ನಿರ್ವಹಣೆ ಇಲ್ಲದೆ ತುಕ್ಕು ಹಿಡಿಯುತ್ತಿರುವ ಹಾವೇರಿ ಜಾನುವಾರು ಮಾರುಕಟ್ಟೆ ಮಳಿಗೆಗಳು | ವ್ಯಾಪಾರಿಗಳಿಗೆ ನೀಡದೆ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳು

July 10, 2024
11:34 AM

ದೇವರು ಕೊಟ್ಟರು ಪೂಜಾರಿ ಕೊಡಲ್ಲ ಅನ್ನುವುದುಕ್ಕೆ ಇದೇ ಸ್ಪಷ್ಟ ಉದಾಹರಣೆ. ಸರ್ಕಾರ(Govt) ಕೆಲವೊಂದು ಸೌಲಭ್ಯಗಳನ್ನು ರೈತರಿಗಾಗಿ(Farmer) ಮಾಡಿದ್ರೂ, ಈ ಅಧಿಕಾರಿಗಳ(Officers) ದೆಸೆಯಿಂದ ಅದು ಜನರಿಗೆ ಪ್ರಯೋಜನಕ್ಕೆ ಬರುವುದೇ ಇಲ್ಲ. ಹಾವೇರಿ(Haveri) ಲಾಲ್​ ಬಹದ್ದೂರ್ ಶಾಸ್ತ್ರಿ  ಜಾನುವಾರು ಮಾರುಕಟ್ಟೆಯಲ್ಲಿ(Lal Bahudhur Shatri cattle market) ರೈತರು ಮತ್ತು ತರಕಾರಿ ವ್ಯಾಪಾರಿಗಳಿಗೆ(Vegetable venders) ಅನುಕೂಲವಾಗಲೆಂದು ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ ಮಳಿಗೆಗಳು(Stall) ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಳಾಗುತ್ತಿವೆ. ಇಲ್ಲಿ ಸುಮಾರು 38 ಮಳಿಗೆಗಳನ್ನು ನಿರ್ಮಿಸಲಾಗಿದೆ. ಜಾನುವಾರು ಮಾರುಕಟ್ಟೆ ಆವರಣದಲ್ಲಿರುವ ಈ ಮಳಿಗೆಗಳು ವರ್ತಕರಿಗೆ(trader) ಸಿಗದೆ ತುಕ್ಕು ಹಿಡಿಯುತ್ತಿವೆ.

Advertisement

ಒಂದು ವರ್ಷದ ಹಿಂದೆ ತರಕಾರಿ ವರ್ತಕರಿಗೆ ಎಪಿಎಂಸಿ ಅಧಿಕಾರಿಗಳು ಈ ಮಳಿಗೆಗಳನ್ನು ಖರೀದಿಸುವಂತೆ ತಿಳಿಸಿದ್ದರು. ಆದರೆ ಅಧಿಕ ದರದ ಕಾರಣದಿಂದಾಗಿ ವರ್ತಕರು ಖರೀದಿ ಬಿಟ್ಟು ಬಾಡಿಗೆಗೆ ನೀಡುವಂತೆ ಮನವಿ ಮಾಡಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಅಧಿಕಾರಿಗಳು, ಅತ್ತ ದರ ಕಡಿಮೆ ಮಾಡದೆ, ಇತ್ತ ಬಾಡಿಗೆಯನ್ನೂ ನಿಗದಿ ಮಾಡದೆ ವರ್ಷಗಟ್ಟಲೆ ಖಾಲಿ ಬಿಟ್ಟಿದ್ದಾರೆ. ಇದರ ಪರಿಣಾಮ 38 ಮಳಿಗೆಗಳು ತುಕ್ಕು ಹಿಡಿಯುತ್ತಿವೆ. ಕೆಲವು ಮಳಿಗೆಗಳಲ್ಲಿ ಕುರಿಗಳನ್ನು ಕಟ್ಟಲಾಗುತ್ತಿದೆ. ಇನ್ನು ಕೆಲವು ಮಳಿಗೆಗಳಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ಕಿಟಕಿ ಬಾಗಿಲುಗಳು ಮಾಯವಾಗುತ್ತಿವೆ. ರಾತ್ರಿಯಾಗುತ್ತಿದ್ದಂತೆ ಅನೈತಿಕ ಚಟುವಟಿಕೆಗಳು ನಡೆಯುತ್ತವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹಾವೇರಿ ಲಾಲ್​ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿದ್ದ ತರಕಾರಿ ದಲ್ಲಾಳಿಗಳಿಗೆ ಎಪಿಎಂಸಿ ಅಧಿಕಾರಿಗಳು ಸುಸಜ್ಜಿತ ಮಳಿಗೆ ನೀಡುವ ಭರವಸೆ ನೀಡಿ ಜಾನುವಾರು ಮಾರುಕಟ್ಟೆಗೆ ಕರೆದುಕೊಂಡು ಬಂದಿದ್ದರು. ಆದರೆ ಸುಸಜ್ಜಿತ ಮಳಿಗೆ ಇಲ್ಲದೆ ದಲ್ಲಾಳಿಗಳು ಕಾಳುಕಡಿ ಮಾರುಕಟ್ಟೆ ಅವರಣದಲ್ಲಿ ಸಗಟು ತರಕಾರಿ ಮಾರಾಟ ಮಾಡುತ್ತಿದ್ದಾರೆ. ಇದೀಗ ಮತ್ತೆ ಅಧಿಕಾರಿಗಳು ವರ್ತಕರನ್ನು ಸಂಪರ್ಕ ಮಾಡುವುದಾಗಿ ಹೇಳಿದ್ದಾರೆ.

ಅಲ್ಲದೆ ಕಡಿಮೆ ಬಾಡಿಗೆ ದರ ನಿಗದಿ ಮಾಡಿದರೆ ದಲ್ಲಾಳಿಗಳೂ ಸಹ ಮಳಿಗೆಗಳನ್ನು ಬಾಡಿಗೆಗೆ ಪಡೆಯುವ ಉತ್ಸಾಹದಲ್ಲಿದ್ದಾರೆ. ಆದಷ್ಟು ಬೇಗ ಅಧಿಕಾರಿಗಳು ತರಕಾರಿ ವರ್ತಕರಿಗೆ ಮಳಿಗೆಗಳನ್ನು ಹಸ್ತಾಂತರ ಮಾಡಬೇಕು. ಇದರಿಂದ ಕೊನೆಯಪಕ್ಷ ಮಳಿಗೆಗಳಿಗೆ ಕಳ್ಳ-ಕಾಕರಿಂದ ರಕ್ಷಣೆ ಸಿಕ್ಕಂತಾಗುತ್ತದೆ. 38 ಮಳಿಗೆಗಳಿಂದ ಪ್ರತಿ ತಿಂಗಳು ಎಪಿಎಂಸಿಗೆ ಲಕ್ಷಾಂತರ ರೂಪಾಯಿ ತೆರಿಗೆ ಬರುತ್ತದೆ. ತರಕಾರಿ ದಲ್ಲಾಳಿಗಳ ಜೊತೆಗೆ ಮಾರುಕಟ್ಟೆಗೆ ಬರುವ ರೈತರಿಗೂ ಅನುಕೂಲವಾಗುತ್ತದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ವಿಪರ್ಯಾಸವೆಂದರೆ, ಕೃಷಿ ಮಾರುಕಟ್ಟೆ ಸಚಿವರೂ ಆಗಿರುವ (APMC) ಶಿವಾನಂದ ಪಾಟೀಲ್ ಹಾವೇರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ. ಹೀಗಿದ್ದೂ ಜಿಲ್ಲೆಯಲ್ಲಿ ಈ ರೀತಿಯಾದರೆ ಹೇಗೆ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು 38 ಮಳಿಗೆಗಳನ್ನು ಆದಷ್ಟು ಬೇಗ ಹಸ್ತಾಂತರಿಸಿ ಮಳಿಗೆಗಳು ಹಾಳಾಗದಂತೆ ಕಾಪಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿರುವ ಹಾವೇರಿ ಎಪಿಎಂಸಿ ಕಾರ್ಯದರ್ಶಿ ಜಿ.ಬಿ.ಕಬ್ಬೆನಹಳ್ಳಿ, “ಇಲ್ಲಿ 38 ಮಳಿಗೆಗಳಿದ್ದು, ಇವುಗಳಿಗೆ ಜನವರಿ 2024ರಲ್ಲಿ ಗುತ್ತಿಗೆ ಕರೆಯಲಾಗಿತ್ತು. ಮಳಿಗೆ ಮತ್ತು ಮುಂದಿನ ಸ್ಥಳ ನಿಗದಿ ಮಾಡಿದ್ದರಿಂದ ಪ್ರತಿ ಮಳಿಗೆಗೆ ತಿಂಗಳಿಗೆ 3,700 ರೂಪಾಯಿ ಬಾಡಿಗೆ ನಿಗದಿ ಮಾಡಲಾಗಿತ್ತು. ಅಧಿಕ ದರ ಎಂದು ವರ್ತಕರು ಮಳಿಗೆ ತೆಗೆದುಕೊಳ್ಳಲು ಮುಂದಾಗಲಿಲ್ಲ. ಎಪಿಎಂಸಿ ಕೊನೆಗೆ ಮಳಿಗೆ ಇರುವ ಜಾಗವನ್ನು ಮಾತ್ರ ಪರಿಗಣಿಸಿ ಇದೀಗ 1,750 ರೂಪಾಯಿ ಬಾಡಿಗೆ ನಿಗದಿಸಿ ಮರು ಟೆಂಡರ್ ಕರೆಯಲಾಗಿದೆ. ಇದೇ 15ರಂದು ಟೆಂಡರ್ ಸಲ್ಲಿಸಲು ಕೊನೆಯ ದಿನವಾಗಿದೆ. ಈ ಕುರಿತಂತೆ 42 ವರ್ತಕರು ಅರ್ಜಿ ತೆಗೆದುಕೊಂಡಿದ್ದಾರೆ. ಇದೇ 18ರಂದು ಟೆಂಡರ್ ಓಪನ್ ಮಾಡಿ ವರ್ತಕರಿಗೆ ಮಳಿಗೆಗಳನ್ನು ಶೀಘ್ರದಲ್ಲಿ ಹಸ್ತಾಂತರಿಸಲಾಗುವುದು” ಎಂದು ತಿಳಿಸಿದ್ದಾರೆ.

Advertisement
  • ಅಂತರ್ಜಾಲ ಮಾಹಿತಿ

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹೆದ್ದಾರಿಗಳಲ್ಲಿ ಹಸಿರು ಅಭಿಯಾನ | 4.78 ಕೋಟಿಗೂ ಹೆಚ್ಚು ಗಿಡಗಳ ನಾಟಿ
July 9, 2025
10:27 PM
by: The Rural Mirror ಸುದ್ದಿಜಾಲ
ಪ್ರತಿಯೊಂದು  ಗ್ರಾಮ ಪಂಚಾಯಿತಿಯಲ್ಲಿ  ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಾಣ
July 9, 2025
9:19 PM
by: The Rural Mirror ಸುದ್ದಿಜಾಲ
ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ನಿಷೇಧ
July 9, 2025
9:16 PM
by: The Rural Mirror ಸುದ್ದಿಜಾಲ
ಹೃದಯಾಘಾತದ ಬಗ್ಗೆ ಅನಗತ್ಯ ಆತಂಕ ಪಡುವ ಅಗತ್ಯ ಇಲ್ಲ
July 9, 2025
9:07 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group