ಎಲೆ ಅಡಿಕೆ ಸೇವನೆಯಿಂದ ಆರೋಗ್ಯಕ್ಕೆ ಲಾಭ | ಮಲೆನಾಡಿನ ಮನೆಯ ಸಂಪ್ರದಾಯ

March 14, 2023
7:28 PM

ಹಳ್ಳಿಯ ಜನರು ಎಲೆ ಅಡಿಕೆ ಸವಿಯುವುದು ಸಾಮಾನ್ಯ. ಅದರಲ್ಲಿ ಮುಖ್ಯವಾಗಿ ಭಾರತದಲ್ಲಿ ಶುಭ ಸಮಾರಂಭಗಳಲ್ಲಿ ಊಟದ ನಂತರ ಎಲೆ ಅಡಿಕೆ ನೀಡುತ್ತಾರೆ. ಅದಾಗ್ಯೂ ಈ ಎಲೆ ಅಡಿಕೆ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ದೌರ್ಬಲ್ಯ, ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆ ನಿವಾರಣೆಗೆ ಎಲೆ ಅಡಿಕೆ ಸೇವನೆ ತುಂಬಾ ಪ್ರಯೋಜಕಾರಿ.

Advertisement
Advertisement
Advertisement
Advertisement

ಅಡಿಕೆಯಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು ಮತ್ತು ಗುಣಪಡಿಸಬಹುದು ಎಂದು ಸಾಬೀತಾಗಿದೆ.ಗಾಯ ಗುಣ ಮಾಡಲು ಹಲ್ಲು ಗಟ್ಟಿ ಮಾಡಲು ಜೀರ್ಣಶಕ್ತಿ ಹೆಚ್ಚಿಸಲು ಅದೇ ಏಕೆ ಕ್ಯಾನ್ಸರ್ ರೋಗ ನಿರೋಧಕಕ್ಕೆ ಮತ್ತು ಕ್ಯಾನ್ಸರ್ ಗುಣ ಮಾಡಲು ಸಹ ಹೊರಗೆ ಹಚ್ಚಲು ಮತ್ತೆ ಹೊಟ್ಟೆಗೆ ತೆಗೆದುಕೊಳ್ಳಲು, ಉಪಯೋಗಿಸುವುದಕ್ಕೆ ಬರುತ್ತದೆ. ಎಲೆ ಕ್ಯಾಲ್ಸಿಯಂ ದೇಹಕ್ಕೆ ಬೇಕಾಗುವಷ್ಟು ಒದಗಿಸುತ್ತದೆ ಜೊತೆಯಲ್ಲಿ ಕಫ ನೀರಾಗುತ್ತದೆ. ವೀಳ್ಯದೆಲೆ ಜೀರ್ಣಕಾರಿ. ನಮ್ಮಲ್ಲಿ ದೃಷ್ಟಿ ತೆಗೆಯಲು ಕಫನಿರಾಗಿಸಲು ಅರಿಶಿಣ ಕುಂಕುಮದ ಜೊತೆಯಲ್ಲಿ ಹೀಗೆ ಹತ್ತು ಹಲವರು ಶುಭಕಾರ್ಯಗಳಲ್ಲಿ ಎಲೆ ಅಡಿಕೆ ಸಂಪ್ರದಾಯ ಇದ್ದೇ ಇರುತ್ತದೆ. ಹಿಂದಿನ ನಾರನ್ನು ತೆಗೆದು ಉಪಯೋಗಿಸುವುದು ಒಳ್ಳೆಯದು ತೊಟ್ಟು ಅಥವಾ ಡೇಟು ಮತ್ತು ಎಲೆಯ ತುದಿಯ ಭಾಗವನ್ನು ತೆಗೆದು ಸಾಧಾರಣವಾಗಿ ಉಪಯೋಗಿಸುತ್ತಾರೆ.

Advertisement

ಹೊಟ್ಟೆ ಸಂಬಂಧಿತ ಸಮಸ್ಯೆ ನಿವಾರಣೆಗೆ ಎಲೆ, ಅಡಿಕೆ ಸೇವನೆ ತುಂಬಾ ಪ್ರಯೋಜನಕಾರಿ. ವೀಳ್ಯದೆಲೆ ಜತೆಗೆ ಅಡಿಕೆ ಸೇವಿನೆಯಿಂದ ಕರುಳು ಸಂಬಂಧಿತ ರೋಗಗಳನ್ನು ತಡೆಗಟ್ಟಬಹುದು. ಹಾಗೆಯೇ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದರೆ, ವೀಳ್ಯದೆಲೆಯನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಅರ್ಧ ಗಂಟೆ ಕುದಿಸಿ. ನಂತರ ಆ ನೀರನ್ನು ಕುಡಿಯಿರಿ. ಕೆಲವೇ ಗಂಟೆಗಳಲ್ಲಿ ಇದು ನಿಮ್ಮ ಹೊಟ್ಟೆ ನೋವಿನ ಸಮಸ್ಯೆಯನ್ನು ನಿವಾರಿಸುತ್ತದೆ.

ನಿಮಗೆ ಮಲಬದ್ಧತೆಯ ಸಮಸ್ಯೆ ಇದ್ದರೆ, ನೀವು ವೀಳ್ಯದೆಲೆಯನ್ನು ಸೇವಿಸಬೇಕು. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಅನೇಕ ಜನರಿಗೆ ಅಲ್ಸರ್ ಸಮಸ್ಯೆ ಬಹಳ ಕಾಡುತ್ತಿರುತ್ತದೆ. ಹಾಗಿರುವಾಗ ವೀಳ್ಯದೆಲೆ ಸೇವನೆಯಿಂದ ಹುಣ್ಣುಗಳ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು.

Advertisement

ವೀಳ್ಯದೆಲೆ ಹಲ್ಲುಗಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ವೀಳ್ಯದೆಲೆಯಿಂದ ಪುಡಿ ತಯಾರಿಸಿ ಅದರಿಂದ ಹಲ್ಲುಗಳಿಗೆ ಮಸಾಜ್ ಮಾಡಿ ಇದರಿಂದ ನಿಮ್ಮ ಹಲ್ಲುನೋವು ಸಮಸ್ಯೆ ನಿವಾರಣೆಯಾಗುತ್ತದೆ. ಜತೆಗೆ ವೀಳ್ಯದೆಲೆ ನಿಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಚರ್ಮದ ಮೇಲೆ ಯಾವುದೇ ಗಾಯವಾಗಿದ್ದರೆ, ಗಾಯವನ್ನು ಗುಣಪಡಿಸಲು ವೀಳ್ಯದೆಲೆ ಸಹಾಯಕ.

ನೀವು ಬೆನ್ನು ನೋವು, ತಲೆ ನೋವು, ಕೀಲು ನೋವಿನಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ವೀಳ್ಯದೆಲೆ ಸೇವಿಸಬಹುದು. ವೀಳ್ಯದೆಲೆ ಔಷಧೀಯ ಗುಣಗಳನ್ನು ಹೊಂದಿದೆ. ಇದು ನಿಮ್ಮ ಸ್ನಾಯುವಿನ ಬಲವನ್ನು ಹೆಚ್ಚಿಸುತ್ತದೆ.

Advertisement

ಮಲೆನಾಡಿನ ಮನೆಗಳಲ್ಲಿ ಕವಳದ ಬಟ್ಟಲು ಇರಲೇಬೇಕು. ಇದು ಸಾಮರಸ್ಯದ ಸಂಕೇತ. ಕವಳ ಮೆಲ್ಲುತ್ತಾ ಮಾತನಾಡುವುದು ಮಲೆನಾಡಿನ ಸಂಪ್ರದಾಯ. ಆದರೆ ಇದರ ಜೊತೆಯಲ್ಲಿ ಸ್ವಲ್ಪ ಸುಣ್ಣವನ್ನು ಉಪಯೋಗಿಸಬೇಕು. ಸುಣ್ಣವಿಲ್ಲದೆ ಎಲೆ ಅಡಿಕೆ ಹಾಕುವುದರಿಂದ ಬಾಯಿ ಮತ್ತು ತುಟಿ ಬಿಳಿಚಿ ಹೋಗುತ್ತದೆ. ಹೆಚ್ಚಾದರೆ ಕಾಮಾಲೆ ಬರುತ್ತದೆ. ಸುಣ್ಣವಿಲ್ಲದ ವೀಳ್ಯ ಬಣ್ಣವಿಲ್ಲದ ಮದುವೆ ಹೆಣ್ಣಿಲ್ಲದವನ ಮನೆವಾರ್ತೆ, ಮರಳೊಳಗೆ ಎಣ್ಣೆ ಹೊಯ್ದಂತಕ್ಕೂ ಸರ್ವಜ್ಞ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ಬದಲಾವಣೆ ಏನಾಗುತ್ತಿದೆ… ?| ಮಳೆ ಇದೆಯಾ..? ತಾಪಮಾನ ಅಧಿಕವೇ..? | ಫೆಬ್ರವರಿ ತಿಂಗಳ ಹವಾಮಾನ ವರದಿ ಹೀಗಿದೆ |
February 19, 2025
6:53 AM
by: ಸಾಯಿಶೇಖರ್ ಕರಿಕಳ
ನೀರು ಉಳಿಸಿ ಅಭಿಯಾನ | 386432 ಘನ ಲೀಟರ್‌ ನೀರು ಸಂರಕ್ಷಣೆ |
February 17, 2025
11:20 PM
by: The Rural Mirror ಸುದ್ದಿಜಾಲ
ಕಾಡಾನೆ ಪುನರ್ವಸತಿ ಕಲ್ಪಿಸಲು “ಸಾಫ್ಟ್ ಏರಿಯಾ ರಿಲೀಸ್” ಯೋಜನೆ  | ಕೊಡಗಿನಲ್ಲಿ  2 ಸಾವಿರ ಹೆಕ್ಟೇರ್ ಪ್ರದೇಶ ಗುರುತು
February 17, 2025
10:41 PM
by: The Rural Mirror ಸುದ್ದಿಜಾಲ
ಬೇಸಿಗೆಯಲ್ಲಿ ವಿದ್ಯುತ್ ಪೂರೈಕೆಗೆ ಇಂಧನ ಇಲಾಖೆ ಸನ್ನದ್ಧ
February 17, 2025
9:32 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror