ಆರೋಗ್ಯ ಹೆಚ್ಚಿಸುವ ಬಸಳೆ ಸೊಪ್ಪು

December 26, 2025
6:16 AM

ತುಳುನಾಡಿನಲ್ಲಿ ಬಸಳೆ ಸೊಪ್ಪು ಪೇಮಸ್ ತರಕಾರಿ. ಈ ಬಸಳೆ ಸೊಪ್ಪಿನಿಂದ ಆರೋಗ್ಯದ ಮೇಲಾಗುವ ಪ್ರಯೋಜನವನ್ನು ತಿಳಿದುಕೊಂಡರೆ ಆರೋಗ್ಯವೂ ಸುಧಾರಣೆಯಾಗುತ್ತದೆ, ಗ್ರಾಮೀಣ ಭಾಗದಲ್ಲಿ ಉತ್ತಮ ವ್ಯವಹಾರ, ಆದಾಯವೂ ಆಗುತ್ತದೆ..

  • ಮೂಳೆಗಳ ಶಕ್ತಿ: ಬಸಳೆ ಸೊಪ್ಪಿನಲ್ಲಿ ವಿಟಮಿನ್ ಏ ಪ್ರಮಾಣ ಅಧಿಕವಾಗಿದೆ. ವಿಟಮಿನ್ , ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ ಮತ್ತು ಮುರಿತದ ಅಪಾಯ ಕಡಿಮೆಯಾಗುತ್ತದೆ. ಬಸಳೆ ಸೊಪ್ಪು ಅಧಿಕ ಕಬ್ಬಿಣಾಂಶವನ್ನು ಹೊಂದಿದೆ. ಜೊತೆಗೆ ಇದರಲ್ಲಿ ವಿಟಮಿನ್ ಸಿ ಯೂ ಹೇರಳವಾಗಿದೆ. ವಿಟಮಿನ್ ಸಿ ಇರುವ ಕಾರಣ ದೇಹವು ಕಬ್ಬಿಣಾಂಶವನ್ನು ಸುಲಭವಾಗಿ ಹೀರಿಕೊಂಡು ರಕ್ತಹೀನತೆಯನ್ನು ತಡೆಯುತ್ತದೆ.
  •  ದೃಷ್ಟಿ ದೋಷ: ಬಸಳೆಯಲ್ಲಿ ವಿಟಮಿನ್ ಎ ಜೊತೆಗೆ ಲುಟೀನ್ ಮತ್ತು ಝೀಕ್ಸಾಂಧಿನ್ ಎಂಬ ಪ್ರಬಲ ಕ್ಯಾರೋಟಿನಾಯ್ಡ್ ಗಳಿವೆ. ಇವು ನೇರಳಾತೀತ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸಿ ವಯಸ್ಸಾದಂತೆ ಬರುವ ದೃಷ್ಟಿ ದೋಷಗಳನ್ನು ತಡೆಯುತ್ತದೆ.
  •  ಉತ್ತಮ ನಿದ್ರೆ: ಬಸಳೆಯಲ್ಲಿರುವ ಮೆಗ್ನಿಷೀಯಮ್ ಮತ್ತು ಇತರ ಖನಿಜಗಳು ನರಮಂಡಲವನ್ನು ಶಾಂತಗೊಳಿಸಿ ಉತ್ತಮ ನಿದ್ರೆಗೆ ಸಹಕರಿಸುತ್ತದೆ.
  •  ಕಾಂತಿಯುತ ಚರ್ಮ: ಬಸಳೆ ಸೊಪ್ಪಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮದ ಜೀವಕೋಶಗಳಿಗೆ ಹಾನಿಯಾಗುವುದನ್ನು ತಡೆಯುತ್ತದೆ.
  • ತೂಕ ಇಳಿಕೆ ಸಹಕಾರಿ: ಕಡಿಮೆ ಕ್ಯಾಲೋರಿ ಗಳನ್ನು ಮತ್ತು ಹೆಚ್ಚಿನ ನೀರಿನಾಂಶವನ್ನು ಹೊಂದಿದೆ. ಇದರಲ್ಲಿರುವ ಅಧಿಕ ಪೈಬರ್ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.
  • ಕರುಳಿನ ಆರೋಗ್ಯ: ಬಸಳೆ ಸೊಪ್ಪಿನಲ್ಲಿ ಕೇವಲ ಪೈಬರ್ ಮಾತ್ರವಲ್ಲ, ಇದು ಪ್ರಿಬಯಾಟಿಕ್ ಗುಣಗಳನ್ನು ಹೊಂದಿದೆ. ಇದು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯ ಮಾಡ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಕಡಲೆ ಬೀಜ ತಿನ್ನುವಾಗ ಈ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಿ..!
January 6, 2026
10:41 PM
by: ರೂರಲ್‌ ಮಿರರ್ ಸುದ್ದಿಜಾಲ
ವಿಕಲಚೇತನರಿಗೆ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳು
January 6, 2026
10:12 PM
by: ರೂರಲ್‌ ಮಿರರ್ ಸುದ್ದಿಜಾಲ
ಮಾತೃ ವಂದನಾ ಯೋಜನೆ – ಗರ್ಭಿಣಿಯರಿಗೆ 6000 ಜಮೆ
January 6, 2026
10:10 PM
by: ರೂರಲ್‌ ಮಿರರ್ ಸುದ್ದಿಜಾಲ
ಅಡಿಕೆ ಪ್ರತ್ಯೇಕಿಸಲು ಎಐ ಚಾಲಿತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ಸಂಸ್ಥೆ
January 6, 2026
9:58 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror