ಸರ್ಕಾರಿ ಶಾಲೆಯ ಹಾಲಿನ ಪುಡಿ ಮನೆಗೆ ಸಾಗಿಸಿದ ಮುಖ್ಯ ಶಿಕ್ಷಕ | ಮೈಸೂರಿನಲ್ಲಿ ಸಿಕ್ಕಿಬಿದ್ದ ಶಿಕ್ಷಕ |

August 20, 2024
3:26 PM
ಶಾಲೆಗೆ ಬರುವ ಮಕ್ಕಳು(Children) ಆರೋಗ್ಯಯುತವಾಗಿರಲಿ. ಮಕ್ಕಳಿಗೆ ಕುಪೋಷಣೆ ಕಾಡದಿರಲಿ ಎಂದು ಸರ್ಕಾರ ವಿವಿಧ ಆರೋಗ್ಯ ಯೋಜನೆಗಳನ್ನು(Health Scheme) ಜಾರಿಗೆ ತಂದಿದೆ. ಆದರೆ ಅದು ಮಕ್ಕಳನ್ನು ತಲುಪುವ ಬದಲು ಇನ್ಯಾರದ್ದೋ ಹೊಟ್ಟೆಗೆ ಹೋಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಆ ಶಾಲೆಯ ಶಿಕ್ಷಕರು. ಇದೀಗ ಮಕ್ಕಳ ಅಪೌಷ್ಠಿಕತೆ ಹೊಗಲಾಡಿಸಲು ಸರ್ಕಾರಿ ಶಾಲೆಯ ಮಕ್ಕಳಿಗೆ ನೀಡುತ್ತಿದ್ದ ಹಾಲಿನ ಪುಡಿ ಪ್ಯಾಕೆಟ್‌ಗಳನ್ನು ಮನೆಗೆ ಕೊಂಡೊಯ್ಯುತ್ತಿದ್ದ ಮುಖ್ಯ ಶಿಕ್ಷಕ ರೆಡ್ ಹ್ಯಾಂಡ್ ಆಗಿ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಜಿಲ್ಲೆಯ ಹೆಚ್.ಡಿ. ಕೋಟೆ (Heggadadevankote) ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಸರ್ಕಾರಿ ಪ್ರಾಥಮಿಕ ಬಾಲಕಿಯರ ಶಾಲೆಯ ಗಣೇಶ್ ಸಿಕ್ಕಿಬಿದ್ದ ಮುಖ್ಯ ಶಿಕ್ಷಕ(HeadTeacher).

Advertisement

ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಉಚಿತವಾಗಿ ನೀಡುವ ಒಟ್ಟು 10 ಹಾಲಿನ ಪುಡಿಗಳು ಶಿಕ್ಷಕ ದ್ವಿಚಕ್ರ ವಾಹನದಲ್ಲಿ ಕೊಂಡೊಯ್ಯುತ್ತಿರುವಾಗ ಸಿಕ್ಕಿಬಿದ್ದಿದ್ದಾನೆ. ಹಾಲಿನ ಪ್ಯಾಕೆಟ್‌ಗಳ ಅವಧಿ ಮೀರಿದ್ದರಿಂದ ಮನೆಗೆ ಕೊಂಡೊಯ್ಯುತ್ತಿದ್ದೆ ಎಂದು ಶಿಕ್ಷಕ ಸ್ಪಷ್ಟೀಕರಣ ಕೊಡಲು ಮುಂದಾಗಿದ್ದರು. ಆದರೆ ಹಾಲಿನ ಪ್ಯಾಕೆಟ್‌ಗಳ ಪರಿಶೀಲನೆ ಮಾಡಿದಾಗ ಬರುವ ಡಿಸೆಂಬರ್ ವರೆಗೂ ಹಾಲಿನ ಪುಡಿ ಬಳಕೆ ಮಾಡಲು ಅವಧಿ ಇರುವುದು ಖಾತರಿಯಾಗಿದೆ. ಹಾಲಿನ ಪುಡಿಗಳ ಸಮೇತ ದ್ವಿಚಕ್ರ ವಾಹನವನ್ನು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

– ಅಂತರ್ಜಾಲ ಮಾಹಿತಿ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೆಲವು ವಿಶೇಷ ಯೋಗಗಳು ಮತ್ತು ಗ್ರಹಗಳ ಸಂಯೋಜನೆ
April 17, 2025
5:27 AM
by: ದ ರೂರಲ್ ಮಿರರ್.ಕಾಂ
ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ
April 16, 2025
9:41 PM
by: ಡಾ.ಚಂದ್ರಶೇಖರ ದಾಮ್ಲೆ
ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ
April 16, 2025
8:40 PM
by: ದ ರೂರಲ್ ಮಿರರ್.ಕಾಂ
ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!
April 16, 2025
11:18 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

You cannot copy content of this page - Copyright -The Rural Mirror

Join Our Group