ಟಿಬೆಟ್ ನ ನಿಂಗ್ವಿ ಪ್ರದೇಶದಲ್ಲಿ ಸುಮಾರು 3,500 ಮೀಟರ್ ಗಳಿಗಿಂತ ಹೆಚ್ಚಿನ ಎತ್ತರದಲ್ಲಿ ಬೆಳೆಯುವುದರಿಂದ ಈ ಹಣ್ಣನ್ನು ಕಪ್ಪು ವಜ್ರದ ಸೇಬು ಎಂದು ಕರೆಯುತ್ತಾರೆ. ಈ ಪ್ರದೇಶದಲ್ಲಿ ತಾಪಮಾನದಲ್ಲಿ ತೀವ್ರ ಏರುಪೇರು, ಕಡಿಮೆ ಆಮ್ಲಜನಕ ಮತ್ತು ಬಲವಾದ ಅಲ್ಟ್ರಾ ವೈಲೆಟ್ ಕೀರಣಗಳು ಇರುತ್ತದೆ. ಇದೇ ಕಾರಣಕ್ಕೆ ಈ ಸೇಬಿನ ಸಿಪ್ಪೆ ಗಾಢ ನೇರಳೆ ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೊರಗೆ ಕಪ್ಪಾಗಿದ್ದರೂ ಒಳಗೆ ಇದರ ಮಾಂಸವು ಬಿಳಿ, ರಸಭರಿತ ಮತ್ತು ಸಿಹಿಯಾಗಿರುತ್ತದೆ.
ಆರೋಗ್ಯದ ಗುಟ್ಟು:
• ಇದರ ಗಾಢ ಬಣ್ಣಕ್ಕೆ ಕಾರಣವಾಗಿರುವ ಆಂಥೋಸಯಾನಿನ್ ಗಳು ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳಾಗಿವೆ. ಇವು ದೇಹವನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಿ, ದೀರ್ಘಕಾಲೀನ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ.
• ಹೃದಯದ ಆರೋಗ್ಯವನ್ನು ಕಾಪಾಡಲು ಮತ್ತು ಕೋಶಗಳ ಕಾರ್ಯಕ್ಷಮತೆ ಸುಧಾರಿಸಲು ಸಹ ಇವು ಸಹಾಯ ಮಾಡುತ್ತವೆ.
• ತೂಕ ನಿಯಂತ್ರಣಕ್ಕೂ ಸಹಕಾರಿ
• ಆರೋಗ್ಯಕರ ಕರುಳಿನ ಸೂಕ್ಷ್ಮಜೀವಿಗಳನ್ನು ಕಾಪಾಡಿಕೊಳ್ಳಲು ಪ್ರಮುಖ ಪಾತ್ರ ವಹಿಸುತ್ತದೆ.
• ಈ ಹಣ್ಣಿನಲ್ಲ ವಿಟಮಿನ್ ಸಿ ಮತ್ತು ಸಸ್ಯ ಆಧಾರಿತ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
• ಸೋಂಕುಗಳ ವಿರುದ್ಧ ದೇಹದ ಪ್ರತಿರೋಧ ಶಕ್ತಿ ಬಲಪಡಿಸುವುದರ ಜೊತೆಗೆ ಚರ್ಮದ ಆರೋಗ್ಯ ಸಹಾಕಾರಿ.
• ಪೊಟ್ಯಾಸಿಯಮ್ ಮತ್ತು ಫ್ಲೇವನಾಯ್ಡ್ ಗಳಿಂದ ಸಮೃದ್ಧವಾಗಿರುವ ಕಪ್ಪು ವಜ್ರದ ಸೇಬುಗಳು ಹೃದಯದ ಆರೋಗ್ಯಕ್ಕೂ ಲಾಭಕಾರಿ.

