ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವೇ ಪ್ರಯತ್ನ ಮಾಡಬೇಕು. ನಮ್ಮ ಶರೀರ ಎಲ್ಲ ಭಾಗಗಳಿಗೆ ಹೋಲಿಕೆ ಮಾಡಿದರೆ, ಲಿವರ್ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಲಿವರ್ ಸಮಸ್ಯೆಗಳು ಕಂಡುಬಂದಲ್ಲಿ ಅದನ್ನು ಕಡಿಮೆ ಮಾಡಿಕೊಳ್ಳಬಹುದು. ಮನೆಯಲ್ಲೇ ಆಹಾರ ಪದ್ಧತಿಗಳನ್ನು ಸರಿಪಡಿಸಿಕೊಂಡು ಹೋಗಬಹುದು.
- ಕ್ಯಾರೇಟ್: ಇದರಲ್ಲಿ ಬೀಟಾ ಕ್ಯಾರೋಟಿನ್ ಅನ್ನು ಹೊಂದಿರುತ್ತದೆ. ಇದು ದೇಹದಲ್ಲಿ ವಿಟಮಿನ್ ಎ ಆಗಿ ಬದಲಾಗುತ್ತದೆ. ಇದು ಹಾನಿಕಾರಕ ಫ್ರೀ ರಾಡಿಕಲ್‍ಗಳನ್ನು ತಟಸ್ಥಗೊಳಿಸುವ ಮೂಲಕ, ಆಕ್ಸೆಡೇಟಿವ್ ಸ್ಪ್ರೆಸ್ ನಿಧಾನಗೊಳಿಸುತ್ತದೆ.
- ಎಲೆಸೊಪ್ಪು: ಪಾಲಕ್, ಲೆಟಿಸ್‍ನಂತಹ ಎಲೆಗಳ ಸೊಪ್ಪುಗಳು ಜೀವಸತ್ವಗಳು, ಖನಿಜಗಳು, ಕ್ಲೋರೋಫಿಲ್, ವಿಟಮಿನ್ ಇ ನಂತಹ ಪೋಷಕಾಂಶಗಳಿಂದ ತುಂಬಿದೆ. ಇದು ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ.
- ಹೂಕೋಸು; ಈ ತರಕಾರಿಯಲ್ಲಿ ಆಂಟಿಆಕ್ಸಿಡೆಂಟ್, ಗ್ಲುಕೋಸಿನೋಲೇಟ್‍ಗಳಂತಹ ಉತ್ತಮ ಅಂಶಗಳನ್ನು ಹೊಂದಿರುತ್ತದೆ. ಇವು ನೈಸರ್ಗಿಕ ನಿರ್ವಿಷೀಕರಣಕ್ಕೆ ಉರಿಯೂತ ತಗ್ಗಿಸಲು ನೇರವಾಗುತ್ತದೆ.
- ಬೀನ್ಸ್ ಮತ್ತು ದ್ವಿದಳ ಧಾನ್ಯಗಳು: ಬೀನ್ಸ್, ಮಸೂರ, ಬಟಾಣಿಗಳು ಉತ್ತಮ ಪ್ರಮಾಣದ ಫೈಬರ್, ಸಸ್ಯ ಪ್ರೋಟೀನ್ ಅನ್ನು ಒದಗಿಸುತ್ತದೆ. ಈ ಫೈಬರ್ ಕರುಳಿನ ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

