ಹಾಸನಾಂಬೆ ದೇವಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು ಉತ್ಸವದ ಇತಿಹಾಸದಲ್ಲೇ ಹೊಸ ದಾಖಲೆಯಾಗಿದ್ದು ಒಟ್ಟು 12 ಕೋಟಿ 63 ಲಕ್ಷದ 83 ಸಾವಿರದ 808 ರೂ ಹಣ, ಹಾಗೂ 51 ಗ್ರಾಂ ಚಿನ್ನ, 913 ಗ್ರಾಂ ಬೆಳ್ಳಿ ಸಂಗ್ರಹ, 500 ಗ್ರಾಂ ತಾಮ್ರ ಸಂಗ್ರಹವಾಗಿದೆ ಎಂದು ಉಪ ವಿಭಾಗಾಧಿಕಾರಿ ಹಾಗೂ ದೇವಾಲಯದ ಆಡಳಿತಾಧಿಕಾರಿ ಮಾರುತಿ ಮಾಹಿತಿ ನೀಡಿದ್ದಾರೆ.
ಹುಂಡಿ ಎಣಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶೇಷ ದರ್ಶನದ ಸಾವಿರ ರೂ, ಮುನ್ನೂರು ರೂ ಟಿಕೆಟ್ ಮತ್ತು ಲಾಡು ಮಾರಾಟದಿಂದ 9 ಕೋಟಿ 67 ಲಕ್ಷದ 27 ಸಾವಿರದ 180 ರೂ ಸಂಗ್ರಹ ವಾಗಿದ್ದು ಹುಂಡಿಯಲ್ಲಿ 2 ಕೋಟಿ 55 ಲಕ್ಷದ 97 ಸಾವಿರದ 567 ರೂಪಾಯಿ ಸಂಗ್ರವಾಗಿದೆ ಎಂದು ಮಾಹಿತಿ ನೀಡಿದರು. ಹಾಸನಾಂಬ ಉತ್ಸವದ ಜಾಹಿರಾತಿನಿಂದ 5,50,000 ರೂ. ಸೀರೆ ಮಾರಾಟದಿಂದ 2,00,305, ಹಾಗೂ ದೇಣಿಗೆ ರೂಪದಲ್ಲಿ 40,908 ಮತ್ತು ತುಲಾಭಾರದಿಂದ 21,000 ರೂ. ಇ ಹುಂಡಿಯಿಂದ 3,98,859 ರೂಪಾಯಿಗಳ ಆದಾಯ ಬಂದಿದೆ ಎಂದರು. ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಈ ಬಾರಿ ಆದಾಯ ಮೂಲಕ ದಾಖಲೆ ನಿರ್ಮಾಣವಾಗಿದ್ದು. ಕೇವಲ 9 ದಿನಗಳ ಉತ್ಸವದಲ್ಲಿ 20 ಲಕ್ಷದ 40 ಸಾವಿರ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.