ಭಾರತೀಯ ಸಂಸ್ಕೃತಿ ಉಳಿಯಲು ಪ್ರತೀ ಭಾಷೆ, ಸಂಸ್ಕೃತಿಯ ಉಳಿವು ಅಗತ್ಯ. ಭಾಷೆ ಉಳಿದರೆ ಸಂಸ್ಕೃತಿ ಉಳಿಯಲು ಸಾಧ್ಯ. ಸಂಸ್ಕೃತಿ ಉಳಿದರೆ ದೇಶೀಯತೆಯ ಸೊಗಡು ಮುಂದುವರಿಯಲು ಸಾಧ್ಯ ಎನ್ನುವ ಕಲ್ಪನೆಯಲ್ಲಿ ಯುವಕರ ತಂಡವೊಂದು ಹವ್ಯಕ ಭಾಷೆ, ಸಂಸ್ಕೃತಿಯ ಬಗ್ಗೆ ಹೊಸದೊಂದು ಹೆಜ್ಜೆ ಇರಿಸಿದೆ.
ಯೂಟೂಬ್ ಚಾನೆಲ್ ಮೂಲಕ ಪ್ರತಿ ದಿನವೂ ಭಾಷೆ, ಸಂಸ್ಕೃತಿಯ ವಿವಿಧ ಪರಿಚಯ ಮಾಡುತ್ತಾ ಈ ತಂಡ ಮುಂದೆ ಸಾಗುತ್ತದೆ. ಈ ಬಾರಿ ಹವ್ಯಕ ಚಿಂತನದ ಮೂಲಕ ನವರಾತ್ರಿ ವೈಭವದ ಬಗ್ಗೆ ಪರಿಚಯ ಮಾಡಿದೆ. ನವರಾತ್ರಿಯಲ್ಲಿ ಒಂಭತ್ತು ದಿನಗಳ ವಿಶೇಷತೆಯ ಬಗ್ಗೆ ಇಲ್ಲಿ ಹವ್ಯಕ ಭಾಷೆಯಲ್ಲಿ ವಿವರಿಸಲಾಗಿದೆ. ಭಾಷೆ ಒಂದು ಸಮುದಾಯ, ಜಾತಿಯ ಸ್ವಂತದ ಸ್ವತ್ತಲ್ಲ ಅದು ಸಮಾಜದ ಸೊತ್ತು ಎಂಬ ಹಿನ್ನೆಲೆಯಲ್ಲಿ ಈ ಯುವಕರ ತಂಡ ಕೆಲಸ ಮಾಡುತ್ತಿದೆ. ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಚಣಿಲದ ಡಾ.ಆದಿತ್ಯ ಭಟ್ ಚಣಿಲ ಇವರ ನೇತೃತ್ವದ ಯುವಕರ ತಂಡ ಈ ಕಾರ್ಯ ಮಾಡುತ್ತಿದೆ.
ಯೂಟೂಬ್ ಚಾನೆಲ್ ಲಿಂಕ್ ಇಲ್ಲಿದೆ….
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel