Advertisement
ಸುದ್ದಿಗಳು

ಅಜೀರ್ಣ ಸಮಸ್ಯೆಗಳಿಗೆ ಕೆಲವು ಮನೆಮದ್ದು

Share

ಕಾರ್ಯಕ್ರಮಗಳ ಮೇಲೆ ಕಾರ್ಯಕ್ರಮವಾದರೆ ಹೊಟ್ಟೆಯ ಸಂಕಷ್ಟ ಹೇಳತೀರದು. ಆಹಾರದ ವ್ಯತ್ಯಾಸವಾದರೆ ಅಜೀರ್ಣವೂ ಗ್ಯಾರಂಟಿ. ಮನೆಯಲ್ಲೂ  ಊಟದ ಸಮಯ ತಪ್ಪಿ ತಿಂದರೆ ಸಾಕು ಅಜೀರ್ಣ. ಈ ಅಜೀರ್ಣಕ್ಕೆ ಏನು ಮದ್ದು.. ಮನೆಯಲ್ಲೇ ಏನು ಮಾಡಬಹುದು..?

  1. ಜೀರಿಗೆ ನೀರು ಕುಡಿಯುವುದು: ಒಂದು ಲೋಟ ನೀರಿನಲ್ಲಿ ಒಂದು ಚಮಚ ಜೀರಿಗೆ ಹಾಕಿ ಕುದಿಸಿ. ತಣ್ಣಗಾದ ನಂತರ ನಿಧಾನವಾಗಿ ಕುಡಿಯಿರಿ.ಜೀರಿಗೆಯಲ್ಲಿರುವ ಥೈಮೋಲ್ ಕಿಣ್ವಗಳನ್ನು ಉತ್ತೇಜಿಸಿ ಗ್ಯಾಸ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದನ್ನು ವಾರದಲ್ಲಿ ಎರಡು ಸಲ ಕುಡಿಯುವುದು ಉತ್ತಮ.
  2. ಶುಂಠಿ ಮತ್ತು ಜೇನು : ಸಣ್ಣ ಶುಂಠಿ ತುಂಡನ್ನು ಜಜ್ಜಿ ಅದಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ ಸೇವಿಸಿ. ಶುಂಠಿಯು ಜಠರದ ಚಲನೆಯನ್ನು ಸುಧಾರಿಸಿ, ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ. ಇದರಿಂದ ಅಜೀರ್ಣವನ್ನು ತಡೆಯಲು ಸಾಧ್ಯ.
  3. ಓಮದ ಕಾಳು: ಓಮದ ಕಾಳು ಹೊಟ್ಟೆ ಸಂಬಂಧಿತ ಕಾಯಿಲೆಗಳಿಗೆ ಹೇಳಿ ಮಾಡಿಸಿದ ಮದ್ದು, ಅರ್ಧ ಚಮಚ ಓಮದ ಕಾಳುಗಳನ್ನು ಬಾಯಿಗೆ ಹಾಕಿ ಚೆನ್ನಾಗಿ ಅಗಿಯಿರಿ. ಅಥವಾ ಸ್ವಲ್ಪ ಉಪ್ಪಿನೊಂದಿಗೆ ಬೆರೆಸಿ ಬಿಸಿ ನೀರು ಕುಡಿಯಿರಿ. ಇದು ಥೈಮೋಲ್‍ನ ಹೆಚ್ಚಿ ಸಾಂದ್ರತೆಯಿಂದಾಗಿ ಗ್ಯಾಸ್‍ಗೆ ತ್ವರಿತ ಪರಿಹಾರ ನೀಡುತ್ತದೆ.
  4. ಮಜ್ಜಿಗೆ ಮತ್ತು ಕರಿಮೆಣಸು: ಸೆಕೆ ಇರುವ ಬಿಸಿಲಿನಿಂದ ಮನೆಗೆ ಬಂದಾಗ ಒಂದು ಲೋಟ ಮಜ್ಜಿಗೆ ಕುಡಿದರೆ ಸಾಖು ದೇಹ ತಂಪಾಗುತ್ತದೆ. ಇದು ಅಜೀರ್ಣಗೂ ಹೇಳಿ ಮಾಡಿದೆ ಮದ್ದು. ಒಂದು ಲೋಟ ಮಜ್ಜಿಗೆಗೆ ಚಿಟಿಕೆಯಷ್ಟು ಕರಿಮೆಣಸಿನ ಪುಡಿ ಸೇರಿಸಿದರೆ ಸಾಕು ಜೀರ್ಣಕ್ರಿಯೆ ಸುಧಾರಿಸುತ್ತದೆ.
  5. ಫೆನ್ನೆಲ್ ಬೀಜಗಳು: ಎಲ್ಲ ಹೋಟೆಲ್ ಗಳಲ್ಲಿ ಊಟ ಆದ ನಂತರ ಬಿಲ್ ನೊಂದಿಗೆ ಸೋಂಪನ್ನು ಕೊಡುತ್ತಾರೆ. ಏಕೆಂದರೆ ಇದು ಬಾಯಿಯ ದುರ್ಗಂಧವನ್ನು ಹೊಗಲಾಡಿಸುತ್ತದೆ ಮತ್ತು ಜೀರ್ಣಾಕ್ರಿಯೆಯನ್ನು ಸರಿಪಡಿಸುತ್ತದೆ. ಆದುದರಿಂದ ದಿನಲೂ ಮನೆಯಲ್ಲಿ ಊಟದ ನಂತರ ಸೋಪು ಸೇವನೆ ಉತ್ತಮ.
  6. ಬೆಲ್ಲ: ಊಟದ ನಂತರ ಸಣ್ಣ ತುಂಡು ಬೆಲ್ಲ ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಯಾವಾಗಲೂ ಊಟ ಆದ ತಕ್ಷಣ ಮಲಗಬಾರದು. ಇದರಿಂದ ಆರೋಗ್ಯ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ. ಆದುದರಿಂದ ಸ್ವಲ್ಪ ವಾಕಿಂಗ್ ಮಾಡುವುದು ಉತ್ತಮ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?

ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…

24 hours ago

ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು

ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಗ್ರಾಮೀಣ ಮಹಿಳೆಯರಿಗೆ ಒಂದು ತಿಂಗಳ ಉಚಿತ ಮಗ್ಗಂ…

1 day ago

ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ

ಕರ್ನಾಟಕದ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟ ₹50 ಸಾವಿರ ಕೋಟಿಯಿಂದ ₹60…

1 day ago

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿರುವುದನ್ನು ಮಾತ್ರ ಆಧಾರವಾಗಿಟ್ಟುಕೊಂಡು ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ…

1 day ago

ಹವಾಮಾನ ವರದಿ | 3-10-2026 | ಬಂಗಾಳಕೊಲ್ಲಿಯಿಂದ ತೇವಾಂಶದ ಗಾಳಿ – ಕರ್ನಾಟಕದಲ್ಲಿ ಮತ್ತೆ ಮಳೆ?

ಬಂಗಾಳಕೊಲ್ಲಿಯಿಂದ ತಮಿಳುನಾಡು ಮೂಲಕ ತೇವಾಂಶದ ಗಾಳಿ ರಾಜ್ಯದ ದಕ್ಷಿಣ ಒಳನಾಡಿನತ್ತ ಬೀಸುವ ಸಾಧ್ಯತೆಯಿಂದ…

2 days ago

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?

ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…

2 days ago