieving success in this endeavor. Although previous attempts to grow tree dung were not entirely successful, he has now been successful in growing it since 2018.
22.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
“ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಜನನಿಯಿಂದ ಪಾಠ ಕಲಿತ…
ಕೃಷಿ ಇಲಾಖೆಯಿಂದ ರಾಜ್ಯ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ…
21.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ ಸೇರಿದಂತೆ…
ಬೆಂಗಳೂರು ತಂತ್ರಜ್ಞಾನ ಮತ್ತು ಕೈಗಾರಿಕಾ ಪ್ರಗತಿಯ ಸಂಕೇತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. …
ನಬಾರ್ಡ್ ನಿಂದ ರಾಜ್ಯಕ್ಕೆ ನೀಡಲಾಗುವ ಸಾಲದ ಮೊತ್ತವನ್ನು 5600 ಕೋಟಿ ರೂಪಾಯಿಗಳಿಂದ, ಈ…